ಒಮಿಕ್ರಾನ್ ಉಪ ರೂಪಾಂತರಿ ಬಿಎ.2 – 57 ದೇಶಗಳಲ್ಲಿ ಪತ್ತೆ: WHO

Public TV
1 Min Read
corona who

ಬರ್ನ್: ಓಮಿಕ್ರಾನ್ ಉಪ-ರೂಪಾಂತರಿ ಬಿಎ.2 ಇಲ್ಲಿಯವರೆಗೆ ವಿಶ್ವದ 57 ದೇಶಗಳಲ್ಲಿ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಹೆಚ್‌ಒ) ತಿಳಿಸಿದೆ.

ಕೊರೊನಾ ವೈರಸ್ ರೂಪಾಂತರಿ ಓಮಿಕ್ರಾನ್ ಮೂಲ ಆವೃತ್ತಿಗಿಂತಲೂ ಬಿಎ.2 ಅತ್ಯಂತ ವೇಗದಲ್ಲಿ ಹರಡಬಲ್ಲ ಸಾಂಕ್ರಾಮಿಕ ರೋಗವಾಗಿದೆ. ಈಗಾಗಲೇ ಇದು ವಿಶ್ವದ 57 ದೇಶಗಳಲ್ಲಿ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಂಗಳವಾರ ತಿಳಿಸಿದೆ. ಇದನ್ನೂ ಓದಿ: ದೇಶದ ಪ್ರಗತಿಗಾಗಿ ಬಿಜೆಪಿಯನ್ನು ಬಂಗಾಳಕೊಲ್ಲಿಗೆ ಎಸೆಯಿರಿ: ಸಿಎಂ ಕೆಸಿಆರ್

OMICRON 3

10 ವಾರಗಳ ಹಿಂದೆಯಷ್ಟೇ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಓಮಿಕ್ರಾನ್ ಅತ್ಯಂತ ವೇಗವಾಗಿ ಹರಡಿರುವ ಕೊರೊನಾ ರೂಪಾಂತರಿಗಳಲ್ಲಿ ಮೊದಲನೆಯದ್ದು. ಕಳೆದ ತಿಂಗಳ ಕೋವಿಡ್ ಕೇಸ್‌ಗಳಲ್ಲಿ ಶೇ.93 ಕ್ಕಿಂತಲೂ ಹೆಚ್ಚಿನ ಪಾಲನ್ನು ಓಮಿಕ್ರಾನ್ ಹೊಂದಿದೆ. ಅವುಗಳಲ್ಲಿ ಉಪ-ರೂಪಾಂತರಿಗಳಾಗಿ ಬಿಎ.1, ಬಿಎ.1.1, ಬಿಎ.2, ಹಾಗೂ ಬಿಎ.3ಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಸಾಪ್ತಾಹಿಕ ಎಪಿಡೆಮಿಯೋಲಾಜಿಕಲ್ ವರದಿಯಲ್ಲಿ ತಿಳಿಸಿದೆ.

ಓಮಿಕ್ರಾನ್ ಪ್ರಕರಣಗಳಲ್ಲಿ ಶೇ.96 ರಷ್ಟು ಪಾಲನ್ನು ಮೊದಲ ಬಾರಿಗೆ ಗುರುತಿಸಿದ ಆವೃತ್ತಿಗಳಾದ ಬಿಎ.1 ಹಾಗೂ ಬಿಎ.1.1ಗಳೇ ಹೊಂದಿವೆ. ಆದರೆ ಬಿಎ.2 ಪ್ರಕರಣಗಳಲ್ಲಿ ಸ್ಪಷ್ಟ ಏರಿಕೆ ಕಂಡುಬರುತ್ತಿದ್ದು, ಇದು ತೀವ್ರ ಗತಿಯಲ್ಲಿ ಇನ್ನೂ ಹಲವು ಉಪ-ರೂಪಾಂತರಿಗಳನ್ನು ಹುಟ್ಟು ಹಾಕುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಇದನ್ನೂ ಓದಿ: ಕಲ್ಲಿದ್ದಲು ಗಣಿ ಕುಸಿತ – 13 ಮಂದಿ ಬಲಿ

kwr corona test covid

ಇದೀಗ ಬಿಎ.2 ಪ್ರಕರಣಗಳು 57 ದೇಶಗಳಲ್ಲಿ ಕಂಡುಬಂದಿದ್ದು, ಓಮಿಕ್ರಾನ್‌ನ ಎಲ್ಲಾ ಆವೃತ್ತಿಗಳನ್ನು ಒಟ್ಟು ಸೇರಿಸಿದರೆ ಅರ್ಧಕ್ಕಿಂತಲೂ ಹೆಚ್ಚಿನ ಪಾಲನ್ನು ಈ ಆವೃತ್ತಿ ಒಳಗೊಂಡಿದೆ ಎನ್ನಲಾಗಿದೆ. ಓಮಿಕ್ರಾನ್‌ಗಿಂತಲೂ ಅತ್ಯಂತ ವೇಗವಾಗಿ ಬಿಎ.2 ಹರಡಬಲ್ಲದು ಎಂದು ಇತ್ತೀಚಿನ ಹಲವು ಅಧ್ಯಯನಗಳು ತಿಳಿಸಿವೆ.

Share This Article
Leave a Comment

Leave a Reply

Your email address will not be published. Required fields are marked *