ಕೇಸರಿ ಪೇಟ, ಕೇಸರಿ ಶಾಲಿನೊಂದಿಗೆ ಕಾಲೇಜಿಗೆ ಬಂದ ಎಂಜಿಎಂ ವಿದ್ಯಾರ್ಥಿಗಳು!

Public TV
1 Min Read
UDP 4

ಉಡುಪಿ: ರಾಜ್ಯದಲ್ಲಿ ಹಿಜಬ್- ಕೇಸರಿ ಫೈಟ್ ಜೋರಾಗಿದ್ದು, ಇಂದು ಹೈಕೋರ್ಟ್ ನಲ್ಲಿ ಮಹತ್ವದ ವಿಚಾರಣೆ ನಡೆಯಲಿದೆ. ಈ ಮಧ್ಯೆ ವಿದ್ಯಾರ್ಥಿಗಳು ಮಾತ್ರ ತಮ್ಮ ಹೋರಾಟ ಮುಂದುವರಿಸುತ್ತಲೇ ಇದ್ದಾರೆ. ಇಂದು ನಗರದ ಎಂಜಿಎಂ ಕಾಲೇಜಿನ ವಿದ್ಯಾರ್ಥಿಗಳು ಕೇಸರಿ ಪೇಟ, ಶಾಲಿನೊಂದಿಗೆ ಕಾಲೇಜಿಗೆ ಆಗಮಿಸಿದ್ದಾರೆ.

UDP 3 1

ಬುರ್ಖಾ, ಹಿಜಬ್ ಧರಿಸಿ ವಿದ್ಯಾರ್ಥಿನಿಯರು ಬಂದರೆ, ಕೇಸರಿ ಪೇಟ, ಕೇಸರಿ ಶಾಲು ತೊಟ್ಟು ವಿದ್ಯಾರ್ಥಿಗಳು ಕಾಲೇಜಿಗೆ ಬಂದಿದ್ದಾರೆ. ಈ ವೇಳೆ ಆಡಳಿತ ಮಂಡಳಿ ಗೇಟ್ ಗೆ ಬೀಗ ಹಾಕಿದೆ. ಕೇಸರಿ ಪೇಟ ತೊಟ್ಟ ಹಿಂದೂ ವಿದ್ಯಾರ್ಥಿಗಳು ಆವರಣದ ಹೊರಕ್ಕೆ ಇದ್ದು, ಬೀಗ ತೆಗೆಯಲು ಕಾಯುತ್ತಿದ್ದಾರೆ. ಇದನ್ನೂ ಓದಿ: ಧರ್ಮವನ್ನು ಮನೆಗಳಲ್ಲಿ ಆಚರಿಸಿ, ಶಿಕ್ಷಣಕ್ಕೆ ತರಬೇಡಿ: ಸುರಯ್ಯ ಅಂಜುಮ್

UDP 2 1

ರಾಜ್ಯಾದ್ಯಂತ ಹಿಜಬ್ ಧರಿಸುವ ಹಕ್ಕಿಗಾಗಿ ಹೋರಾಟ ನಡೆಯುತ್ತಿದೆ. ಸರ್ಕಾರಿ ಪದವಿ ಪೂರ್ವ ಕಾಲೇಜಿನ 8 ವಿದ್ಯಾರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಧಾರ್ಮಿಕ ಹಕ್ಕು ಎರಡು ಧರ್ಮಗಳ ನಡುವೆ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದ್ದು ಇಂದು ಪ್ರಕರಣದ ವಿಚಾರಣೆ ಆರಂಭವಾಗಲಿದೆ. ಹೀಗಾಗಿ ಇಡೀ ರಾಜ್ಯದ ಚಿತ್ತ ಹೈಕೋರ್ಟ್‍ನತ್ತ ನೆಟ್ಟಿದೆ. ಇದನ್ನೂ ಓದಿ: ಧಮ್ ಇದ್ರೆ ಮಸೀದಿಗೆ ಮುಸ್ಲಿಂ ಮಹಿಳೆಗೆ ಪ್ರವೇಶ ಕೊಡಿಸಿ- ಶಾಸಕಿಗೆ ಈಶ್ವರಪ್ಪ ಸವಾಲು

UDP 1

ಉಡುಪಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಬ್‍ಗೆ ನಿರ್ಬಂಧ ಹೇರಿದ್ದನ್ನ ವಿರೋಧಿಸಿ, ಕೆಲ ವಿದ್ಯಾರ್ಥಿನಿಯರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇವತ್ತು ಹೈಕೋರ್ಟ್ ಕಟಕಟೆಗೆ ಈ ಪ್ರಕರಣ ಬರಲಿದೆ. ಸುಪ್ರೀಂಕೋರ್ಟ್, ಕೇರಳ, ಮದ್ರಾಸ್ ಹೈಕೋರ್ಟ್‍ಗಳು ಇಂಥದ್ದೇ ಪ್ರಕರಣಗಳಲ್ಲಿ ವಸ್ತ್ರ ಸಂಹಿತೆಯನ್ನ ಎತ್ತಿ ಹಿಡಿದಿವೆ. ಹೀಗಾಗಿ ಉಡುಪಿ ಪ್ರಕರಣದಲ್ಲಿ ಹೈಕೋರ್ಟ್ ಯಾವ ಆದೇಶ ನೀಡಲಿದೆ ಅನ್ನೋದು ಎಲ್ಲರ ಕುತೂಹಲ ಕೆರಳಿಸಿದೆ. ಇದನ್ನೂ ಓದಿ: ಹಿಜಬ್‍ಗೆ ಅನುಮತಿ ನೀಡಿ – ಈಗ ನೀಲಿ ಶಾಲು ಧರಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

Share This Article
Leave a Comment

Leave a Reply

Your email address will not be published. Required fields are marked *