ವಿಪಕ್ಷದಲ್ಲಿರುವ ಕಾಂಗ್ರೆಸ್‍ನ್ನು ಜನ ಅರಬ್ಬಿ ಸಮುದ್ರಕ್ಕೆ ಎಸೆಯುತ್ತಾರೆ: ಆರಗ ಜ್ಞಾನೇಂದ್ರ

Public TV
2 Min Read
Araga Jnanendra 6

– ಡಿಕೆಶಿ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡ್ತಿದ್ದಾರೆ
– ಹಿಜಬ್ ಪ್ರಕರಣದಲ್ಲಿ ಕೆಲವರ ಬಂಧನ

ಬೆಂಗಳೂರು: ಡಿ.ಕೆ ಶಿವಕುಮಾರ್ ಮಾಹಿತಿ ಇಲ್ಲದೇ ಮಾತನಾಡಿದ್ದಾರೆ. ರಾಷ್ಟ್ರ ಧ್ವಜ ಕಾಲೇಜು ಆವರಣದಲ್ಲಿ ಹಾರಾಡುತ್ತಿರಲಿಲ್ಲ. ಅವರು ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಾಗ್ದಾಳಿ ನಡೆಸಿದರು.

ಸುದಿಗಾರರೊಂದಿಗೆ ಮಾತನಾಡಿದ ಅವರು, ಕಾಲೇಜು ಆವರಣದಲ್ಲಿ ರಾಷ್ಟ್ರಧ್ವಜ ಹಾರುತ್ತಿರಲಿಲ್ಲ. ಅದು ಪುರಸಭೆ, ಕೋರ್ಟ್ ಮತ್ತು ವಿಧಾನ ಸೌಧದಲ್ಲಿ ಮಾತ್ರ ರಾಷ್ಟ್ರಧ್ವಜ ಹಾರುತ್ತದೆ. ಡಿಕೆಶಿ ಬೇಜವಾಬ್ದಾರಿ ಮಾತನಾಡಿದ್ದಾರೆ ಎಂದು ಕಿಡಿಕಾರಿದರು.

DKSHI 5

ಘಟನೆ ಹಿಂದೆ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳಿವೆ. ನಿನ್ನೆ ಘಟನೆ ತನಿಖೆ ಆಗುತ್ತಿದೆ. 144 ಅವಶ್ಯಕತೆ ಇರುವ ಕಡೆ ಹಾಕಿದ್ದೇವೆ. ಕಾಂಗ್ರೆಸ್ ದೇಶದಲ್ಲಿ ಬೆಂಕಿ ಹಚ್ಚಲು ಹೋಗಿ ಕಳೆದು ಹೋಗಿದ್ದಾರೆ. ರಾಜ್ಯದಲ್ಲಿ ವಿಪಕ್ಷ ಸ್ಥಾನ ಮಾತ್ರ ಇದೆ. ಹೀಗೆ ಮಾಡಿದರೆ ಇವರ ಪಕ್ಷವನ್ನು ಅರಬ್ಬಿ ಸಮುದ್ರಕ್ಕೆ ಎಸೆಯುತ್ತಾರೆ ಎಂದು ವಾಗ್ದಾಳಿ ನಡೆಸಿದರು.

Congress

ನಿನ್ನೆ ಅಹಿತಕರ ಘಟನೆಗಳು, ಕಾನೂನು ಬಾಹಿರ ಕೆಲಸಗಳು ಆಗಿದ್ದರೆ ಕ್ರಮ ಕೈಗೊಳ್ಳುತ್ತೇವೆ. ಇದರ ಬಗ್ಗೆ ಆಯಾ ಪೊಲೀಸರಿಗೆ ಸೂಚನೆ ಕೊಡಲಾಗಿದೆ. ಹೊರಗಿನ ಕೆಲವರ ಬಂಧನ ಮಾಡಲಾಗಿದೆ. ಇದುವರೆಗೆ ವಿದ್ಯಾರ್ಥಿಗಳನ್ನು ಯಾರನ್ನೂ ಬಂಧಿಸಿಲ್ಲ. ಇದು ಸರ್ಕಾರದ ವೈಫಲ್ಯ ಅಲ್ಲ. ಇದೆಲ್ಲ ಪ್ರತಿಪಕ್ಷಗಳ ಪಿತೂರಿ. ಇದೆಲ್ಲದರ ಹಿಂದೆ ಪ್ರತಿಪಕ್ಷಗಳಿವೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಮಂಡ್ಯದಲ್ಲಿ ‘ಜೈ ಶ್ರೀರಾಮ್’ ಎಂದ ಹುಡುಗರು – ‘ಅಲ್ಲಾಹು ಅಕ್ಬರ್’ ಎಂದ ವಿದ್ಯಾರ್ಥಿನಿ

