ಹಾಸನ: ಕುಡಿದ ಮತ್ತಿನಲ್ಲಿ ಶುರುವಾದ ಜಗಳ ಕೊಲೆ ಮಾಡುವ ಮೂಲಕ ಅಂತ್ಯಗೊಂಡ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ನಡೆದಿದೆ.
ಸೋಮಣ್ಣ (50) ಕೊಲೆಯಾದ ವ್ಯಕ್ತಿ. ಹಾಸನ ಜಿಲ್ಲೆ ಬೇಲೂರು ತಾಲೂಕಿನ ವಡ್ಡರಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಯಶವಂತ್ ಕೊಡಲಿಯಿಂದ ಹೊಡೆದು ಕೊಲೆ ಮಾಡಿರುವ ಆರೋಪಿ. ಕುಡಿದ ಮತ್ತಿನಲ್ಲಿ ಯಶವಂತ್ ಹಾಗೂ ಸೋಮಣ್ಣ ನಡುವೆ ಜಗಳ ಶುರುವಾಗಿದೆ. ಇದರಿಂದ ಪರಸ್ಪರ ವಾಕ್ಸಮರ ನಡೆಸಿದ ಇಬ್ಬರೂ ಕೈಕೈ ಮಿಲಾಯಿಸಿ ಬಡಿದಾಡಿಕೊಂಡಿದ್ದಾರೆ.
ಜಗಳ ವಿಕೋಪಕ್ಕೆ ತಿರುಗಿ ಯಶವಂತ್, ಕೊಡಲಿಯಿಂದ ಸೋಮಣ್ಣನ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾನೆ. ಪರಿಣಾಮ ತೀವ್ರ ರಕ್ತಸ್ರಾವವಾಗಿ ಸೋಮಣ್ಣ ಸಾವನ್ನಪ್ಪಿದ್ದಾನೆ. ಸೋಮಣ್ಣನನ್ನು ಕೊಲೆ ಮಾಡಿದ ನಂತರ ಯಶವಂತ್ ಪೊಲೀಸರಿಗೆ ಶರಣಾಗಿದ್ದಾನೆ. ಈ ಕುರಿತು ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಆಫ್ಘಾನ್ ಸಂಗೀತಗಾರನ ಮುಂದೆಯೇ ವಾದ್ಯ ಸುಟ್ಟ ತಾಲಿಬಾನ್