ಪಕ್ಷದ ನಾಯಕರು ಬೇರೆ ಪಕ್ಷದ ಸದಸ್ಯರ ಆಂತರಿಕ ವಿಚಾರದಲ್ಲಿ ಹೇಳಿಕೆ ಕೊಡಬಾರದು: ಡಿಕೆಶಿ

Public TV
2 Min Read
d k shivakumar hassana

ಹಾಸನ: ನಮ್ಮ ಪಕ್ಷದ ನಾಯಕರು ಬೇರೆ ಪಕ್ಷದ ಸದಸ್ಯರ ಆಂತರಿಕ ವಿಚಾರದಲ್ಲಿ ಹೇಳಿಕೆ ಕೊಡಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿನಂತಿಸಿಕೊಂಡಿದ್ದಾರೆ.

d k shivakumar hassana 5

ಹಾಸನ ತಾಲೂಕಿನ ಬೀಕನಹಳ್ಳಿ ಗ್ರಾಮದಲ್ಲಿರುವ ಪುರದಮ್ಮ ದೇವಾಲಯಕ್ಕೆ ಪುತ್ರಿ ಹಾಗೂ ಅಳಿಯನೊಂದಿಗೆ ಆಗಮಿಸಿ ಪೂಜೆ ಸಲ್ಲಿಸಿದ್ದಾರೆ. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಹಿಂದೆ ಒಂದು ದಿನ ಇಲ್ಲಿಗೆ ಬಂದು ದೇವರ ದರ್ಶನ ಮಾಡಿ ಹೋಗಿದ್ದೆ. ಇವತ್ತು ಖಾಸಗಿಯಾಗಿ ಬಂದಿದ್ದೇನೆ. ನನ್ನ ಅನೇಕ ಸ್ನೇಹಿತರೆಲ್ಲ ದೇವಿಗೆ ಹರಕೆ ಮಾಡಿಕೊಂಡಿದ್ದರು. ಹರಕೆ ಪ್ರಕಾರ ನಮಗೆ ಫಲ ಸಿಕ್ಕಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮುಂದಿನ ವಾರ ಕನ್ನಡಪರ ಸಂಘಟನೆಗಳ ಸಭೆ ಕರೆದ ಹೆಚ್.ಡಿ.ಕುಮಾರಸ್ವಾಮಿ

d k shivakumar hassana 3

ನಾವು ಯಾರ ಬಗ್ಗೆಯೂ ಟೀಕೆ ಮಾಡಲ್ಲ. ಅಭಿನಂದಿಸುವುದೂ ಇಲ್ಲ. ಅದರ ಬಗ್ಗೆ ನಾವು ಅಭಿಪ್ರಾಯ ತಿಳಿಸುವುದಿಲ್ಲ. ಇವತ್ತೇ ಹೇಳುತ್ತಿದ್ದೇನೆ, ನಮ್ಮ ಪಾರ್ಟಿಯವರು ಯಾರೇ ಆಗಲಿ, ಬೇರೆ ಪಾರ್ಟಿಯ ಆಂತರಿಕ ವಿಚಾರದಲ್ಲಿ ಯಾರೂ ಹೇಳಿಕೆ ಕೊಡಬಾರದು. ಯಾರೂ ಕಾಮೆಂಟ್ ಮಾಡಬಾರದು ಎಂದು ಕೈ ನಾಯಕರಲ್ಲಿ ಕೇಳಿಕೊಳ್ಳುತ್ತಿದ್ದೇನೆ ಎಂದರು.

d k shivakumar hassana 4

ನಾನು ಕಷ್ಟ ಕಾಲದಲ್ಲಿದ್ದ ಸಂದರ್ಭದಲ್ಲಿ ಇಲ್ಲಿಗೆ ಬಂದು ಹೋಗಿದ್ದೇನೆ. ಭಕ್ತನಿಗೂ, ಭಗವಂತನಿಗೂ ವ್ಯವಹಾರ ನಡೆಯುವಂತಹ ಸ್ಥಳ, ನೋವು ಹೇಳಿಕೊಳ್ಳುವಂತಹ ಸ್ಥಳ ಇದಾಗಿದೆ. ದುಃಖ, ಸಂತೋಷ ಎಲ್ಲ ಹೇಳಿಕೊಳ್ಳುವ ಸ್ಥಳ ದೇವಾಲಯ. ನಮ್ಮ ಮನೆಯಲ್ಲಿಯೂ ಚಿಕ್ಕ ದೇವಾಲಯವಿದೆ. ಆ ದೇವಿ ಮುಂದೆ ನಮ್ಮ ಕಷ್ಟಗಳನ್ನು ಹೇಳಿಕೊಳ್ಳುತ್ತೇವೆ ಎಂದರು.

d k shivakumar hassana 2

ಏನೂ ಸಿಕ್ಕಲಿಲ್ಲ ಎಂದರೆ ಆಕಾಶ, ಬೆಳಕು ನೋಡಿ ಕೇಳಿಕೊಳ್ಳುತ್ತೇವೆ. ದೇವಾಲಯಕ್ಕೆ ಬಂದಾಗ ದೇವರಿಗೆ ನಮ್ಮೆಲ್ಲಾ ಸಮಸ್ಯೆಗಳು, ರಾಜ್ಯದ ಸಮಸ್ಯೆಗಳು, ಆರೋಗ್ಯ ಎಲ್ಲ ವಿಚಾರಗಳನ್ನು ಪ್ರಾರ್ಥನೆ ಮಾಡಿಕೊಳ್ಳುವುದು ಎಲ್ಲರ ಕರ್ತವ್ಯ. ದೇಶಕ್ಕೆ, ರಾಜ್ಯಕ್ಕೆ ಬಂದಿರುವ ಎಲ್ಲ ಕಷ್ಟ ನಿವಾರಣೆಯಾದರೆ ಸಾಕು. ದುಃಖವನ್ನು ದೂರ ಮಾಡುವುದು ದುರ್ಗಾದೇವಿ, ಇದು ಅದರ ಪ್ರತಿರೂಪ. ದೇವಿ ರಾಜ್ಯದ ಎಲ್ಲ ಜನರ ದುಃಖವನ್ನು ದೂರ ಮಾಡಲಿ ಎಂದು ಕೇಳಿಕೊಂಡಿದ್ದೇನೆ ಎಂದು ವಿಶ್ವಾಸದ ಮಾತುಗಳನ್ನು ಆಡಿದರು. ಇದನ್ನೂ ಓದಿ: ಪತಿಯನ್ನು ಹರಾಜಿಗಿಟ್ಟು, ಯಾವುದೇ ಕಾರಣಕ್ಕೂ Exchange ಇಲ್ಲವೆಂದ ಪತ್ನಿ..!

d k shivakumar hassana 1

ಇದೇ ವೇಳೆ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಮಾತನಾಡಿದ ಅವರು, ಎಂಎಲ್‍ಎಗಳಿಗೆ ಅವರ ಹಕ್ಕು ಇರುತ್ತದೆ. ಮಂತ್ರಿಗಳಿಗೂ ಹಕ್ಕು ಇರುತ್ತದೆ. ಅವರವರ ಹಕ್ಕು ಅವರು ಕೇಳಿಕೊಳ್ಳುತ್ತಾರೆ. ನಾವ್ಯೇಕೆ ಮಧ್ಯಪ್ರವೇಶಿಸಬೇಕು. ಅವರ ಪಾರ್ಟಿ ಗೆದ್ದಿರುವವರಿಗೆ ಎಲ್ಲ ರೀತಿಯ ಹಕ್ಕು ಇರುತ್ತದೆ. ಪಾರ್ಟಿ ಕಟ್ಟಿರುತ್ತಾರೆ. ಪಕ್ಷ ಅಧಿಕಾರಕ್ಕೆ ತಂದಿರುತ್ತಾರೆ. ಬೇಕಾದಷ್ಟು ಹೋರಾಟ ಮಾಡಿರುತ್ತಾರೆ ಎಂದು ತಿಳಿಸಿದರು.

ಬೇರೆ ಪಕ್ಷದವರು ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಅದೆಲ್ಲಾ ದೇವಾಲಯದಲ್ಲಿ ಚರ್ಚೆ ಮಾಡಲು ಆಗುತ್ತಾ ಎಂದು ಪ್ರಶ್ನಿಸಿದರು.

Share This Article
Leave a Comment

Leave a Reply

Your email address will not be published. Required fields are marked *