Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ದೇಶದ ಆರ್ಥಿಕತೆಗೆ ಬೂಸ್ಟರ್ ಡೋಸ್ ನೀಡುವ ಬಜೆಟ್: ಶಶಿಕಲಾ ಜೊಲ್ಲೆ

Public TV
Last updated: February 1, 2022 2:34 pm
Public TV
Share
1 Min Read
shashikala jolle 2
SHARE

ಬೆಂಗಳೂರು: ಇಂದು ಕೇಂದ್ರ ವಿತ್ತ ಮಂತ್ರಿಗಳಾದ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್ ನಮ್ಮ ದೇಶದ ಆರ್ಥಿಕತೆಗೆ ಬೂಸ್ಟರ್ ಡೋಸ್ ಆಗಿದೆ ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರಾದ ಶಶಿಕಲಾ ಜೊಲ್ಲೆ ಸಂತೋಷ ವ್ಯಕ್ತಪಡಿಸಿದರು.

ಕೇಂದ್ರದ ಬಜೆಟ್ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿರ್ಮಲಾ ಸೀತಾರಾಮನ್ ಅವರು ತಮ್ಮ ಬಜೆಟ್ ಭಾಷಣದಲ್ಲಿ ಉಲ್ಲೇಖಿಸಿರುವಂತೆ ಪ್ರಧಾನಿ ನರೇಂದ್ರ ಮೋದಿ ಅವರ ದೂರದರ್ಶಿತ್ವದಲ್ಲಿ ನಾವುಗಳು ಅಭಿವೃದ್ದಿಯ ಅಮೃತ ಕಾಲಕ್ಕೆ ಸಾಕ್ಷಿಯಾಗಿದ್ದೇವೆ. ಮುಂದಿನ 25 ವರ್ಷಗಳ ಅಭಿವೃದ್ದಿಯ ನೀಲಿನಕ್ಷೆಯನ್ನು ವಿತ್ತ ಸಚಿವರು ನೀಡಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಬಜೆಟ್‌ನಲ್ಲಿ ಮಧ್ಯಮ ವರ್ಗದವರಿಗೆ ತೆರಿಗೆ ವಿನಾಯಿತಿ ಇಲ್ಲ: ಶಶಿ ತರೂರ್‌

Nirmala Sitharaman

ಬಜೆಟ್ ನಲ್ಲಿ, ಹೆದ್ದಾರಿ ಜಾಲವನ್ನ 25 ಸಾವಿರ ಕಿಲೋಮೀಟರ್‌ಗಳಷ್ಟು ವಿಸ್ತರಿಸುವುದು. ದೇಶದ 5 ನದಿಗಳನ್ನು ಜೋಡಿಸುವ ವಿಸ್ತ್ರುತ ಯೋಜನೆಯನ್ನು ಅಂತಿಮಗೊಳಿಸಿರುವುದು. ನೈಸರ್ಗಿಕ ಕೃಷಿಗೆ ಒತ್ತು ನೀಡುವಂತಹ ಮಹತ್ವದ ಅಂಶಗಳನ್ನು ಆಯವ್ಯಯದಲ್ಲಿ ತಿಳಿಸಿದ್ದಾರೆ ಎಂದು ವಿವರಿಸಿದರು. ಹಾಗೆಯೇ, ಡಿಜಿಟಲ್ ಶಿಕ್ಷಣಕ್ಕೆ ಒತ್ತು ನೀಡುವ ಉದ್ದೇಶದಿಂದ ತರಗತಿಗೊಂದು ಟಿವಿ ಚಾನೆಲ್ ಪ್ರಸ್ತಾವನೆ, ಪ್ರಾದೇಶಿಕ ಭಾಷೆಗಳೂ ಸೇರಿ 200 ಹೊಸ ಚಾನಲ್ ಆರಂಭಕ್ಕೆ ಪ್ರಸ್ತಾಪ, ಶಿಕ್ಷಕರುಗಳಿಗೆ ಡಿಜಿಟಲ್ ಟೂಲ್ಸ್‍ಗಳ ನೀಡುವಿಕೆ ಹೀಗೆ ಶಿಕ್ಷಣ ಕ್ಷೇತ್ರದ ಅಮೂಲಾಗ್ರ ಬದಲಾವಣೆಗೂ ಒತ್ತು ನೀಡಲಾಗಿದೆ ಎಂದು ತಿಳಿಸಿದರು.

modi 2

2 ಲಕ್ಷ ಅಂಗನವಾಡಿಗಳ ಉನ್ನತೀಕರಣದಿಂದ ನಮ್ಮ ದೇಶದ ಮಕ್ಕಳಿಗೆ ಅತ್ಯುತ್ತಮ ಗುಣಮಟ್ಟದ ಪ್ರಾಥಮಿಕ ಶಿಕ್ಷಣ ದೊರೆಯಲಿದೆ. ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಗೆ ಒತ್ತು. ಮಹಿಳಾ ಮತ್ತು ಮಕ್ಕಳ ಅಭ್ಯುದಯಕ್ಕೂ ಬಜೆಟ್‍ನಲ್ಲಿ ಆದ್ಯತೆ ನೀಡಲಾಗಿದೆ ಎಂದರು. ಇದನ್ನೂ ಓದಿ: ಗ್ರಾಮೀಣ, ನಗರಾಭಿವೃದ್ಧಿ ಎರಡು ಕ್ಷೇತ್ರಗಳ ಅಭಿವೃದ್ಧಿಗೆ ಪೂರಕ: ಬಿಎಸ್‌ವೈ ಮೆಚ್ಚುಗೆ

ಭವಿಷ್ಯದಲ್ಲಿ ಭಾರತ ದೇಶವನ್ನು ತಾಂತ್ರಿಕವಾಗಿ ಮತ್ತಷ್ಟು ಮೇಲ್ದರ್ಜೆಗೇರಿಸುವ ಮೂಲಕ ಎಲ್ಲ ವರ್ಗದ ಅಭ್ಯುದಯಕ್ಕೆ ಆದ್ಯತೆ ನೀಡಿರುವ ಬಜೆಟ್ ಇದಾಗಿದೆ ಎಂದು ಅಭಿಪ್ರಾಯಪಟ್ಟರು.

