ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ವಿಧಾನ ಸಭಾ ಕ್ಷೇತ್ರವ್ಯಾಪ್ತಿಯ ವಾರ್ಡ್ ನಂಬರ್ 44 ರ ಮಾರಪ್ಪನ ಪಾಳ್ಯದ ಗಜಾನನ ಸ್ಲಂ.2 ರಲ್ಲಿ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಆಶ್ರಯ ಯೋಜನೆಯಡಿ ಮೊದಲ ಹಂತದಲ್ಲಿ ಆರಂಭಿಸಿರುವ 50 ಮನೆಗಳ ಕಾಮಗಾರಿಯನ್ನು ಇದೇ ಜನವರಿ 30 ರೊಳಗೆ ಮುಗಿಸಬೇಕೆಂದು ಸ್ಥಳೀಯ ಶಾಸಕರೂ ಆದ ಅಬಕಾರಿ ಸಚಿವ ಕೆ.ಗೋಪಾಲಯ್ಯ ಬಿಬಿಎಂಪಿ ಎಂಜಿನಿಯರ್‍ಗಳಿಗೆ ಸೂಚಿಸಿದರು.
ಇಂದು ಬೆಳಿಗ್ಗೆ ಗಜಾನನ ಸ್ಲಂ.2 ರಲ್ಲಿ ಸಾರ್ವಜನಿಕ ಸೌಲಭ್ಯ ಕುರಿತು ಪರಿವೀಕ್ಷಣೆ ನಡೆಸಿ ಈ ಸೂಚನೆ ನೀಡಿದ ಸಚಿವರು, ಮನೆಗಳ ನಿರ್ಮಾಣ ಕಾರ್ಯ ವಿಳಂಬವಾಗಿರುದುವುದಕ್ಕೆ ಇಂಜಿನಿಯರ್ ಗಳ ವಿರುದ್ದ ಕಿಡಿಕಾರಿದರು. ಇದನ್ನೂ ಓದಿ: ಆರತಿ ತಟ್ಟೆ ಹಿಡಿದು ಪೂಜೆಗಾಗಿ ಎರಡು ಕುಟುಂಬಗಳ ನಡುವೆ ಕಿತ್ತಾಟ – ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಮನೆಗಳ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ಒಂದು ವೇಳೆ ಕಾಮಗಾರಿಯಲ್ಲಿ ಲೋಪ ಅಥವಾ ಕಳಪೆ ಕಾಮಗಾರಿ ಕಂಡುಬಂದರೆ ನಿಮ್ಮನ್ನೆ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇದೇ ವೇಳೆ ಶಂಕರ ಮಠ ಪಾರ್ಕ್ ನಿರ್ವಹಣೆ ಸರಿ ಇಲ್ಲದಿರುವುದನ್ನು ಗಮನಿಸಿದ ಸಚಿವರು, ಹಾಳಾಗಿರುವ ಗಿಡಗಳನ್ನು ತೆಗೆದು ಹೊಸ ಗಿಡಗಳನ್ನು ನೆಡಬೇಕು. ಅವುಗಳನ್ನು ಸರಿಯಾಗಿ ಪೋಷಣೆ ಮಾಡಬೇಕ ಎಂದು ಸೂಚಿಸಿದರು. ಇದನ್ನೂ ಓದಿ: ಕಾಳಿ ದೇವಿ ಪಾದದ ಕೆಳಗೆ ವ್ಯಕ್ತಿಯ ತಲೆ ಬುರುಡೆ!
ಈ ಸಂದರ್ಭದಲ್ಲಿ ಬಿಬಿಎಂಪಿ ಮಾಜಿ ಸದಸ್ಯ ಎಂ.ಮಹದೇವ್, ಪುಟ್ಟಣ್ಣ, ವೆಂಕಟೇಶಮೂರ್ತಿ, ರೈಲ್ವೇ ನಾರಾಯಣ್ ವೆಂಕಟೇಶ್ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.