ಮುಂಬೈ: ಬಾಲಿವುಡ್ ನಟಿ ಮಲೈಕಾ ಅರೋರಾ ಜೊತೆಗಿನ ಬ್ರೇಕಪ್ ವಿಚಾರವಾಗಿ ಹರಿದಾಡುತ್ತಿದ್ದ ಗಾಳಿ ಸುದ್ದಿ ಬಗ್ಗೆ ಅರ್ಜುನ್ ಕಪೂರ್ ಕೊನೆಗೂ ಮೌನ ಮುರಿದಿದ್ದಾರೆ.
ಅರ್ಜುನ್ ಕಪೂರ್ ಇನ್‍ಸ್ಟಾಗ್ರಾಮ್‍ನಲ್ಲಿ ಮಲೈಕಾ ಜೊತೆಗಿನ ಅಪರೂಪದ ಬ್ಲ್ಯಾಕ್ ಆ್ಯಂಡ್ ವೈಟ್ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಫೋಟೋ ಜೊತೆಗೆ, ನನ್ನ ಹಾಗೂ ಮಲೈಕಾ ನಡುವೆ ಎಲ್ಲವೂ ಚೆನ್ನಾಗಿದೆ. ಇವೆಲ್ಲ ಕೇವಲ ವದಂತಿಗಳು. ಸುಳ್ಳುಸುದ್ದಿಗಳನ್ನು ಯಾರು ನಂಬಬೇಡಿ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ರಣವೀರ್ ಒಳ್ಳೆಯ ಎಂಟರ್ಟೈನರ್ ಎಂದ ಪೂಜಾ ಹೆಗ್ಡೆ
ಫೋಟೋದಲ್ಲಿ ಮೀರರ್ ಮುಂದೆ ನಿಂತು ಅರ್ಜುನ್ ಕಪೂರ್ ಹಾಗೂ ಮಲೈಕಾ ಪೋಸ್ ಕೊಟ್ಟಿದ್ದು, ಇಬ್ಬರು ಕ್ಯೂಟ್ ಆಗಿ ಕಾಣಿಸುತ್ತಿದ್ದಾರೆ. ಇನ್ನೂ ಅರ್ಜುನ್ ಕ್ಯಾಪ್ಷನ್‍ನಲ್ಲಿ, ವದಂತಿಗಳಿಗೆ ಸ್ಥಳವಿಲ್ಲ. ಸುರಕ್ಷಿತವಾಗಿರಿ. ಎಲ್ಲರೂ ಚೆನ್ನಾಗಿರಿ ಎಂದು ಪ್ರಾರ್ಥಿಸುತ್ತೇನೆ. ಲವ್ ಯೂ ಆಲ್ ಎಂದು ಬರೆದುಕೊಂಡಿದ್ದಾರೆ.
View this post on Instagram
ಅರ್ಜುನ್ ಮತ್ತು ಮಲೈಕಾ ನಾಲ್ಕು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಬಾಲಿವುಡ್ ನಲ್ಲಿ ನಡೆಯುವ ಪಾರ್ಟಿಗಳು, ಮದುವೆ ಕಾರ್ಯ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಈ ಜೋಡಿ ಯಾವಾಗಲೂ ಒಟ್ಟಿಗೆ ಇರುತ್ತಾರೆ. 2018 ರಲ್ಲಿ ಅರ್ಜುನ್ ಮತ್ತು ಮಲೈಕಾ ಮಾಧ್ಯಮಗಳ ಮುಂದೆ ತಮ್ಮ ಸಂಬಂಧವನ್ನು ಒಪ್ಪಿಕೊಂಡಿದ್ದರು. ಎಲ್ಲರಿಗೂ ಸುದ್ದಿ ತಿಳಿದ ನಂತರ ಇವರಿಬ್ಬರು ಎಲ್ಲೇ ಹೋದರೂ ಒಟ್ಟಿಗೆ ಹೋಗುತ್ತಿದ್ದರು. ಆದರೆ ಇತ್ತೀಚೆಗೆ ಇವರಿಬ್ಬರ ಬ್ರೇಕಪ್ ಬಗ್ಗೆ ಸುದ್ದಿ ಕೇಳಿಬರುತ್ತಿತ್ತು. ಅದಕ್ಕೆ ಇಂದು ಅವರು ಮುಕ್ತಾಯವಾಡಿದ್ದಾರೆ. ಇದನ್ನೂ ಓದಿ: ನೈಸ್ ರಸ್ತೆಯಲ್ಲಿ ರಾತ್ರಿ ವೇಳೆ ದ್ವಿಚಕ್ರ ವಾಹನ ಸಂಚಾರಕ್ಕೆ ನಿಷೇಧ
View this post on Instagram
ಈ ತಿಂಗಳ ಆರಂಭದಲ್ಲಿ ಅರ್ಜುನ್ ಅವರಿಗೆ ಕೋವಿಡ್ ಪಾಸಿಟಿವ್ ದೃಢವಾಗಿತ್ತು. ಪರಿಣಾಮ ಇವರು ಹೋಮ್ ಕ್ವಾರಂಟೈನ್ ಆಗಿದ್ದಾರೆ. ಈಗ ಸ್ವಲ್ಪ ಸುಧಾರಿಸಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.