ಬೀದಿ ನಾಯಿ ಮೇಲೆ ಕಾರು ಹತ್ತಿಸಿ ವಿಕೃತಿ ಮೆರೆದ ಆದಿಕೇಶವುಲು ಮೊಮ್ಮಗ

Public TV
1 Min Read
jayanagara dog 2

ಬೆಂಗಳೂರು: ಬೀದಿ ನಾಯಿ ಮೇಲೆ ಕಾರು ಹತ್ತಿಸಿ ಯುವಕನೊಬ್ಬ ವಿಕೃತಿ ಮೆರೆದ ಘಟನೆ ಜಯನಗರದಲ್ಲಿ ನಡೆದಿದೆ.

ಉದ್ಯಮಿ, ಮಾಜಿ ಸಂಸದ ದಿ. ಆದಿಕೇಶವುಲು ನಾಯ್ಡು ಮೊಮ್ಮಗ ಆದಿ ಈ ಕೃತ್ಯ ಎಸಗಿದ್ದಾನೆ. ಬೀದಿ ಮೇಲೆ ಮಲಗಿದ್ದ ನಾಯಿಯ ಮೇಲೆ ಉದ್ದೇಶಪೂರ್ವಕವಾಗಿಯೇ ಆಡಿ ಕಾರು ಹತ್ತಿಸಿ ಆದಿ ವಿಕೃತಿ ಮೆರೆದಿದ್ದಾನೆ.

jayanagara dog

ಆದಿ ಕಾರನ್ನು ಬೇಕೆಂದೇ ರಿವರ್ಸ್ ತೆಗೆದುಕೊಂಡು ನಾಯಿ ಮೇಲೆ ಹತ್ತಿಸಿದ್ದಾನೆ. ಕಾರು ಹತ್ತಿದ ರಭಸಕ್ಕೆ ನಾಯಿ ವಿಲ-ವಿಲ ಒದ್ದಾಡಿದೆ. ಜಯನಗರ 1ನೇೀ ಬ್ಲಾಕ್ 10ನೇ ಬಿ ಮೈನ್ ನಲ್ಲಿ ಈ ಘಟನೆ ನಡೆದಿದ್ದು ಘಟನೆಯ ವೀಡಿಯೋ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: 60ಕ್ಕೂ ಹೆಚ್ಚು ಅಡಿಕೆ ಗಿಡ ಕಡಿದ ದುಷ್ಕರ್ಮಿಗಳು – ಕಣ್ಣೀರಿಟ್ಟ ರೈತ ಮಹಿಳೆ

jayanagara dog 1

ಘಟನೆ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಎಫ್‍ಐಆರ್ ದಾಖಲಾಗಿದೆ. ಪೊಲೀಸರು ಆರೋಪಿಯನ್ನು ಹುಡುಕಿಕೊಂಡು ಹೋದಾಗ ಆತ ಕಾರಿನೊಂದಿಗೆ ಪರಾರಿಯಾಗಿರುವ ವಿಚಾರ ತಿಳಿದು ಬಂದಿದೆ. ಪೊಲೀಸರು ವಿಚಾರಣೆಗೆ ಬರುವಂತೆ ಸಿದ್ದಾಪುರ ಪೊಲೀಸರು ಆದಿಗೆ ನೋಟಿಸ್ ಕೊಟ್ಟಿದ್ದಾರೆ.

ಈ ಘಟನೆಯ ಬಳಿಕ ಆರೋಪಿಗೆ ಕೊರೊನಾ ಬಂದಿದೆ. ಕುಟುಂಬಸ್ಥರು ಆದಿಗೆ ಕೋವಿಡ್ ಪಾಸಿಟಿವ್ ಬಂದಿದೆ ಎಂದು ಕಾಪಿಯನ್ನು ಠಾಣೆಗೆ ಕಳುಹಿಸಿದ್ದಾರೆ. ಕೋವಿಡ್‍ನಿಂದ ಗುಣಮುಖವಾದ ನಂತ್ರ ವಿಚಾರಣೆಗೆ ಹಾಜರಾಗುವಂತೆ ಮತ್ತೆ ನೋಟಿಸ್ ಕಳುಹಿಸಲಾಗಿದೆ. ಇದನ್ನೂ ಓದಿ: 43.2 ಕೋಟಿ ಮೌಲ್ಯದ ಡ್ರಗ್ಸ್ ಕಳ್ಳಸಾಗಣೆ – ಮಹಿಳೆ ಅರೆಸ್ಟ್

Share This Article
Leave a Comment

Leave a Reply

Your email address will not be published. Required fields are marked *