ಮಂಡ್ಯ: ಶ್ರೀರಂಗಪಟ್ಟಣದ ಜಾಮೀಯಾ ಮಸೀದಿಯನ್ನು ಒಡೆಯಬೇಕು ಎಂಬ ಹೇಳಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಕಾಳಿ ಮಠದ ಋಷಿಕುಮಾರ ಸ್ವಾಮೀಜಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಾಳಿ ಮಠದ ಸ್ವಾಮೀಜಿಯನ್ನು ಪೊಲೀಸರು ಶ್ರೀರಂಗಪಟ್ಟಣಕ್ಕೆ ಕರೆತಂದಿದ್ದು, ತಾಲೂಕು ಆಸ್ಪತ್ರೆಯಲ್ಲಿ ಸ್ವಾಮೀಜಿಯ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ. ಸಾಮಾಜಿಕ ಜಾಲಾತಾಣದಲ್ಲಿ ಹಾಕಿರುವ ವಿವಾದಾತ್ಮಕ ಹೇಳಿಕೆಗೆ ಪೊಲೀಸರು ಋಷಿಕುಮಾರ್‌ರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಇದನ್ನೂ ಓದಿ: ಸಂಸ್ಕೃತ ಭಾಷೆಯ ಮೇಲಿನ ಮಮತೆಯನ್ನು ತುಳು, ಕೊಡವ ಭಾಷೆಗಳ ಮೇಲೂ ತೋರಿಸಿ: ಬಿ.ಕೆ. ಹರಿಪ್ರಸಾದ್
ನಾನು ಹೇಳಿರುವ ಮಾತಿಗೆ ಇಂದು ಬದ್ಧನಿದ್ದೇನೆ. ಅದು ಹಿಂದೂ ದೇವಸ್ಥಾನ, ಅಲ್ಲಿರುವುದು ಹಿಂದೂ ಕಲಾಕೃತಿಗಳು. ಆ ಮಸೀದಿಯನ್ನು ಒಡೆದೇ ಒಡೆಯುತ್ತೇವೆ. ಅಲ್ಲಿ ಹನುಮನ ದೇವಸ್ಥಾನ ಕಟ್ಟುತ್ತೇವೆ. ಅಯೋಧ್ಯೆಯಲ್ಲಿ ರಾಮ ಮಂದಿರ, ಶ್ರೀರಂಗಪಟ್ಟಣದಲ್ಲಿ ಹನುಮಮಂದಿರ ಕಟ್ಟಿಸುತ್ತೇವೆ. ಇದಕ್ಕಾಗಿ ಹಿಂದೂ ಸಂಘಟನೆಗಳು ಒಂದಾಗಬೇಕು ಎಂದು ಋಷಿಕುಮಾರ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದನ್ನೂ ಓದಿ: ಮಗಳ ಸಾವಿನ ಬಗ್ಗೆ ಕಣ್ಣೀರುಡುತ್ತಲೇ ಎಳೆಎಳೆಯಾಗಿ ಬಿಚ್ಚಿಟ್ಟ ಅಮೃತಾ ನಾಯ್ಡು!