TAGGED:anganwadiBangalorenarendra modiNirmala SitharamanShashikala Jolleunion budgetಅಂಗನವಾಡಿಕೇಂದ್ರ ಬಜೆಟ್ನರೇಂದ್ರ ಮೋದಿನಿರ್ಮಲಾ ಸೀತಾರಾಮನ್ಬೆಂಗಳೂರುಶಶಿಕಲಾ ಜೊಲ್ಲೆ
Share This Article
Facebook Whatsapp Whatsapp Telegram
Leave a Comment

Leave a Reply

Your email address will not be published. Required fields are marked *

Cinema News

Manoranjan Ravichandran New Movie
ಮನೋರಂಜನ್ ರವಿಚಂದ್ರನ್ ಐದನೇ ಸಿನಿಮಾಗೆ ಮುಹೂರ್ತ
Cinema Latest Sandalwood Top Stories
Actor Milind
`ಅನ್‌ಲಾಕ್ ರಾಘವ’ ಖ್ಯಾತಿಯ ಮಿಲಿಂದ್‌ಗೆ ಲಾಟ್ರಿ; ನಾಲ್ಕು ಚಿತ್ರಗಳಿಗೆ ಸಹಿ ಮಾಡಿದ ನಟ
Cinema Latest Sandalwood Top Stories
Kantara Chapter 1 First look of Kanakavati Rukmini Vasanth unveiled on Varamahalakshmi
ಕಾಂತಾರ ಚಾಪ್ಟರ್ 1| ಕನಕವತಿಯ ಮೊದಲ ನೋಟ ವರಮಹಾಲಕ್ಷ್ಮಿಯಂದು ಅನಾವರಣ
Cinema Latest Top Stories
Rajath Kishan
ಕೊಲೆ ಬೆದರಿಕೆ ಸಂದೇಶ – ಡಿಜಿಐಜಿಪಿಗೆ ರಜತ್ ದೂರು
Bengaluru City Cinema Latest Top Stories
love u muddu
ಮಹಾರಾಷ್ಟ್ರದಲ್ಲಿ ನಡೆದ ಕಥೆಗೆ ಸಿದ್ದು ನಾಯಕ
Cinema Latest Sandalwood Top Stories

You Might Also Like

pratap simha
Districts

ಧರ್ಮಸ್ಥಳವನ್ನು ಕಬಳಿಸಲು ಸರ್ಕಾರ ಈಗ ಸಾಕ್ಷಿ ಹುಡುಕುತ್ತಿದೆ: ಪ್ರತಾಪ್‌ ಸಿಂಹ

Public TV
By Public TV
9 minutes ago
jagadish shettar
Latest

ರಾಹುಲ್ ಆರೋಪದಲ್ಲಿ ಯಾವುದೇ ಹುರುಳಿಲ್ಲ, ದಾಖಲೆ ಇದ್ದರೆ ಕೋರ್ಟ್‌ಗೆ ಹೋಗಿ: ಶೆಟ್ಟರ್

Public TV
By Public TV
19 minutes ago
haveri murder
Crime

ಹಾವೇರಿ| ಶೀಲ ಶಂಕಿಸಿ ಪತ್ನಿ ಬರ್ಬರ ಹತ್ಯೆ – ಕೆರೆಗೆ ಹಾರಿ ಪತಿ ಆತ್ಮಹತ್ಯೆ

Public TV
By Public TV
47 minutes ago
Huma Qureshi Brother
Crime

ಪಾರ್ಕಿಂಗ್ ವಿಚಾರಕ್ಕೆ ಗಲಾಟೆ; ಬಾಲಿವುಡ್ ನಟಿ ಹುಮಾ ಖುರೇಷಿ ಸೋದರ ಸಂಬಂಧಿಯ ಹತ್ಯೆ

Public TV
By Public TV
60 minutes ago
Bihar sita mandir
Latest

ಬಿಹಾರ ಚುನಾವಣೆ ಹೊತ್ತಲ್ಲೇ ಸೀತಾ ಮಂದಿರಕ್ಕೆ ಪ್ಲ್ಯಾನ್‌ – 882 ಕೋಟಿಯ ದೇಗುಲಕ್ಕಿಂದು ಅಮಿತ್ ಶಾ ಶಂಕುಸ್ಥಾಪನೆ

Public TV
By Public TV
1 hour ago
Soladevanahalli Murder
Bengaluru City

ಆನ್‌ಲೈನ್ ಗೇಮ್ ಆಡಲು ಹಣಕ್ಕಾಗಿ ಟಾರ್ಚರ್; ಸ್ವಂತ ಅಳಿಯನನ್ನೇ ಕೊಂದ ಮಾವ

Public TV
By Public TV
1 hour ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?