ಸಿಎಂ ಜೊತೆ ಚರ್ಚೆ: ರಾಜ್ಯದ ಲಾ ಅಂಡ್ ಆರ್ಡರ್ ಸರಿಯಾಗಿ ಫಾಲೋ ಆಗಬೇಕು. ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು. ಪರೀಕ್ಷೆ ನಡೆಸೋದರ ಬಗ್ಗೆ ಪ್ರತಿಯೊಂದರ ಬಗ್ಗೆ ಸಿಎಂ ಜೊತೆ ಚರ್ಚೆಯಾಯಿತು. ವಿದ್ಯಾರ್ಥಿಗಳು ಕಲಿಯಬೇಕೆ ಹೊರೆತು ಕಮ್ಯೂನಲ್ ಆಗಬಾರದು. ಎಲ್ಲಿ ಕಾನೂನುಬಾಹಿರ ಕೆಲಸವಾಗಿದೆ ಅಲ್ಲಿ ಕ್ರಮಜರುಗಿಸಲೇ ಬೇಕು ಎಂದು ತಿಳಿಸಿದರು.

BASAVARJ BOMMAI 6

ಕೋರ್ಟ್‍ನಲ್ಲಿ ಇವತ್ತು ತೀರ್ಪು ಬರಬಹುದು ಎನ್ನುವ ನಿರೀಕ್ಷೆ ಇದೆ. ವಾರದೊಳಗೆ ಈ ಪ್ರಕ್ರಿಯೆ ಮುಗಿಯಬೇಕು. ನೋಡಬೇಕು ಎಷ್ಟು ದಿನದಲ್ಲಿ ತೀರ್ಪು ಬರುತ್ತಿದೆ ಎನ್ನುವುದನ್ನು ಎಂದ ಅವರು, ಇದು ಪ್ರತಿಪಕ್ಷಗಳ ಮಾಡುತ್ತಿರುವ ಪಿತೂರಿಯಾಗಿದೆ. ವಿದ್ಯಾರ್ಥಿಗಳ ಮನಸ್ಸಲ್ಲಿ ಮತೀಯ ಭಾವನೆಗಳನ್ನು ತುಂಬಬಾರದು. ಪ್ರಕರಣ ಕೋರ್ಟ್‍ನಲ್ಲಿ ಇದೆ, ಘಟನೆ ಹಿಂದೆ ಯಾರಿದ್ದಾರೆ ಎನ್ನುವುದನ್ನು ತನಿಖೆ ಆಗುತ್ತಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಬಿಕಿನಿ, ಜೀನ್ಸ್, ಹಿಜಬ್ ಹೀಗೆ ತಾನು ಏನು ಧರಿಸಬೇಕೆಂದು ನಿರ್ಧರಿಸುವುದು ಮಹಿಳೆಯ ಹಕ್ಕು : ಪ್ರಿಯಾಂಕಾ ಗಾಂಧಿ

SHIVAMOGGA COLLEGE KEASRI HIJAB 1

ವಿದ್ಯಾರ್ಥಿಗಳಲ್ಲಿ ಮತೀಯ ಭಾವನೆ ತುಂಬಬೇಡಿ: ವಿದ್ಯಾರ್ಥಿಗಳ ಮನಸ್ಸಲ್ಲಿ ಮತೀಯ ಭಾವನೆಗಳನ್ನು ತುಂಬಬಾರದು. ಪ್ರಕರಣ ಕೋರ್ಟ್‍ಲ್ಲಿ ಇದೆ. ಘಟನೆ ಹಿಂದೆ ಯಾರಿದ್ದಾರೆ ಎನ್ನುವುದರ ಕುರಿತು ತನಿಖೆ ಆಗುತ್ತಿದೆ. ಪೊಲೀಸರು ಬಹಳ ಸಂಯಮದಿಂದ ವರ್ತಿಸಿದ್ದಾರೆ. ದೇಶ ಒಡೆಯುವ ಕೆಲಸ ಆಗಬಾರದು. ಸ್ವಾತಂತ್ರ ಪೂರ್ವ ಘಟನೆ ಮರುಕಳಿಸಬಾರದು ಎಂದ ಅವರು, ಈ ಆಟದ ಹಿಂದೆ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಇವೆ ಎಂದು ಕಿಡಿಕಾರಿದರು.

Share This Article
Leave a Comment

Leave a Reply

Your email address will not be published. Required fields are marked *