ಡೆಹ್ರಾಡೂನ್: ಅಸ್ಸಾಂ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ಹಿಮಂತ ಬಿಸ್ವಾ ಶರ್ಮಾ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಟೀಕಿಸುವ ಭರದಲ್ಲಿ ವಿವಾದಿತ ಹೇಳಿಕೆ ನೀಡಿದ್ದಾರೆ. ರಾಹುಲ್ ಗಾಂಧಿ ಅವರು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಮಗ ಎಂಬುದಕ್ಕೆ ಅವರ ಪಕ್ಷದವರಿಂದ ನಾವು ಪುರಾವೆ ಕೇಳುವುದಿಲ್ಲ ಎಂದು ಟೀಕಿಸಿದ್ದಾರೆ.
ಉತ್ತರಾಖಂಡ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಶರ್ಮಾ, ಸರ್ಜಿಕಲ್ ಸ್ಟ್ರೈಕ್ ಮತ್ತು ಕೋವಿಡ್ ಲಸಿಕೆ ಕುರಿತು ಅನುಮಾನ ವ್ಯಕ್ತಪಡಿಸಿ, ವಿವರಗಳನ್ನು ರಾಹುಲ್ ಗಾಂಧಿ ಅವರು ಕೇಳಿದ್ದರು. ಅದಕ್ಕೆ ಪ್ರತಿಯಾಗಿ ಬಿಸ್ವಾ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಅಪಾರ್ಟ್ಮೆಂಟ್‌ನ ಮೇಲ್ಛಾವಣಿ ಕುಸಿತ – 2 ಸಾವು, 12 ಮಂದಿ ಸಿಲುಕಿರುವ ಭೀತಿ
ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದು ಹಾಗೂ ಕೋವಿಡ್ ಲಸಿಕೆಯ ದೃಢೀಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪುರಾವೆಯನ್ನು ಕೇಳುತ್ತಿದೆ. ನಾವು ಎಂದಾದರು ರಾಹುಲ್ ಗಾಂಧಿ ಅವರ ಬಳಿ ರಾಜೀವ್ ಗಾಂಧಿ ಮಗ ಎಂಬುದಕ್ಕೆ ಪುರಾವೆ ಕೇಳಿದ್ದೇವೆಯೇ ಎಂದು ಪ್ರಶ್ನಿಸಿದ್ದಾರೆ.
ಕೆಲವೊಮ್ಮೆ ಅವರು ಭಾರತ ಒಂದು ರಾಷ್ಟ್ರವಲ್ಲ, ರಾಜ್ಯಗಳ ಒಕ್ಕೂಟ ಎಂದು ಹೇಳುತ್ತಾರೆ. ಇದನ್ನೆಲ್ಲಾ ಕೇಳಿದಾಗ ಜಿನ್ನಾ ಆತ್ಮ ಕಾಂಗ್ರೆಸ್ ಮೇಲೆ ಸೇರಿಕೊಂಡಿದೆ ಎನಿಸುತ್ತದೆ. ಮದರಸಾಗಳು, ಮುಸ್ಲಿಂ ವಿಶ್ವವಿದ್ಯಾಲಯಗಳನ್ನು ತೆರೆಯುವುದು ಸರಿ ಎನ್ನುತ್ತಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಮುಸ್ಲಿಂ ಸಮುದಾಯಕ್ಕೆ ಶಿಕ್ಷಣ ಬೇಕು, ಹಿಜಬ್ ಅಲ್ಲ : ಬಿಸ್ವಾ ಶರ್ಮಾ