ಟೀಂ ಇಂಡಿಯಾದ ಬ್ಯಾಟಿಂಗ್ ವೈಫಲ್ಯ – ಆಫ್ರಿಕಾಗೆ ಜಯ

Public TV
2 Min Read
SOUTHAFRICA 3

ಜೋಹನ್ಸ್‌ಬರ್ಗ್‌: ಟೀಂ ಇಂಡಿಯಾ ಬ್ಯಾಟ್ಸ್‌ಮ್ಯಾನ್‌ಗಳ ವೈಫಲ್ಯಕ್ಕೆ ಬೆಲೆತೆತ್ತಿದೆ. ಮೊದಲ ಏಕದಿನ ಪಂದ್ಯದಲ್ಲಿ ಭಾರತ ವಿರುದ್ಧ ಆಫ್ರಿಕಾ 31 ರನ್‍ಗಳ ಜಯ ಗಳಿಸಿ, ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ.

VIRAT KOHLI AND DAWAN

ಆಫ್ರಿಕಾ ನೀಡಿದ್ದ 297 ರನ್‍ಗಳ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಭಾರತ ಉತ್ತಮ ಆರಂಭವನ್ನು ಪಡೆಯಿತು. ಕೆ.ಎಲ್ ರಾಹುಲ್ ಮತ್ತು ಶಿಖರ್ ಧವನ್ ಮೊದಲ ವಿಕೆಟ್‍ಗೆ 46 ರನ್ (51 ಎಸೆತ)ಗಳ ಜೊತೆಯಾಟವಾಡಿದರು. ಈ ವೇಳೆ ದಾಳಿಗಿಳಿದ ಮಕ್ರಾರ್ಮ್ ತಮ್ಮ ಸ್ಪಿನ್ ಜಾದೂ ಮೂಲಕ ರಾಹುಲ್‍ರನ್ನು 12 ರನ್ (17 ಎಸೆತ)ಗಳಿಗೆ ಔಟ್ ಮಾಡಿದರು. ನಂತರ ಜೊತೆಯಾದ ಕೊಹ್ಲಿ ಮತ್ತು ಧವನ್ ಜೋಡಿ 2ನೇ ವಿಕೆಟ್‍ಗೆ 92 ರನ್(102 ಎಸೆತ) ಇನ್ನೊಂದು ಉತ್ತಮವಾದ ಜೊತೆಯಾಟದ ಮೂಲಕ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿತು. ಇದನ್ನೂ ಓದಿ: ಇದು ನನ್ನ ಕೊನೆಯ ಸೀಸನ್: ನಿವೃತ್ತಿ ನಿರ್ಧಾರ ಪ್ರಕಟಿಸಿದ ಟೆನಿಸ್ ತಾರೆ ಸಾನಿಯಾ

TEAM INDIA 4

ಜೊತೆಯಾಟದೊಂದಿಗೆ ಈ ಇಬ್ಬರು ಆಟಗಾರರೂ ಕೂಡ ತಲಾ ಅರ್ಧಶತಕ ಸಿಡಿಸಿ ಮಿಂಚಿದರು. ಈ ವೇಳೆ ಕೇಶವ್ ಮಹಾರಾಜ್ ದಾಳಿಗಿಳಿದು ಶಿಖರ್ ಧವನ್ 79 ರನ್ (84 ಎಸೆತ, 10 ಬೌಂಡರಿ) ವಿಕೆಟ್ ಕಬಳಿಸುವ ಮೂಲಕ ಭಾರತದ ಪತನಕ್ಕೆ ನಾಂದಿ ಹಾಡಿದರು. ನಂತರ ಕೊಹ್ಲಿ 51 ರನ್ (63 ಎಸೆತ, 3 ಬೌಂಡರಿ) ಸಿಡಿಸಿ ಪೆವಿಲಿಯನ್ ಸೇರಿಕೊಂಡರು. ಇದನ್ನೂ ಓದಿ: ಟೆಸ್ಟ್ ನಾಯಕತ್ವಕ್ಕೆ ಗುಡ್‌ಬೈ – ಕೊಹ್ಲಿ ಬ್ರ್ಯಾಂಡ್ ಮೌಲ್ಯ ಇಳಿಕೆ?

ನಂತರ ಬಂದ ಬ್ಯಾಟ್ಸ್‌ಮ್ಯಾನ್‌ಗಳೆಲ್ಲ ಆಫ್ರಿಕಾ ಬೌಲರ್‌ಗಳ ಎದುರು ಪ್ರತಿರೋಧ ತೋರದೇ   ಔಟ್‌ ಆದರು. ಅಂತಿಮ ಕ್ಷಣದಲ್ಲಿ ಶಾರ್ದೂಲ್‌ ಠಾಕೂರ್‌ ಬೌಂಡರಿ, ಸಿಕ್ಸ್‌ಗಳನ್ನು ಸಿಡಿಸಿ ಅಜೇಯ 50 ರನ್‌ (43 ಎಸೆತ, 5 ಬೌಂಡರಿ, 1 ಸಿಕ್ಸ್‌) ಸಿಡಿಸಿ ಮಿಂಚಿದರೂ ಕೂಡ ಗೆಲುವು ದಕ್ಕಿಸಿಕೊಳ್ಳಲು ಸಾಧ್ಯವಾಗಲಿಲ್ಲ ಅಂತಿಮವಾಗಿ  50 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 265 ರನ್‌ ಗಳಿಸಿ 31 ರನ್‌ಗಳ ಸೋಲು ಕಂಡಿತು.

SOUTHAFRICA 1 1

ಆಫ್ರಿಕಾ ಪರ ಲುಂಗಿ ಎನ್‍ಗಿಡಿ, ಶಮ್ಸಿ, ಆಂಡಿಲೆ ಫೆಹ್ಲುಕ್ವಾಯೊ ತಲಾ 2 ವಿಕೆಟ್ ಪಡೆದರೆ. ಕೇಶವ್ ಮಹಾರಾಜ್ ಮತ್ತು ಮಕ್ರಾರ್ಮ್ ತಲಾ 1 ವಿಕೆಟ್ ಕಿತ್ತರು.

Rassie van der Dussen AND BAHUMA

ಬವುಮ, ವ್ಯಾನ್ ಡೆರ್ ಡಸ್ಸೆನ್ ಶತಕದಾಟ
ಈ ಮೊದಲು ಟಾಸ್‍ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಫ್ರಿಕಾ ಪರ ಆರಂಭಿಕ ಆಘಾತ ಎದುರಾಯಿತು. ಆರಂಭಿಕ ಆಟಗಾರಾದ ಮಕ್ರಾರ್ಮ್ 6 ರನ್ (10 ಎಸೆತ, 1 ಬೌಂಡರಿ) ಮತ್ತು ಡಿಕಾಕ್ 27 ರನ್ (41 ಎಸೆತ, 2 ಬೌಂಡರಿ) ಸಿಡಿಸಿ ಔಟ್ ಆದರು. ನಂತರ ಒಂದಾದ ತೆಂಬ ಬವುಮ ಮತ್ತು ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಭಾರತದ ಬೌಲರ್‌ಗಳ ಬೆವರಿಳಿಸಿದರು. ಈ ಜೋಡಿ 4ನೇ ವಿಕೆಟ್‍ಗೆ ಬರೋಬ್ಬರಿ 204 ರನ್ (184 ಎಸೆತ) ಜೊತೆಯಾಟವಾಡಿ, ವೈಯಕ್ತಿಕವಾಗಿ ಬವುಮ 110 ರನ್ (143 ಎಸೆತ, 8 ಬೌಂಡರಿ) ಮತ್ತು ವ್ಯಾನ್ ಡೆರ್ ಡಸ್ಸೆನ್ ಅಜೇಯ 129 ರನ್ (9 ಬೌಂಡರಿ, 4 ಸಿಕ್ಸ್) ಬಾರಿಸಿ ಮಿಂಚಿದರು. ನಿಗದಿತ ಓವರ್‌ಗಳಲ್ಲಿ ಆಫ್ರಿಕಾ 4 ವಿಕೆಟ್ ಕಳೆದುಕೊಂಡು 296 ರನ್ ಗಳಿಸಿತು. ಇದನ್ನೂ ಓದಿ: ಆಸ್ಟ್ರೇಲಿಯಾ ವೀಸಾ ರದ್ದತಿ ನಿರಾಶೆ ತಂದಿದೆ: ನೊವಾಕ್ ಜೊಕೊವಿಕ್

ಭಾರತದ ಪರ ಬುಮ್ರಾ 2 ವಿಕೆಟ್ ಮತ್ತು ಅಶ್ವಿನ್ 1 ವಿಕೆಟ್ ಪಡೆದರು.

Share This Article
Leave a Comment

Leave a Reply

Your email address will not be published. Required fields are marked *