ನವದೆಹಲಿ: ಕೊರೊನಾ ವೈರಸ್ ಸಂಕಷ್ಟದಿಂದ ಕೆಲಸ ಕಳೆದುಕೊಂಡಿದ್ದ ನಿರುದ್ಯೋಗಿಗಳಿಗೆ ಚುನಾವಣೆಗಳು ಉದ್ಯೋಗ ಒದಗಿಸುತ್ತಿವೆ. ಐದು ರಾಜ್ಯಗಳಲ್ಲಿ ನಡೆಯುತ್ತಿರುವ ಚುನಾವಣೆ ಹಲವು ಜನರಿಗೆ ವಿವಿಧ ರೀತಿಯ ಉದ್ಯೋಗ ನೀಡಿವೆ.
ಕೋವಿಡ್ ಸಂಕಷ್ಟದ ಹಿನ್ನೆಲೆ ಕೇಂದ್ರ ಚುನಾವಣಾ ಆಯೋಗ ರ‍್ಯಾಲಿಗಳನ್ನು ಬ್ಯಾನ್ ಮಾಡಿದೆ. ಜನವರಿ 11 ವರೆಗೂ ಬೃಹತ್ ಸಮಾವೇಶಗಳನ್ನು ನಡೆಸಲು ಅವಕಾಶ ನೀಡಿಲ್ಲ. ಹೀಗಾಗಿ ರಾಜಕೀಯ ಪಕ್ಷಗಳು ಜನರನ್ನು ತಲುಪುವ ಸಲುವಾಗಿ ಹೊಸ ಪ್ರಯತ್ನಗಳನ್ನು ಮಾಡುತ್ತಿದ್ದು, ಇದರಿಂದ ಹಲವು ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ನೀಡಿದೆ.
ಚುನಾವಣಾ ಪ್ರಚಾರದಲ್ಲಿ ಡಿಜಿಟಲ್ ಪ್ರಚಾರಕ್ಕೆ ಆದ್ಯತೆ ಸಿಕ್ಕಿದ್ದು, ಸೋಶಿಯಲ್ ಮೀಡಿಯಾ ನಿಭಾಯಿಸುವ, ಚಿತ್ರೀಕರಣ ಗೊತ್ತಿರುವ ವೀಡಿಯೋ ಎಡಿಟಿಂಗ್ ಬಲ್ಲ ಯುವಕರನ್ನು ಪಕ್ಷಗಳು ಹುಡುಕಿ ಕೆಲಸ ನೀಡುತ್ತಿವೆ. ಇದರಲ್ಲಿ ಗ್ರಾಮೀಣ ಭಾಗದಲ್ಲಿರುವ ಯುವಕರನ್ನು ಸೆಳೆಯುವ ಪ್ರಯತ್ನ ಹೆಚ್ಚಿದೆ. ಇದನ್ನೂ ಓದಿ: ನಕ್ಸಲ್ ನಿಗ್ರಹ ದಳ ಸಿಬ್ಬಂದಿಗೆ ವಿಶೇಷ ಆಹಾರ ಭತ್ಯೆ ಹೆಚ್ಚಿಸಿದ ಸರ್ಕಾರ
ಹೀಗೆ ಆಯ್ಕೆಯಾಗುವ ಯುವಕರು, ಪ್ರತಿನಿತ್ಯ ಹದಿನೈದು ಪೋಸ್ಟ್ ಗಳನ್ನು ಮಾಡಬೇಕು. ಅವುಗಳನ್ನು ಫೇಸ್‍ಬುಕ್, ಟ್ವಿಟರ್ ಸೇರಿದಂತೆ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಬೇಕು. ಅಲ್ಲದೇ ಈ ಪೋಸ್ಟ್ ಗಳನ್ನು ಉಳಿದ ನಾಯಕರು ಶೇರ್ ಮಾಡಲು ಪ್ರೇರೇಪಿಸಬೇಕು. ಉಳಿದಂತೆ ವಾಟ್ಸಾಪ್ ಗ್ರೂಪ್ ಗಳನ್ನು ಕ್ರಿಯೇಟ್ ಮಾಡಿ ಜನರನ್ನು ತಲುಪುವ ಕೆಲಸ ಮಾಡಬೇಕಿದೆ. ಇದನ್ನೂ ಓದಿ: ನಾಳೆಯಿಂದ ಥಿಯೇಟರ್ ಹೌಸ್ ಫುಲ್- ಸರ್ಕಾರದಿಂದ ಅನುಮತಿ
ಸದ್ಯ ಕೊರೊನಾದಿಂದ ಕೆಲಸ ಕಳೆದುಕೊಂಡು ಊರುಗಳಿಗೆ ವಾಪಸ್ ಆಗಿರುವ ಯುವಕರು ಈ ತಾತ್ಕಾಲಿಕ ಕೆಲಸ ಆಯ್ದುಕೊಳ್ಳಲಿದ್ದು ಮಾರ್ಚ್ 10ರ ವರೆಗೂ ಒಪ್ಪಂದ ಮಾಡಿಕೊಳ್ಳಲಾಗಿದೆಯಂತೆ.