ಸಿದ್ದರಾಮಯ್ಯ ಕಾಂಗ್ರೆಸ್ ಪಾಲಿನ ಭಸ್ಮಾಸುರ: ಎಚ್. ವಿಶ್ವನಾಥ್

Public TV
1 Min Read
H Vishwanath 2

ಮೈಸೂರು: ಸಿದ್ದರಾಮಯ್ಯ ಯಾರನ್ನು ಬೆಳೆಯಲು ಬಿಡುವುದಿಲ್ಲ. ಅವರು ಕಾಂಗ್ರೆಸ್ ಪಾಲಿನ ಭಸ್ಮಾಸುರ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಕಿಡಿಕಾರಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಮತ್ತೆ ಸ್ಪರ್ಧಿಸಿದರೆ 49 ಸಾವಿರ ಮತದಿಂದ ಸೋಲುತ್ತಾರೆ. ಇದರಿಂದಾಗಿ ಈಗ ಬೇರೆ ಕ್ಷೇತ್ರ ಹುಡುಕುತ್ತಿದ್ದಾರೆ ಎಂದ ಅವರು ಸಿದ್ದರಾಮಯ್ಯನಿಂದ ಅಹಿಂದದವರು ಮುಳುಗಿ ಹೋದರು. ಅಹಿಂದದವರನ್ನು ಉಪಯೋಗಿಸಿಕೊಂಡು ಸಿದ್ದರಾಮಯ್ಯ ದಡಕ್ಕೆ ಬಂದರು. ಸಿದ್ದರಾಮಯ್ಯ ಕುರುಬರನ್ನು ಬೆಳೆಸಲಿಲ್ಲ. ಎಲ್ಲರನ್ನು ಮುಗಿಸಿದರು. ಈಗ ಕಾಂಗ್ರೆಸ್‍ನ ಹಳ್ಳ ಹಿಡಿಸುವ ಕೆಲಸ ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Siddaramaiah Chamarajanagar

ಎಸ್.ಆರ್. ಪಾಟೀಲ್ ಅವರನ್ನು ಮುಗಿಸಿದ್ದು ಸಿದ್ದರಾಮಯ್ಯ. ಅವರಿಗೆ ಟಿಕೆಟ್ ಕೊಡಲಿಲ್ಲ. ಚಿಮ್ಮನಕಟ್ಟಿ ಮನೆ ಹಾಳಾಗಿದ್ದು ಸಿದ್ದರಾಮಯ್ಯರಿಂದ. ಯಾರ ಮನೆ ಹಾಳಾದರೂ ಸರಿ ನೀವು ಚೆನ್ನಾಗಿರಬೇಕು ಅಷ್ಟೇ. ಇದೇ ನಿಮ್ಮ ಸಿದ್ಧಾಂತ. ನಿನಗೆ ದೆಹಲಿಯಲ್ಲಿ ಯಾರು ಗೊತ್ತಿದ್ದರೂ ಖರ್ಗೆ, ಎಸ್.ಎಂ. ಕೃಷ್ಣ ಸಹಾಯ ಮಾಡಿದಕ್ಕೆ ಕಾಂಗ್ರೆಸ್ ಪಕ್ಷ ಸೇರಿದ್ದು. ನನ್ನನ್ನು ಸಿಎಂ ಇಬ್ರಾಹಿಂರನ್ನು ಸಿದ್ದರಾಮಯ್ಯ ಜೀವ ಇರುವವರೆಗೂ ನೆನಪಿಸಿಕೊಳ್ಳಬೇಕು. ಆದರೆ ಕೃತಜ್ಞತೆಯೇ ಇಲ್ಲದ ಜನ ನಾಯಕ ಅಂದರೆ ಅದು ಸಿದ್ದರಾಮಯ್ಯ ಮಾತ್ರ ಎಂದು ಕುಟುಕಿದರು. ಇದನ್ನೂ ಓದಿ: ಅಸಮಾಧಾನ ಹೊರ ಹಾಕಿದ ಬೆನ್ನಲ್ಲೇ ಡಿಕೆಶಿಯನ್ನು ಭೇಟಿಯಾದ ಆನಂದ್ ಸಿಂಗ್

H. Vishwanath

ನನ್ನ ಸಂಪರ್ಕದಲ್ಲಿ ಬೇರೆ ಪಕ್ಷದ ಶಾಸಕರು ಸಚಿವರು ಇದ್ದಾರೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ 15 ಜನರಿಗೆ ಎಷ್ಟು ಕೋಟಿ ಕೊಟ್ಟು ಖರೀದಿ ಮಾಡುತ್ತಿದ್ದೀರಾ. ನಾವು 17 ಜನ ಹೋದಾಗ ಏನೆಲ್ಲಾ ಮಾತನಾಡಿದ್ದೀರಿ. ರಮೇಶ್ ಕುಮಾರ್ ಕೈಲಿ ಏನೆಲ್ಲಾ ಮಾಡಿಸಿದ್ದೀರಿ ಎನ್ನುವುದು ನೆನಪಿದೆಯಾ ಎಂದು ಪ್ರಶ್ನಿಸಿದ ಅವರು, ನಿಮ್ಮ ಜೊತೆ ಮಲಗಿದರೆ ಪಾವಿತ್ರ್ಯತೆ ನಮ್ಮ ಜೊತೆ ಮಲಗಿದರೆ ಅನೈತಿಕತೆನಾ ಎಂದು ತಿರುಗೇಟು ನೀಡಿದರು. ಸಿದ್ದರಾಮಯ್ಯ ಅವರು ಜನರನ್ನು ದಡ್ಡರು ಅಂದುಕೊಂಡಿದ್ದಾರೆ. ಆದರೆ ಜನರಿಗೆ ಎಲ್ಲಾ ಗೊತ್ತಿದೆ ಅವರೇ ನಿಮಗೆ ಪಾಠ ಕಲಿಸುತ್ತಾರೆ ಎಂದರು. ಇದನ್ನೂ ಓದಿ: ಕುಡಿತ ಬಿಟ್ಟರೆ ಮಾತ್ರ ಮನೆಗೆ ಬರುತ್ತೇನೆ ಎಂದಿದ್ದಕ್ಕೆ ಪತ್ನಿಯನ್ನೇ ಕೊಲೆಗೈದ

Share This Article
Leave a Comment

Leave a Reply

Your email address will not be published. Required fields are marked *