ಉದ್ದನೆಯ ಮೀಸೆ ಬಿಟ್ಟ ಕಾನ್ಸ್​​ಟೇಬಲ್ ಅಮಾನತು

Public TV
1 Min Read
police

ಭೋಪಾಲ್: ತಲೆಕೂದಲು ಹಾಗೂ ಮೀಸೆಯನ್ನು ಕತ್ತರಿಸದೇ ಅಶಿಸ್ತು ತೋರಿದ್ದಕ್ಕೆ ಮಧ್ಯಪ್ರದೇಶದ ಕಾನ್ಸ್​​ಟೇಬಲ್ ಒಬ್ಬರನ್ನು ಸೇವೆಯನ್ನು ಅಮಾನತುಗೊಳಿಸಲಾಗಿದೆ.

ರಾಕೇಶ್ ರಾಣಾ ಅಮಾನತಾದ ಕಾನ್ಸ್​​ಟೇಬಲ್. ಇವರು ಮೀಸೆ ಕುತ್ತಿಗೆಯವರೆಗೂ ಉದ್ದವಾಗಿ ಬೆಳೆಸಿದ್ದ ಕಾರಣ ಅದನ್ನು ಟ್ರಿಮ್ ಮಾಡಲು ಅಧಿಕಾರಿಗಳು ಸೂಚಿಸಿದ್ದರು. ಆದರೆ ಅಧಿಕಾರಿಗಳ ಈ ಆದೇಶವನ್ನು ರಾಕೇಶ್ ಧಿಕ್ಕರಿಸಿದ್ದರು. ಈ ಕಾರಣಕ್ಕೆ ಅವರನ್ನು ಅಮಾನತು ಮಾಡಿರುವುದಾಗಿ ಸಹಾಯಕ ಪೊಲೀಸ್ ಮಹಾನಿರೀಕ್ಷಕ ಪ್ರಶಾಂತ್ ಶರ್ಮಾ ತಿಳಿಸಿದ್ದಾರೆ. ಇದನ್ನೂ ಓದಿ: ಕೋವಿಡ್ ಭೀತಿಗೆ ವಿಷ ಸೇವಿಸಿದ ಕುಟುಂಬ – ತಾಯಿ, ಮಗು ಬಲಿ

police web

ಉದ್ದ ಕೂದಲು ಮತ್ತು ಮೀಸೆಯನ್ನು ಬೆಳೆಸಿದ್ದಕ್ಕೆ ಅವರ ಮೇಲೆ ಶಿಸ್ತು ಕ್ರಮವನ್ನು ತೆಗೆದುಕೊಂಡು ಅಮಾನತು ಮಾಡಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ರಾಕೇಶ್ ನಾನು ಶಿಸ್ತಿನಿಂದಲೇ ಸಮವಸ್ತ್ರವನ್ನು ಧರಿಸುತ್ತೇನೆ. ಆದರೆ ಬಹಳ ಸಮಯದಿಂದ ಇರುವ ಮೀಸೆಯನ್ನು ಯಾವುದೇ ಕಾರಣಕ್ಕೂ ಕತ್ತರಿಸುವುದಿಲ್ಲ. ಇದು ನನ್ನ ಆತ್ಮಗೌರವಕ್ಕೆ ಸಂಬಂಧಿಸಿದ ವಿಷಯ ಎಂದಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಸೋಂಕಿಗೆ ತುತ್ತಾದವರಲ್ಲಿ ಯುವಕರದ್ದೇ ಸಿಂಹ ಪಾಲು!

Share This Article
Leave a Comment

Leave a Reply

Your email address will not be published. Required fields are marked *