ಇಸ್ಲಾಮಾಬಾದ್: ಗಂಡು ಮಗುವಾಗುತ್ತದೆ ಎಂಬ ಮೂಢನಂಬಿಕೆಯಿಂದ ಪಾಕಿಸ್ತಾನದ ಗರ್ಭಿಣಿಯೊಬ್ಬರು ತಲೆಗೆ ಮೊಳೆ ಹೊಡೆದುಕೊಂಡಿರುವ ಪ್ರಸಂಗ ನಡೆದಿದೆ.
ದಕ್ಷಿಣ ಏಷ್ಯಾದಲ್ಲಿ ಹೆಣ್ಣುಮಕ್ಕಳಿಗಿಂತ ಗಂಡು, ಪೋಷಕರಿಗೆ ಉತ್ತಮ ಆರ್ಥಿಕ ಭದ್ರತೆ ಒದಗಿಸುತ್ತಾನೆ ಎಂಬುದು ನಂಬಿಕೆ. ಈ ಹಿನ್ನೆಲೆಯಲ್ಲಿ ಪಾಕ್ ಗರ್ಭಿಣಿಯೊಬ್ಬರು ತಮಗೆ ಗಂಡು ಮಗು ಆಗಲಿ ಎಂದು ಗುಂಡು ಸೂಜಿಯಂತಹ ಮೊಳೆಗಳನ್ನು ತನ್ನ ಹಣೆಗೆ ಹೊಡೆದುಕೊಂಡಿದ್ದಾರೆ ವೈದ್ಯ ಹೈದರ್ ಖಾನ್ ತಿಳಿಸಿದ್ದಾರೆ. ಇದನ್ನೂ ಓದಿ: ಹಿಜಬ್ ಧರಿಸಿದ್ದಕ್ಕಾಗಿ ಭಯಭೀತಗೊಳಿಸುವುದು ದಬ್ಬಾಳಿಕೆ, ಮುಸಲ್ಮಾನರ ಶೋಷಣೆಯಾಗಿದೆ: ಪಾಕ್ ಸಚಿವ
ಮಹಿಳೆಗೆ ಯಾವುದೇ ಮಾನಸಿಕ ಸಮಸ್ಯೆ ಇಲ್ಲ. ಆದರೆ ಅತಿಯಾದ ನೋವಿನಿಂದಾಗಿ ಅವರು ಆಸ್ಪತ್ರೆಗೆ ಬಂದಿದ್ದರು. ಈಕೆಗೆ ಮೂವರು ಹೆಣ್ಣುಮಕ್ಕಳಿದ್ದಾರೆ. ಈಗ ಮತ್ತೆ ಗರ್ಭಿಣಿಯಾಗಿದ್ದು, ಅದು ಕೂಡ ಹೆಣ್ಣು ಎಂದು ವೈದ್ಯರು ಹೇಳಿದ್ದಾರೆ.
ಎಕ್ಸರೇ ತೆಗೆದು ನೋಡಿದಾಗ ಸುಮಾರು 2 ಇಂಚಿನ ಸಣ್ಣ ಮೊಳೆಗಳನ್ನು ಹಣೆಗೆ ಹೊಡೆದುಕೊಂಡಿದ್ದಾರೆ. ಅದೃಷ್ಟವಶಾತ್, ಮಹಿಳೆಯ ಮಿದುಳಿಗೆ ಇದರಿಂದ ಯಾವುದೇ ಹಾನಿಯಾಗಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: 17ರ ಹರೆಯದ ಪತ್ನಿಯ ರುಂಡ ಕತ್ತರಿಸಿ ಬೀದಿಯಲ್ಲಿ ಪ್ರದರ್ಶಿಸಿದ ಪಾಪಿ ಪತಿ..!
ಈ ಕುರಿತು ಪ್ರತಿಕ್ರಿಯಿಸಿರುವ ಪೇಶಾವರ ಪೊಲೀಸರು, ನಾವು ಆಸ್ಪತ್ರೆಯಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿದ್ದೇವೆ. ಶೀಘ್ರದಲ್ಲೇ ಮಹಿಳೆಯನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಅಲ್ಲದೇ ಮಹಿಳೆಗೆ ಸಲಹೆ ನೀಡಿದ ಮಾಂತ್ರಿಕನ ಮೇಲೂ ಸೂಕ್ತ ಕ್ರಮವಹಿಸಲಾಗುವುದು ಎಂದಿದ್ದಾರೆ.