ಭಾರತಕ್ಕಾಗಿ ಚಿಂತನಶೀಲ ನೀತಿ ಕಾರ್ಯಸೂಚಿ: ಬಜೆಟ್‌ ಬಗ್ಗೆ IMF ಮುಖ್ಯಸ್ಥೆ ಪ್ರತಿಕ್ರಿಯೆ

Public TV
1 Min Read
Kristalina Georgieva

ವಾಷಿಂಗ್ಟನ್‌: ಭಾರತ ಸರ್ಕಾರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಫೆ.1ರಂದು ಬಜೆಟ್‌ ಮಂಡಿಸಿದರು. ಭಾರತಕ್ಕಾಗಿ ಚಿಂತನಶೀಲ ನೀತಿ ಕಾರ್ಯಸೂಚಿ ಇದಾಗಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಮುಖ್ಯಸ್ಥೆ ಕ್ರಿಸ್ಟಿಲಿನಾ ಜಿಯೊರ್ಜಿವಾ ಬಣ್ಣಿಸಿದ್ದಾರೆ.

ಕೇಂದ್ರ ಬಜೆಟ್‌ ಭಾರತಕ್ಕೆ ಅತ್ಯಂತ ಚಿಂತನಶೀಲ ನೀತಿ ಅಜೆಂಡಾವಾಗಿದೆ. ಮಾನವ ಬಂಡವಾಳ ಹೂಡಿಕೆ ಮತ್ತು ಡಿಜಿಟಲೀಕರಣದ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ನಾವೀನ್ಯತೆಗೆ ಹೆಚ್ಚಿನ ಒತ್ತು ನೀಡಿದೆ ಎಂದು ಕ್ರಿಸ್ಟಿಲಿನಾ ತಿಳಿಸಿದ್ದಾರೆ. ಇದನ್ನೂ ಓದಿ: Budget 2022 : ಚುನಾವಣಾ ಓಲೈಕೆ ಇಲ್ಲದ, ಜನಪ್ರಿಯ ಘೋಷಣೆಗಳಿಲ್ಲದ ಬಜೆಟ್‌

Kristalina Georgieva modi medium

ಭಾರತದ ಅಭಿವೃದ್ಧಿಗೆ ನಾವು ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದಾರೆ. 2022ಕ್ಕೆ ಭಾರತದ ಜಿಡಿಪಿ ಶೇ.9.5ರಿಂದ ಶೇ.9ಕ್ಕೆ ಸ್ವಲ್ಪ ಪ್ರಮಾಣದ ಇಳಿಕೆ ಕಂಡಿದೆ. ಆದರೆ 2023ಕ್ಕೆ ಇದನ್ನು ಮತ್ತಷ್ಟು ಹೆಚ್ಚಿಸಲು ಸಾಕಷ್ಟು ಯೋಜನೆಗಳಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಐಎಂಎಫ್‌ ಇದನ್ನು ಹಲವಾರು ಅಂಶಗಳ ಮೇಲೆ ಷರತ್ತುಬದ್ಧವಾಗಿ ನೋಡುತ್ತದೆ. ಕೋವಿಡ್‌ ಸಾಂಕ್ರಾಮಿಕದಲ್ಲಿ ಭಾರತ ಉತ್ತಮವಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸಿದೆ. ಸೂಕ್ತ ಮಾರ್ಗದರ್ಶನ ಮತ್ತು ವಿವೇಕಯುತ ರೀತಿಯಲ್ಲಿ ನಡೆಯುತ್ತಿದ್ದು, ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: Budget 2022 : ಮೋದಿ ಸೂಚನೆಯಂತೆ ಜನರಿಂದ ಹೆಚ್ಚುವರಿ ತೆರಿಗೆ ಸಂಗ್ರಹ ಇಲ್ಲ

Nirmala Sitharaman 1

ಭಾರತವು ಅಲ್ಪಾವಧಿ ಸಮಸ್ಯೆಗಳನ್ನು ಪರಿಹರಿಸಲು ಯೋಜಿಸುತ್ತಿದೆ. ಆದರೆ ಅದು ದೀರ್ಘಾವಧಿಯ ರಚನಾತ್ಮಕ ರೂಪಾಂತರವೂ ಆಗಿದೆ. ಮಾನವ ಬಂಡವಾಳ ಹೂಡಿಕೆ ಮತ್ತು ಡಿಜಿಟಲೀಕರಣದ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ನಾವೀನ್ಯತೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *