ಮಂಗಳೂರು: ಮದುವೆ ಮನೆಯಲ್ಲಿ ಕೊರಗಜ್ಜನಿಗೆ ಅವಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಮದುಮಗ ನಾಪತ್ತೆಯಾಗಿದ್ದಾನೆ.
ಮಂಗಲ್ಪಾಡಿ ನಿವಾಸಿ ಅಹ್ಮದ್ ಮುಜಿತಾಬು(28) ಹಾಗೂ ಬಾಯಾರು ಪದವು ನಿವಾಸಿ ಮೊಯ್ದೀನ್ ಮುನಿಶ್ (19) ಬಂಧಿತ ಆರೋಪಿಗಳಾಗಿದ್ದು, ಮದುಮಗ ಉಮರುಲ್ ಬಾತಿಷ್ ಸದ್ಯ ತಲೆಮರೆಸಿಕೊಂಡಿದ್ದಾನೆ. ಇದನ್ನೂ ಓದಿ: ತುಳುನಾಡಿನ ಆರಾಧ್ಯ ದೈವ ಕೊರಗಜ್ಜನಿಗೆ ವರನಿಂದ ಅವಮಾನ!
ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದಲ್ಲಿ ಮರುಲ್ ಬಾತಿಷ್ ಕೊರಗಜ್ಜ ದೈವ ಹೋಲುವ ವೇಷ ಧರಿಸಿದ್ದ. ವೀಡಿಯೋ ವೈರಲ್ ಆಗುತ್ತಿದ್ದಂತೆ ಹಿಂದೂ ಹಾಗೂ ಮುಸ್ಲಿಂ ಸಮುದಾಯದ ಮಂದಿ ಆಕ್ರೋಶ ಹೊರ ಹಾಕಿದ್ದರು.
ವಧುವಿನ ಮನೆಗೆ ರಾತ್ರಿ ವರನ ಬಳಗದವರು ಆಗಮಿಸಿದ್ದು, ಸ್ನೇಹಿತರೊಂದಿಗೆ ಬಾತಿಷ್ ಕೊರಗಜ್ಜ ದೈವ ಹೋಲುವ ವೇಶ ಧರಿಸಿ ಕುಣಿದಿದ್ದ. ತಲೆಗೆ ಅಡಿಕೆ ಹಾಳೆ ಟೋಪಿ, ಮುಖಕ್ಕೆ ಕಪ್ಪು ಬಣ್ಣ ಹಚ್ಚಿಕೊಂಡು ಕುಣಿದಿದ್ದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದು, ಘಟನೆಯಿಂದ ಹಿಂದೂ ಹಾಗೂ ಮುಸ್ಲಿಂ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿತ್ತು. ಇದನ್ನೂ ಓದಿ: ಆರತಿ ತಟ್ಟೆ ಹಿಡಿದು ಪೂಜೆಗಾಗಿ ಎರಡು ಕುಟುಂಬಗಳ ನಡುವೆ ಕಿತ್ತಾಟ – ದೃಶ್ಯ ಸಿಸಿಟಿವಿಯಲ್ಲಿ ಸೆರೆ
ವರ ಬಾತಿಷ್ ಹಾಗೂ ಆತನ ಸ್ನೇಹಿತರ ವಿರುದ್ಧ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.