ಕೋರ್ಟ್‍ಗೆ ಹಾಜರಾಗಲು ಮಲ್ಯಗೆ ಸುಪ್ರೀಂ ಕೊನೆಯ ಅವಕಾಶ

Public TV
1 Min Read
vijay mallya

ನವದೆಹಲಿ: ಉದ್ಯಮಿ ವಿಜಯ್ ಮಲ್ಯ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣವನ್ನು ಫೆ.24ಕ್ಕೆ ಮುಂದೂಡಿದ್ದು, ಸುಪ್ರೀಂ ಕೋರ್ಟ್, ವೈಯಕ್ತಿಕವಾಗಿ ಅಥವಾ ವಕೀಲರ ಮೂಲಕ ಹಾಜರಾಗಲು ಕೊನೆಯ ಅವಕಾಶವಾಗಿ 2 ವಾರಗಳ ಕಾಲಾವಕಾಶ ನೀಡಿದೆ.

ಒಂದು ವೇಳೆ ವಿಜಯ್ ಮಲ್ಯ ಕೋರ್ಟ್‍ಗೆ ಹಾಜರಾಗದೆ ಇದ್ದರೆ ನ್ಯಾಯಾಲಯವು ಪ್ರಕರಣವನ್ನು ತಾರ್ಕಿಕ ತೀರ್ಮಾನಕ್ಕೆ ಕೊಂಡೊಯ್ಯುತ್ತದೆ ಎಂದು ಹೇಳಿದೆ. ಮೇ ತಿಂಗಳಲ್ಲಿ ಯುಕೆ ಕೋರ್ಟ್ ಎಸ್‍ಬಿಐ ನೇತೃತ್ವದ ಸಾಲದಾತ ಒಕ್ಕೂಟದ ದಿವಾಳಿತನದ ಕುರಿತು ಸಲ್ಲಿಸಿದ್ದ ಅರ್ಜಿಯನ್ನು ಎತ್ತಿ ಹಿಡಿದಿತ್ತು. ಭಾರತದಲ್ಲಿ ಮಲ್ಯ ಅವರ ಆಸ್ತಿಗಳ ಮೇಲಿನ ಭದ್ರತೆಯನ್ನು ಮನ್ನಾ ಮಾಡುವ ಪರವಾಗಿ ಅರ್ಜಿಯನ್ನು ಎತ್ತಿಹಿಡಿದಿತ್ತು. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಬುರ್ಕಾ ಧರಿಸದೇ ಧೈರ್ಯ ಪ್ರದರ್ಶಿಸಿ: ಕಂಗನಾ ರಣಾವತ್

VIJAY MALLYA

ಭದ್ರತಾ ಹಕ್ಕುಗಳನ್ನು ಮನ್ನಾ ಮಾಡುವುದನ್ನು ತಡೆಯುವಂತೆ ಮಲ್ಯ ಪರ ವಕೀಲರು ವಾದ ಮಂಡಿಸಿದ್ದರು. ಆದರೆ ಈ ಮನವಿಯಲ್ಲಿ ಯಾವುದೇ ಸಾರ್ವಜನಿಕ ನೀತಿ ಇಲ್ಲ ಎಂದು ಘೋಷಿಸಿ ಬ್ಯಾಂಕುಗಳ ಪರವಾಗಿ ಚೀಫ್ ಇನ್ಸೋಲ್ವೆನ್ಸೀಸ್ ಆಂಡ್ ಕಂಪನೀಸ್ ಕೋರ್ಟ್ (ಐಸಿಸಿ) ಜಡ್ಜ್ ಮೈಕೆಲ್ ಬ್ರಿಗ್ಸ್ ಆದೇಶ ನಿಡಿದ್ದರು. ಇದನ್ನೂ ಓದಿ: ಕೇಸರಿ ಶಾಲು, ಹಿಜಬ್ ಧರಿಸುವಂತಿಲ್ಲ : ಹೈಕೋರ್ಟ್ ಮಧ್ಯಂತರ ಆದೇಶದಲ್ಲಿ ಏನಿದೆ?

ಭಾರತದಲ್ಲಿನ ವಕೀಲರಿಗೆ ಸೂಚನೆ ನೀಡಲು ಅವಕಾಶ ನೀಡದಿರುವುದು ಆಕ್ರಮಣಕಾರಿ. ಅಲ್ಲದೆ ಭಾರತದಲ್ಲಿ ಈ ಪ್ರಕರಣಗಳು ಪ್ರಗತಿ ಸಾಧಿಸುತ್ತಿಲ್ಲ. ವಿಚಾರಣೆಗಳು ಪ್ರಗತಿ ಸಾಧಿಸದಿರಲು ಹಣದ ಕೊರತೆ ಹಾಗೂ ಕೊರೊನಾ ಪರಿಸ್ಥಿತಿ ಕಾರಣ ಎಂದು ಮಲ್ಯ ಪರ ವಕೀಲ ಮಾರ್ಷಲ್ ಅವರು ಈ ಹಿಂದೆ ಕೋರ್ಟ್‍ಗೆ ತಿಳಿಸಿದ್ದರು.

SUPREME COURT

ಮಲ್ಯ ಈಗಾಗಲೇ ವಂಚನೆ ಮತ್ತು ಮನಿ ಲಾಂಡರಿಂಗ್ ಆರೋಪಗಳಿಗೆ ಭಾರತಕ್ಕೆ ಬೇಕಾಗಿದ್ದಾರೆ. ಗೌಪ್ಯ ಕಾನೂನು ಪ್ರಕ್ರಿಯೆ ಪೂರ್ಣಗೊಂಡಾಗ ಕೋರ್ಟ್‍ನಲ್ಲಿ ಜಾಮೀನಿನ ಮೇಲೆ ಹೊರಗಿದ್ದಾರೆ. ಫೆಬ್ರವರಿ 2019 ರಲ್ಲಿ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಯುಕೆ ಸರ್ಕಾರವು ಆದೇಶಿಸಿತ್ತು.

Share This Article
Leave a Comment

Leave a Reply

Your email address will not be published. Required fields are marked *