ಬಿಜೆಪಿ ವಿರುದ್ಧ ಸಂಜಯ್ ರಾವತ್ ವಾಗ್ದಾಳಿ

Public TV
2 Min Read
Sanjay Raut

ಮುಂಬೈ: ಶಿವಸೇನೆ ಉತ್ತರ ಭಾರತದಿಂದ ಎಲೆಕ್ಷನ್‍ಗೆ ನಿಂತಿದ್ದರೆ ಮತ್ತು ಆ ಸ್ಥಳವನ್ನು ಬಿಜೆಪಿಗೆ ಬಿಟ್ಟುಕೊಡದೆ ಇರುತ್ತಿದ್ದರೆ ನಮ್ಮ ಪಕ್ಷದಿಂದ ಯಾರಾದರೂ ಪ್ರಧಾನಿಯಾಗಿರುತ್ತಿದ್ದರು ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಹೇಳಿದ್ದಾರೆ.

ಬಿಜೆಪಿಯೊಂದಿಗಿನ ಮೈತ್ರಿಯ ಭಾಗವಾಗಿ ಶಿವಸೇನೆ 25 ವರ್ಷಗಳನ್ನು ವ್ಯರ್ಥ ಮಾಡಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ ನಂತರ ಶಿವಸೇನೆ ಮತ್ತು ಬಿಜೆಪಿ ನಡುವಿನ ಮಾತಿನ ಯುದ್ಧದ ನಡುವೆ ರಾವತ್ ಪ್ರತಿಕ್ರಿಯಿಸಿದರು. ನಾವು ಮಹಾರಾಷ್ಟ್ರದಲ್ಲಿ ಬಿಜೆಪಿಯನ್ನು ಕೆಳಗಿನಿಂದ ಮೇಲಕ್ಕೆ ಕೊಂಡೊಯ್ದಿದ್ದೇವೆ. ಬಾಬರಿ ನಂತರ ಉತ್ತರ ಭಾರತದಲ್ಲಿ ಶಿವಸೇನೆಯ ಅಲೆ ಇತ್ತು. ಆ ಸಮಯದಲ್ಲಿ ನಾವು ಚುನಾವಣೆಯಲ್ಲಿ ಸ್ಪರ್ಧಿಸಿದ್ದರೆ, ದೇಶದಲ್ಲಿ ನಮ್ಮ (ಶಿವಸೇನೆ) ಪ್ರಧಾನಿ ಇರುತ್ತಿದ್ದರು. ಆದರೆ ನಾವು ಅದನ್ನು ನಿರಾಕರಿಸಿದ್ದೇವೆ ಎಂದರು.

web bjp logo 1538503012658

ಈ ಹಿಂದೆ ಉದ್ಧವ್ ಠಾಕ್ರೆ, ಶಿವಸೇನೆ 25 ವರ್ಷಗಳ ಕಾಲ ಬಿಜೆಪಿಯೊಂದಿಗೆ ತನ್ನ ಸಮಯವನ್ನು ವ್ಯರ್ಥ ಮಾಡಿದೆ. ನನ್ನ ಏಕೈಕ ನಿರಾಶೆ ಎಂದರೆ ಒಂದು ಕಾಲದಲ್ಲಿ ಅವರು ನಮ್ಮ ಸ್ನೇಹಿತರಾಗಿದ್ದು, ನಾವು ಅವರನ್ನು ಬೆಳೆಸಿದ್ದೇವೆ. ನಾನು ಮೊದಲೇ ಹೇಳಿದಂತೆ ಬಿಜೆಪಿಯೊಂದಿಗೆ ನಮ್ಮ 25 ವರ್ಷಗಳ ಮೈತ್ರಿ ವ್ಯರ್ಥವಾಯಿತು ಎಂದು ನುಡಿದಿದ್ದರು. ಇದನ್ನೂ ಓದಿ: ಬಿಜೆಪಿ ತನ್ನ ಅನುಕೂಲಕ್ಕಾಗಿ ಹಿಂದುತ್ವವನ್ನು ಬಳಸಿಕೊಳ್ಳುತ್ತಿದೆ: ಉದ್ಧವ್ ಠಾಕ್ರೆ

ಹಿಂದುತ್ವದ ಬಗ್ಗೆ ತಮ್ಮ ಪಕ್ಷದ ನಿಲುವನ್ನು ಪುನರುಚ್ಚರಿಸಿದ ಠಾಕ್ರೆ, ಸಿದ್ಧಾಂತದ ಮೇಲೆ ಬಿಜೆಪಿ ಮಾಲೀಕತ್ವವನ್ನು ಹೊಂದಿಲ್ಲ. ಶಿವಸೇನಾ ಪ್ರಮುಖರು ನಮಗೆ ಹಿಂದುತ್ವದ ಬಗ್ಗೆ ಹೇಳಿದ್ದರು. ನಮಗೆ ಹಿಂದುತ್ವಕ್ಕೆ ಅಧಿಕಾರ ಬೇಕಿತ್ತು. ಈಗ ನಾವು ನೋಡುತ್ತಿರುವುದು ಈ ಜನರು ಬಿಜೆಪಿ ನಡೆಸುತ್ತಿರುವ ಹಿಂದುತ್ವ ಕೇವಲ ನೆಪ ಮಾತ್ರ. ಅವರ ಹಿಂದುತ್ವವು ಕೇವಲ ಅಧಿಕಾರಕ್ಕಾಗಿ ಎಂದು ಸಿಡಿದಿದ್ದರು.

uddav tackkrey

 

ನಮ್ಮದು ಹಿಂದುತ್ವದ ಚರ್ಮ, ನಾವು ಹಿಂದುತ್ವವನ್ನು ತೊರೆದಿದ್ದೇವೆಯೇ ಎಂದು ಜನರು ನಮ್ಮನ್ನು ಕೇಳುತ್ತಾರೆ. ಆದರೆ ನಾವು ಬಿಜೆಪಿಯನ್ನು ಬಿಟ್ಟಿದ್ದೇವೆಯೇ ಹೊರತು ಹಿಂದುತ್ವವನ್ನಲ್ಲ. ಬಿಜೆಪಿ ಎಂದರೆ ಹಿಂದುತ್ವವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಸಕಲೇಶಪುರದಲ್ಲಿ ಕಲ್ಲು ಎತ್ತಿ ಹಾಕಿ ವೃದ್ಧೆಯ ಬರ್ಬರ ಹತ್ಯೆ

ಇದಕ್ಕೆ ಪ್ರತಿಕ್ರಿಯೆ ನೀಡಿದ ಬಿಜೆಪಿ ನಾಯಕ ರಾಮ್ ಕದಂ, ಹಿಂದುತ್ವದ ಕುರಿತು ಉಪನ್ಯಾಸ ನೀಡುವ ಮೊದಲು, ಉದ್ಧವ್ ಠಾಕ್ರೆ ಅವರು ಶಿವಸೇನೆ ದಿವಂಗತ ಬಾಳ್ ಠಾಕ್ರೆಯವರ ಸಿದ್ಧಾಂತವನ್ನು ಅನುಸರಿಸುತ್ತಿದ್ದಾರೆಯೇ ಅಂತ ಆತ್ಮಾವಲೋಕನ ಮಾಡಿಕೊಳ್ಳಬೇಕು. ಅವರು ರಾಜಕೀಯ ಮತ್ತು ಜೀವನದಲ್ಲಿ ತಮ್ಮ ಪಕ್ಷವು ಎಂದಿಗೂ ಕಾಂಗ್ರೆಸ್‍ಗೆ ಸೇರುವುದಿಲ್ಲ. ಅಂತಹ ಸಂದರ್ಭಗಳು ಎದುರಾದರೆ ಅವರು ಪಕ್ಷಕ್ಕೆ ಬೀಗ ಹಾಕತ್ತೇನೆ ಎಂದಿದ್ದರು ಎಂದು ತಿರುಗೇಟು ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *