UP Election: ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲಿಲ್ಲ ಅಪರ್ಣಾ ಯಾದವ್ ಹೆಸರು

Public TV
1 Min Read
aparna yadav

ಲಕ್ನೋ: ಸುದೀರ್ಘ ಚರ್ಚೆಯ ನಂತರ ಬಿಜೆಪಿ ಲಕ್ನೋದ 9 ಸ್ಥಾನಗಳಿಗೆ ಅಭ್ಯರ್ಥಿ ಪಟ್ಟಿಯನ್ನು ಘೋಷಿಸಿದೆ. ಆದರೆ ಸಮಾಜವಾದಿ ಪಕ್ಷದ ಸ್ಥಾಪಕ ಮುಲಾಯಂ ಯಾದವ್ ಅವರ ಸೊಸೆ ಅಪರ್ಣಾ ಯಾದವ್ ಹಾಗೂ ಬಿಜೆಪಿ ಸಂಸದ ರೀಟಾ ಬಹುಗುಣ ಜೋಶಿ ಪುತ್ರ ಮಯಾಂಕ್ ಜೋಶಿ ಅವರ ಹೆಸರು ಅಭ್ಯರ್ಥಿ ಪಟ್ಟಿಯಲಿಲ್ಲ.

aparna yadav1

ಅಪರ್ಣಾ ಯಾದವ್ ಮತ್ತು ಮಯಾಂಕ್ ಜೋಶಿ ಇಬ್ಬರೂ ಸ್ಪರ್ಧಿಸಲು ಇಚ್ಛಿಸುತ್ತಿದ್ದ ಕ್ಷೇತ್ರವಾದ ಲಕ್ನೋ ಕಂಟೋನ್ಮೆಂಟ್‍ಲ್ಲಿ ರಾಜ್ಯ ಸಚಿವ ಬ್ರಿಜೇಶ್ ಪಾಠಕ್ ಅವರಿಗೆ ಟಿಕೆಟ್ ನೀಡಲಾಗಿದೆ. ಇದು ಪಕ್ಷಕ್ಕೆ ಸುರಕ್ಷಿತ ಸ್ಥಾನ ಎಂದು ಪರಿಗಣಿಸಲಾಗಿದೆ. ಕಳೆದ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ರೀಟಾ ಬಹುಗುಣ ಜೋಶಿ ಅವರು ಅಪರ್ಣಾ ಯಾದವ್ ಅವರನ್ನು ಸೋಲಿಸಿದ್ದರು. ಇದನ್ನೂ ಓದಿ:  Budget 2022: ಬೆಳೆ ರಕ್ಷಣೆಗೆ ಕಿಸಾನ್ ಡ್ರೋನ್ ಬಳಕೆಗೆ ಅಸ್ತು – ಬಜೆಟ್‍ನಲ್ಲಿ ಕೃಷಿ ವಲಯಕ್ಕೆ ದಕ್ಕಿದ್ದೇನು?

yogi adithyanath 1

ಇಡಿ ಅಧಿಕಾರಿ ರಾಜೇಶ್ವರ್ ಸಿಂಗ್ ಅವರು ಸ್ವಯಂ ನಿವೃತ್ತಿಯನ್ನು ಕೇಂದ್ರ ಸರ್ಕಾರ ಅಂಗೀಕರಿಸಿದ್ದು, ಸರೋಜಿನಿ ಅವರಿಗೆ ಬಿಜೆಪಿ ನಗರ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನೀಡಿದೆ. ಈ ಕ್ಷೇತ್ರದ ಮೇಲೆ ರಾಜ್ಯದ ಮಹಿಳಾ ಕಲ್ಯಾಣ ಖಾತೆ ಸಚಿವೆ ಸ್ವಾತಿ ಸಿಂಗ್ ಮತ್ತು ಅವರ ಪತಿ ದಯಾಶಂಕರ್ ಸಿಂಗ್ ಇಬ್ಬರೂ ಕಣ್ಣಿಟ್ಟಿದ್ದರು.

web bjp logo 1538503012658

ಕಳೆದ ರಾಜ್ಯ ಚುನಾವಣೆಯಲ್ಲಿ ಲಕ್ನೋದ ಒಂಬತ್ತು ಸ್ಥಾನಗಳ ಪೈಕಿ ಬಿಜೆಪಿ ಎಂಟು ಸ್ಥಾನಗಳನ್ನು ಗೆದ್ದಿತ್ತು. ರಾಜ್ಯದಲ್ಲಿ ಫೆಬ್ರವರಿ 10 ರಿಂದ ಮಾರ್ಚ್ 7 ರವರೆಗೆ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಇದನ್ನೂ ಓದಿ: 3ನೇ ಪತಿಗೆ ನಿಷ್ಠೆ ತೋರಿಸಲು 2ನೇ ಪತಿಯಿಂದ ಪಡೆದ ಮಗುವನ್ನು ಸುಟ್ಟು ಹಾಕಿದ್ಳು!

Share This Article
Leave a Comment

Leave a Reply

Your email address will not be published. Required fields are marked *