ಮೃತ ವ್ಯಕ್ತಿಯ ದೇಹದ ಪಕ್ಕ ಸಿಕ್ತು 124 ಹಾವುಗಳು!

Public TV
2 Min Read
220120 maryland home snakes owner dead snip ac 609p 124dfb

ವಾಷಿಂಗ್ಟನ್: ಅಮೆರಿಕದ ಮೇರಿಲ್ಯಾಂಡ್ ಮನೆಯೊಂದರಲ್ಲಿ ಮೃತ ವ್ಯಕ್ತಿಯ ದೇಹದ ಪಕ್ಕ 124 ಹಾವುಗಳು ಪತ್ತೆಯಾಗಿದೆ.

ಮೇರಿಲ್ಯಾಂಡ್‍ನ ಚಾಲ್ರ್ಸ್ ಕೌಂಟಿಯಲ್ಲಿರುವ ಮನೆಯೊಂದರಲ್ಲಿ ಮೃತ ವ್ಯಕ್ತಿಯ ದೇಹ ಪತ್ತೆಯಾಗಿದೆ. ಇಲ್ಲಿ ಅಚ್ಚರಿಯ ವಿಷಯವೆಂದರೆ, ಆ ಸ್ಥಳದಲ್ಲಿ 124 ವಿಷಕಾರಿ ಮತ್ತು ವಿಷರಹಿತ ಹಾವುಗಳು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

A dead man has been found in a Maryland home surrounded by 100 snakes and a  14-foot python. – Bruneidarussalam News

ಏನಿದು?
ಕೌಂಟಿಯ ಪಾಂಫ್ರೆಟ್ ಪ್ರದೇಶದ ರಾಫೆಲ್ ಡ್ರೈವ್‍ನಲ್ಲಿ 49 ವರ್ಷದ ವ್ಯಕ್ತಿ ವಾಸವಾಗಿದ್ದರು. ಆತನನ್ನು ನೆರೆಮನೆಯವರು ಒಂದು ದಿನವೂ ಸಹ ನೋಡಿರಲಿಲ್ಲ. ಆದರೆ ಒಂದು ದಿನ ನೆರೆಮನೆಯವರು ಮನೆಯ ಕಿಟಕಿಯಿಂದ ಒಳಗೆ ನೋಡಿದಾಗ ಒಬ್ಬ ವ್ಯಕ್ತಿ ಪ್ರಜ್ಞಾಹೀನವಾಗಿ ನೆಲದ ಮೇಲೆ ಬಿದ್ದಿರುವುದನ್ನು ಕಂಡಿದ್ದಾರೆ. ತಕ್ಷಣ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ. ಇದನ್ನೂ ಓದಿ: ಲಂಚಕ್ಕೆ ಬೇಡಿಕೆ ಇಟ್ಟಿದ್ದ ಮುಜರಾಯಿ ತಹಶೀಲ್ದಾರ್ ಅರೆಸ್ಟ್

Investigation Launched After Man Found Dead Surrounded By 124 Snakes -  Opera News

ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಬಂದಿದ್ದು, ಮನೆ ಒಳಗೆ ಹೋದ ಅವರಿಗೆ ವ್ಯಕ್ತಿ ದೇಹ ಪತ್ತೆಯಾಗಿದೆ. ಆದರೆ ಆತನ ಸುತ್ತ ನೂರಕ್ಕೂ ಹೆಚ್ಚು ವಿಷಕಾರಿ ಹಾವುಗಳಿದ್ದುದ್ದನ್ನು ಕಂಡು ಅಚ್ಚರಿಗೊಂಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಈ ಕುರಿತು ಪ್ರತಿಕ್ರಿಯಿಸಿದ್ದು, ಪ್ರಸ್ತುತ ವೈದ್ಯರು ವ್ಯಕ್ತಿಯು ಸಾವನ್ನಪ್ಪಿದ್ದಾನೆ ಎಂದು ಸ್ಪಷ್ಟಪಡಿಸಿದ್ದಾರೆ. ಈಗ ಸಾವಿಗೆ ಕಾರಣ ತಿಳಿಯಲು ವೈದ್ಯರು ಪರೀಕ್ಷೆಯನ್ನು ಮಾಡುತ್ತಿದ್ದಾರೆ. ಆದರೆ ಪ್ರಕರಣ ಕುರಿತು ಇನ್ನೂ ಯಾವುದೇ ಮಾಹಿತಿಗಳಿಲ್ಲ. ಪೊಲೀಸರು ಸಹ ಈ ಕುರಿತು ತನಿಖೆ ಮಾಡುತ್ತಿದ್ದಾರೆ ಎಂದು ತಿಳಿಸಿದೆ.

Chesterfield snake enthusiast found dead, had snake bite | Richmond Latest  News | richmond.com

ಚಾಲ್ರ್ಸ್ ಕೌಂಟಿ ವಕ್ತಾರ ಜೆನ್ನಿಫರ್ ಹ್ಯಾರಿಸ್ ಈ ಕುರಿತು ಮಾತನಾಡಿದ್ದು, ವಿವಿಧ ಪ್ರಭೇದಗಳ 100 ಕ್ಕೂ ಹೆಚ್ಚು ವಿಷಕಾರಿ ಮತ್ತು ವಿಷರಹಿತ ಹಾವುಗಳು ಮನೆಯ ಟ್ಯಾಂಕ್‍ಗಳಲ್ಲಿ ಇರುವುದು ಪತ್ತೆಯಾಗಿದೆ. ಹಾವುಗಳಲ್ಲಿ ಹೆಬ್ಬಾವು, ಕಾಳಿಂಗ ಸರ್ಪ, ನಾಗರಹಾವು ಸೇರಿವೆ. ಈ ಹಾವುಗಳನ್ನು ಪ್ರಾಣಿ ನಿಯಂತ್ರಣ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ನನ್ನ 30 ವರ್ಷಗಳ ಅನುಭವದಲ್ಲಿ ಈ ರೀತಿಯ ಘಟನೆಯನ್ನು ನಾನು ಎಂದೂ ಎದುರಿಸಿಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಉಡುಪಿಯ ಕಾಂಗ್ರೆಸ್ ನಾಯಕಿಗೆ ಚಾಕು ಇರಿತ

124 snakes found with body of dead man in Maryland home

ಚಾಲ್ರ್ಸ್ ಕೌಂಟಿ ಅನಿಮಲ್ ಕಂಟ್ರೋಲ್ ಉತ್ತರ ಕೆರೊಲಿನಾ ಮತ್ತು ವರ್ಜೀನಿಯಾದ ಸರೀಸೃಪ ತಜ್ಞರ ಸಹಾಯದಿಂದ ಸರೀಸೃಪಗಳಿಗೆ ಸಂಬಂಧಿಸಿದ ರಕ್ಷಣಾ ಪ್ರಯತ್ನಗಳನ್ನು ಮಾಡಲಾಗಿದೆ. ಹಾವುಗಳನ್ನು ಸರಿಯಾದ ಜಾಗದಲ್ಲಿ ಇರಿಸಲಾಗುವುದು ಎಂದು ಭರವಸೆಯನ್ನು ಕೊಟ್ಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *