ಮಕರ ಸಂಕ್ರಾಂತಿಗೆ ಗಾಳಿಪಟ ತಂತಿ ಮಾರಾಟ, ಸಂಗ್ರಹಣೆ ನಿಷೇಧ

Public TV
1 Min Read
to kite istock wide 170810

ಗಾಂಧಿನಗರ: ನಗರದಲ್ಲಿ ನೈಲಾನ್, ಸಿಂಥೆಟಿಕ್ ಗಾಜಿನ ಲೇಪಿತ ಹಾಗೂ ಜೈವಿಕ ವಿಘಟನೀಯವಲ್ಲದ ವಸ್ತುಗಳಿಂದ ತಯಾರಿಸಿದ ಗಾಳಿಪಟದ ತಂತಿಗಳ ಉತ್ಪಾದನೆ, ಸಂಗ್ರಹಣೆ ಮಾರಾಟ ಹಾಗೂ ಬಳಕೆಯನ್ನು ಅಹಮದಾಬಾದ್ ಪೊಲೀಸರು ನಿಷೇಧಿಸಿದ್ದಾರೆ.

ಮಕರ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ದೇಶಾದ್ಯಂತ ಗಾಳಿಪಟ ಹಾರಿಸುವ ಪರಿಕಲ್ಪನೆ ಹಲವು ವರ್ಷಗಳಿಂದಲೇ ಇದೆ. ಇವುಗಳಲ್ಲಿ ಬಳಕೆ ಮಾಡಲಾಗುವ ಕೆಲವು ವಸ್ತುಗಳು ಮನುಷ್ಯರಿಗೆ ಹಾಗೂ ಜಾನುವಾರುಗಳಿಗೆ ಮಾರಣಾಂತಿಕವಾಗಿ ಗಾಯಮಾಡುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಅಹಮದಾಬಾದ್‌ನಲ್ಲಿ ಗಾಳಿಪಟ ಹಾರಿಸುವಲ್ಲಿ ನಿರ್ಬಂಧ ಹೇರಿದೆ. ಇದನ್ನೂ ಓದಿ: ಮಕರ ಸಂಕ್ರಾಂತಿಗೆ ಗಾಳಿಪಟ ಹಾರಿಸೋದೇಕೆ? ವಿಶೇಷತೆ ಏನು?

kite

ಗಾಳಿಪಟಗಳಲ್ಲಿ ಸಮುದಾಯಕ್ಕೆ ಧಕ್ಕೆ ತರುವಂತಹ ಘೋಷಣೆಗಳು, ಸಾರ್ವಜನಿಕ ಪ್ರದೇಶಗಳಲ್ಲಿ, ಕಬ್ಬಿಣದ ಸರಳು ಹಾಗೂ ಮರದ ತುಂಡುಗಳಿಂದ ತಯಾರಿಸಲಾದ ಗಾಳಿಪಟಗಳನ್ನೂ ನಿಷೇಧಿಸಿದೆ. ಈ ನಿರ್ಬಂಧ ಜನವರಿ 8ರಿಂದ 18ರ ವರೆಗೆ ಜಾರಿಯಲ್ಲಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಗಾಳಿಪಟದ ದಾರ ಸಿಲುಕಿ ವ್ಯಕ್ತಿಗೆ ಗಂಭೀರ ಗಾಯ – ವಿಡಿಯೋ ವೈರಲ್

Kite Strings

ಅಹಮದಾಬಾದ್‌ನಲ್ಲಿ ಈ ನಿರ್ಬಂಧವನ್ನು ಉಲ್ಲಂಘಿಸಿದ ವ್ಯಕ್ತಿಯ ಮೇಲೆ ಐಪಿಸಿ ಸೆಕ್ಷನ್ 188(ಸರ್ಕಾರಿ ಆದೇಶ ಉಲ್ಲಂಘನೆ) ಅಡಿ ಕೇಸ್ ದಾಖಲಿಸಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *