ಮುಂಬೈ: ನನಗೆ ಸರಿಯಾಗಿ ನೆನಪಿದೆ ನೀವು 2014ರಲ್ಲಿ ಧೋನಿ ನಿವೃತ್ತಿ ಘೋಷಿಸುತ್ತಾರೆ. ನಾನು ಟೀಂ ಇಂಡಿಯಾದ ನಾಯಕನಾಗುತ್ತೇನೆ ಎಂದಿದ್ದು ಎಂದು ನಟಿ ಅನುಷ್ಕಾ ಶರ್ಮಾ, ಕೊಹ್ಲಿ ನಾಯಕತ್ವ ತ್ಯಜಿಸಿದ ಬಳಿಕ ಅವರ ಮಾತುಗಳನ್ನು ನೆನಪಿಸಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅನುಷ್ಕಾ ಶರ್ಮಾ, ನೀವು 2014ರಲ್ಲಿ ನನಗೆ ಸಂದೇಶ ಕಳುಹಿಸಿದ್ರಿ, ಎಮ್‍ಎಸ್, ಟೆಸ್ಟ್ ಕ್ರಿಕೆಟ್‍ಗೆ ನಿವೃತ್ತಿ ಹೇಳುತ್ತಿದ್ದಾರೆ. ನಾನು ಟೀಂ ಇಂಡಿಯಾದ ನಾಯಕನಾಗುತ್ತಿದ್ದೇನೆ ಎಂದು ಸಂದೇಶ ಕಳುಹಿಸಿ ನಾನು, ನೀವು, ಎಮ್‍ಎಸ್ ಮಾತನಾಡಿ ನಿಮ್ಮ ಗಡ್ಡ ಎಷ್ಟು ಬೇಗ ಬಿಳಿಯಾಗುತ್ತಿದೆ ಎಂದು ಜೋಕ್ ಮಾಡಿದ್ದೆ. ಇದೀಗ ನಿಮ್ಮ ಗಡ್ಡ ತುಂಬಾ ಬಿಳಿಯಾಗಿದೆ. ಜೊತೆಗೆ ನಿಮ್ಮ ಬೆಳವಣಿಗೆ ಕೂಡ ಹೆಚ್ಚಾಗಿದೆ. ನೀವು ಭಾರತ ರಾಷ್ಟ್ರೀಯ ತಂಡದ ನಾಯಕರಾದ ಬಳಿಕ ತಂಡದ ಬೆಳವಣಿಗೆ ಕಂಡು ನನಗೆ ತುಂಬಾ ಹೆಮ್ಮೆ ಇದೆ. ಇದನ್ನೂ ಓದಿ: ಕ್ಯಾಪ್ಟನ್ ಕಿಂಗ್ ಕೊಹ್ಲಿ ಯುಗಾಂತ್ಯ – ಸಾಮಾಜಿಕ ಜಾಲತಾಣದಲ್ಲಿ ಕಿಚ್ಚು
View this post on Instagram
ನಿಮ್ಮ ನಾಯಕತ್ವದಲ್ಲಿ ತಂಡ ಉತ್ತಮ ಪ್ರದರ್ಶನ ನೀಡಿದೆ. 2014ರಲ್ಲಿ ನೀವು ನಾಯಕತ್ವ ವಹಿಸಿಕೊಂಡಾಗ ತುಂಬಾ ಅಗ್ರೆಸ್ಸಿವ್ ಆಗಿ ಇದ್ರಿ, ತಂಡಕ್ಕಾಗಿ ಶ್ರಮಿಸಿದ್ದೀರಿ ನಿಮ್ಮ ಪ್ರದರ್ಶನ ನನಗೆ ತುಂಬಾ ಖುಷಿ ನೀಡಿದೆ. ನನಗೆ ನಿಮ್ಮ ಮೇಲೆ ತುಂಬಾ ಹೆಮ್ಮೆಯ ಮನೋಭಾವವಿದ್ದು, ಇದೀಗ ನಿಮ್ಮ ಮಗಳು ನಿಮ್ಮ 7 ವರ್ಷಗಳ ಸಾಧನೆಯನ್ನು ಮುಂದೆ ನೋಡಿ ಖುಷಿ ಪಡುತ್ತಾಳೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ನಾಯಕತ್ವ ತ್ಯಜಿಸಿ ಧೋನಿಗೆ ವಿಶೇಷ ಧನ್ಯವಾದ ಸಲ್ಲಿಸಿದ ಕೊಹ್ಲಿ!