ಚೀನಾ ನಿರ್ಮಿತ 216 ಅಡಿ ಎತ್ತರದ ರಾಮಾನುಜಾಚಾರ್ಯರ ಸಮತಾ ಮೂರ್ತಿ ಲೋಕಾರ್ಪಣೆ

Public TV
2 Min Read
Ramanujacharya Statue Of Equality

ಹೈದರಾಬಾದ್: ವಿಶಿಷ್ಟಾದ್ವೈತ ಸಿದ್ಧಾಂತದ ಪ್ರತಿಪಾದಕ ರಾಮಾನುಜಾಚಾರ್ಯರ ಸಹಸ್ರಾಬ್ಧಿ ಪ್ರಯುಕ್ತ ಹೈದ್ರಾಬಾದ್‍ನ ಮುಚ್ಚಿಂತಲದಲ್ಲಿ ಸಮತಾವಾದಿಯ 216 ಅಡಿ ಎತ್ತರದ ಬೃಹತ್ ಮೂರ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ್ದಾರೆ.

Ramanujacharya Statue Of Equality 1

ರಾಮಾನುಜಾಚಾರ್ಯರ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದ ನರೇಂದ್ರ ಮೋದಿ, ರಾಮಾನುಜಾರ ಜ್ಞಾನ ಇಡೀ ವಿಶ್ವಕ್ಕೆ ವ್ಯಾಪಿಸಲಿದ್ದು, ನಾವು ಮಾನವೀಯ ಶಕ್ತಿಗೆ ಪ್ರೇರೆಪಣೆ ನೀಡಿದೆ. ಮುಂದಿನ ಪೀಳಿಗೆಗೆ ಈ ಪುರಾತನ ಸಂಸ್ಕೃತಿಯನ್ನು ಬಿಂಬಿಸಲು ಈ ಪ್ರತಿಮೆ ದಾರಿ ದೀಪವಾಗಲಿದೆ. ಸಮಾನತೆಯ ಪ್ರತಿಮೆ ಯುವಕರನ್ನು ಸ್ಫೂರ್ತಿಗೊಳಿಸುತ್ತದೆ. ರಾಮಾನುಜಾಚಾರ್ಯರ ಈ ಪ್ರತಿಮೆ ಅವರ ಜ್ಞಾನ, ನಿರ್ಲಿಪ್ತತೆ ಮತ್ತು ಆದರ್ಶಗಳ ಸಂಕೇತವಾಗಿದೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ವಿಶ್ವದ ಎತ್ತರದ ರಾಮಾನುಜಾಚಾರ್ಯರ ಪ್ರತಿಮೆ – ಇಂದು ಪಿಎಂ ಉದ್ಘಾಟನೆ

Ramanujacharya Statue Of Equality 3

ಸಾವಿರ ಕೋಟಿ ವೆಚ್ಚದಲ್ಲಿ ರಾಮಾನುಜಾಚಾರ್ಯರ ಈ ಬೃಹತ್ ಮೂರ್ತಿಯನ್ನು ಚೀನಾದ ಕಂಪನಿಯೊಂದು ನಿರ್ಮಿಸಿಕೊಟ್ಟಿದೆ. ವಿಗ್ರಹದ ಜೊತೆಗೆ ಚಿನ್ನಜಿಯಾರ್ ಸ್ವಾಮೀಜಿ ಆಶ್ರಮದಲ್ಲಿ ರಾಮುನುಜರ ಜೀವನ ಚರಿತ್ರೆ. ಸಂದೇಶಗಳನ್ನು ವಿವರಿಸುವ ಗ್ಯಾಲರಿ, ವೈದಿಕ್ ಭವನಕ್ಕೆ ಮೋದಿ ಚಾಲನೆ ನೀಡಿದ್ದಾರೆ. ಇದನ್ನೂ ಓದಿ: ಕೃಷಿ ವಲಯವನ್ನು ರಕ್ಷಿಸಲು, ಬಲಪಡಿಸಲು ಡಿಜಿಟಲ್ ಕೃಷಿ, ಹವಾಮಾನ ಕ್ರಮ: ಮೋದಿ

Ramanujacharya Statue Of Equality 2

ಸಮತಾ ಮೂರ್ತಿ ವಿಶೇಷತೆ:
ಧ್ಯಾನ ಮುದ್ರೆಯಲ್ಲಿ ರಾಮಾನುಜಾಚಾರ್ಯರು 216 ಅಡಿ ಎತ್ತರದ ಮೂರ್ತಿ ಇದಾಗಿದೆ. ವಾಸ್ತವದಲ್ಲಿ ವಿಗ್ರಹದ ಎತ್ತರ 108 ಅಡಿ ಆಗಿದ್ದು, ರಾಮಾನುಜರ ಕೈಯಲ್ಲಿರುವ ತ್ರಿದಂಡವೂ ಸೇರಿ 135 ಅಡಿ ಎತ್ತರವಿದೆ. ವೇದಿಕೆಯ ಎತ್ತರ 54 ಅಡಿ, ಪದ್ಮಪೀಠದ ಎತ್ತರ 27 ಅಡಿ ಇದ್ದು, ದ್ರಾವಿಡ ರಾಜ್ಯಗಳ ಶಿಲ್ಪಗಳ ಮಾದರಿಯಲ್ಲಿ ವಿಗ್ರಹದ ರಚನೆಯಾಗಿದೆ. 7 ಸಾವಿರ ಟನ್ ಪಂಚಲೋಹಗಳಾದ ಬಂಗಾರ, ಬೆಳ್ಳಿ, ತಾಮ್ರ, ಕಂಚು, ಸೀಸ ಸೇರಿ ವಿಗ್ರಹ ರೂಪುಗೊಂಡಿದ್ದು, 100 ಕೋಟಿ ವೆಚ್ಚದ ವಿಗ್ರಹ ತಯಾರಾಗಿದ್ದು, 130 ಕೋಟಿ ರೂ. ತೆರಿಗೆ ಕಟ್ಟಲಾಗಿದೆ. ಚೀನಾದ ಏರೋಜನ್ ಕಾರ್ಪೋರೇಷನ್‍ನಿಂದ ವಿಗ್ರಹ ನಿರ್ಮಾಣ ಮಾಡಿದೆ. ಇದನ್ನೂ ಓದಿ: ‘ಏನ್ಷಿಯೆಂಟ್ ಸೀಕ್ರೆಟ್ಸ್ ಟು ರಿವರ್ಸ್ ಡಯಾಬಿಟೀಸ್’ ಕೃತಿ ಬಿಡುಗಡೆ ಮಾಡಿದ ಸಿಎಂ

Ramanujacharya Statue Of Equality 4

216 ಅಡಿ ಎತ್ತರದ ಬೃಹತ್ ಪ್ರತಿಮೆಯು ವಿಶ್ವದ ಎರಡನೇ ಅತೀ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. 135 ಕೋಟಿ ಮೊತ್ತದ ಈ ಯೋಜನೆಯನ್ನು ಜಾಗತಿಕವಾಗಿ ಇರುವ ಭಕ್ತ ಜನರ, ದಾನಿಗಳ ನಿಧಿ ಸಂಗ್ರಹಣೆಯ ಮೊತ್ತದಿಂದ ನಿರ್ಮಿಸಲಾಗಿದೆ. ಇಲ್ಲಿ 108 ದಿವ್ಯ ದೇಶ, 108 ಸುಂದರ ವಿಷ್ಣು ದೇಗುಲಗಳು ಇವೆ. ತಮಿಳು ಸಂತರಾದ ಆಳ್ವಾರರು ಉಲ್ಲೇಖಿಸಿರುವ ರೀತಿಯಲ್ಲೇ ರಾಮಾನುಜರ ಪ್ರತಿಮೆ ನಿರ್ಮಾಣಗೊಂಡಿದೆ. ರಾಮಾನುಜಾರು ಸನಾತನ ಸಂಸ್ಕೃತಿ ಉಳಿವಿಗಾಗಿ ಮತ್ತು ಅಸಮಾನತೆಯನ್ನು ಹೋಗಲಾಡಿಸಿ ಸಮಾನತೆಯನ್ನು ಪ್ರತಿಪಾದಿಸಿದವರು ಹಾಗಾಗಿ ಅವರ ಪ್ರತಿಮೆಗೆ ಸಮಾನತೆಯ ಪ್ರತಿಮೆ ಎಂದು ನಾಮಕರಣ ಮಾಡಲಾಗಿದೆ. ಈ ಪ್ರತಿಮೆ ಪ್ರದೇಶ 200 ಎಕರೆ ಜಾಗದಲ್ಲಿ ಆವರಿಸಿಕೊಂಡಿದೆ.

Share This Article
Leave a Comment

Leave a Reply

Your email address will not be published. Required fields are marked *