ಲಕ್ನೋ: ಪತ್ನಿ ತವರು ಮನೆಯಿಂದ ವರದಕ್ಷಿಣೆ ತಂದಿಲ್ಲ ಎಂದು ಪತಿ ಕಿರುಕುಳ ನೀಡಿ ಆ್ಯಸಿಡ್ ಕುಡಿಸಿ ಆಕೆಯನ್ನು ಕೊಂದಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಸಂತ್ರಸ್ತೆಯನ್ನು ರೇಷ್ಮಾ ಎಂದು ಗುರುತಿಸಲಾಗಿದೆ. ಈಕೆಗೆ ತವರು ಮನೆಯಿಂದ ವರದಕ್ಷಿಣೆ ತಂದಿಲ್ಲವೆಂದು ಪತಿ ಮತ್ತು ಆತನ ಕುಟುಂಬಸ್ಥರು ಕಿರುಕುಳ ನೀಡುತ್ತಿದ್ದರು. ನ್ಯೂ ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ರಾಥೇಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಖಡ್ಗ, ಭಯ, ದಬ್ಬಾಳಿಕೆಯಿಂದ ತನ್ವೀರ್ ಸೇಠ್ ಆಗಿದ್ದಾರೆ: ಪ್ರತಾಪ್ ಸಿಂಹ
ವರದಕ್ಷಿಣೆ ನೀಡುವಂತೆ ರೇಷ್ಮಾ ಪತಿ ಮನೆಯವರು ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದರು. ಒಂದು ದಿನ ಚಿತ್ರ ಹಿಂಸೆ ನೀಡಿದ್ದಾರೆ. ಆಕೆ ಪತಿ ಹಾಗೂ ಮನೆ ಮಂದಿ ಎಲ್ಲರೂ ಸೇರಿ ಆಕೆಗೆ ಆ್ಯಸಿಡ್ ಕುಡಿಸಿದ್ದಾರೆ. ಹೀಗಾಗಿ ರೇಷ್ಮಾ ಸಾವನ್ನಪ್ಪಿದ್ದಾರೆ ಎಂದು ರೇಷ್ಮಾ ಕುಟುಂಬದವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದನ್ನೂ ಓದಿ: ದೇಶವನ್ನು ಒಡೆದು ಆಳುವ ಕಾಂಗ್ರೆಸ್ ತುಕ್ಡೆ ತುಕ್ಡೆ ಗ್ಯಾಂಗ್ ಲೀಡರ್: ನರೇಂದ್ರ ಮೋದಿ
ಗಂಡನ ಮನೆಯಲ್ಲಿ ರೇಷ್ಮಾ ಮೃತದೇಹವನ್ನು ವಶಪಡಿಸಿಕೊಂಡಾಗ ಆಕೆಯ ಮುಖದ ಮೇಲೆ ಸುಟ್ಟ ಗಾಯದ ಗುರುತುಗಳಿದ್ದವು. ಕುಟುಂಬಸ್ಥರು ದೂರು ನೀಡಿದ್ದಾರೆ ತನಿಖೆ ಕೈಗೊಂಡಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.