ಅಧಿಕಾರಿಯನ್ನು ಕೊಲ್ಲಲು ಸಂಚು ಮಾಡಿದ ಆಡಿಯೋ ಕ್ಲಿಪ್ ರಿಲೀಸ್ – ನಟ ದಿಲೀಪ್ ವಿರುದ್ಧ FIR

Public TV
2 Min Read
Dileep

ತಿರುವನಂತಪುರಂ: ಕೇರಳದ ನಟ ದಿಲೀಪ್ ತನ್ನ ವಿರುದ್ಧ ತನಿಖೆ ನಡೆಸುತ್ತಿರುವ ಅಧಿಕಾರಿಯನ್ನು ಕೊಲ್ಲಲು ಸಂಚು ಮಾಡಿದ ಆಡಿಯೋ ಕ್ಲಿಪ್ ರಿಲೀಸ್ ಆಗಿದೆ. ಈ ಪರಿಣಾಮ ಅವರ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

ದಿಲೀಪ್ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿ ಮತ್ತು ಉಪ ಅಧೀಕ್ಷಕ ಬೈಜು ಪೌಲೋಸ್ ದಿಲೀಪ್ ವಿರುದ್ಧ ಮಾಹಿತಿಯನ್ನು ಕಲೆ ಹಾಕುತ್ತಿದ್ದರು. ಅದಕ್ಕೆ ದಿಲೀಪ್‍ನ ಸೋದರ ಮಾವ ಸೂರಜ್ ಸೇರಿ ಪೌಲೋಸ್ ವಿರುದ್ಧ ಕೊಲೆ ಸಂಚನ್ನು ಫೋನ್ ನಲ್ಲಿ ಚರ್ಚೆ ಮಾಡಿದ್ದಾರೆ. ಈಗ ಆ ಆಡಿಯೋ ಕ್ಲಿಪ್ ಹೊರಬಂದ ಕೆಲವೇ ದಿನಗಳಲ್ಲಿ, ರಾಜ್ಯ ಪೊಲೀಸ್ ಅಪರಾಧ ವಿಭಾಗವು ದಿಲೀಪ್ ವಿರುದ್ಧ ಪ್ರಥಮ ಮಾಹಿತಿ ವರದಿ(ಎಫ್‍ಐಆರ್)ಯನ್ನು ದಾಖಲಿಸಿದೆ. ಇದನ್ನೂ ಓದಿ: 735 ಕೋಟಿ ರೂ. ಗೆ ನ್ಯೂಯಾರ್ಕ್‍ನಲ್ಲಿ ಐಷಾರಾಮಿ ಹೋಟೆಲ್ ಖರೀದಿಸಿದ ರಿಲಯನ್ಸ್

IPHONE 2

ದಿಲೀಪ್ ಫೋನ್ ನಲ್ಲಿ ಮಾತನಾಡುತ್ತಿರುವುದು ಸೋದರ ಮಾವ ಸೂರಜ್ ಧ್ವನಿ ಎಂದು ಗುರುತಿಸಲಾಗಿದೆ. ಈ ಆಡಿಯೋದಲ್ಲಿ ಇವರಿಬ್ಬರು ಬೈಜು ಪೌಲೋಸ್ ಅವರ ಹತ್ಯೆಯ ಸಂಚಿನ ಬಗ್ಗೆ ಮಾತನಾಡುವುದನ್ನು ಕೇಳಬಹುದು. ಈ ಸಂಭಾಷಣೆ ಸೂರಜ್ ಮತ್ತು ದಿಲೀಪ್ ನಡುವೆ ನವೆಂಬರ್ 2017 ರಲ್ಲಿ ನಡೆದಿತ್ತು. ಆದರೆ ಈಗ ರಿಲೀಸ್ ಆಗಿದ್ದು, ದಿಲೀಪ್ ಸೇರಿ 6 ಜನರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ.

ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಸರ್ಕಾರ ಹೊಸ ತನಿಖಾ ತಂಡವನ್ನು ರಚಿಸಿದೆ. ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ(ಎಡಿಜಿಪಿ) ಶ್ರೀಜಿತ್ ತಂಡದ ಮುಖ್ಯಸ್ಥರಾಗಿರುತ್ತಾರೆ. ಕೆಪಿ ಫಿಲ್ಪ್, ಇನ್ಸ್‍ಪೆಕ್ಟರ್ ಜನರಲ್(ಐಜಿ), ಕ್ರೈಂ ಬ್ರಾಂಚ್ ಕೂಡ ತನಿಖೆಯ ಭಾಗವಾಗಲಿದೆ. ನೆಡುಂಬಸ್ಸೆರಿಯ ಸ್ಟೇಷನ್ ಹೌಸ್ ಆಫೀಸರ್ ಕೂಡ ತನಿಖಾ ತಂಡದ ಭಾಗವಾಗಿರುತ್ತೆ. ಬೈಜು ಪೌಲೋಸ್ ಅವರು ತನಿಖಾಧಿಕಾರಿಯಾಗಿ ಮುಂದುವರಿಯಲಿದ್ದಾರೆ. ಅಪರಾಧ ವಿಭಾಗದ ಅಧಿಕಾರಿಗಳಾದ ಸುದರ್ಶನ್ ಮತ್ತು ಸೋಜನ್ ಕೂಡ ತಂಡದ ಭಾಗವಾಗಲಿದ್ದಾರೆ.

POLICE JEEP

ಪ್ರಸ್ತುತ ದಿಲೀಪ್, ಸೂರಜ್, ದಿಲೀಪ್ ಅವರ ಸಹೋದರ ಅನೂಪ್, ಬಾಲಚಂದ್ರಕುಮಾರ್ ‘ವಿಐಪಿ’ ಎಂದು ಸಂಬೋಧಿಸಿದ ವ್ಯಕ್ತಿ ಮತ್ತು ಇತರ ಇಬ್ಬರು ಸೇರಿದಂತೆ ಆರು ಜನರ ವಿರುದ್ಧ ಹೊಸ ಎಫ್‌ಐಆರ್‌ನಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ದಿಲೀಪ್ ಅವರನ್ನು ವಿಚಾರಣೆಗೆ ಒಳಪಡಿಸಲು ಕ್ರೈಂ ಬ್ರಾಂಚ್ ನೋಟಿಸ್ ನೀಡಲಿದ್ದು, ಅವರನ್ನು ಮಂಗಳವಾರ ವಿಚಾರಣೆಗೆ ಕರೆಯಲಾಗುವುದು ಎಂದು ತಿಳಿಸಿದೆ. ಇದನ್ನೂ ಓದಿ: ಗರ್ಭಿಣಿಯರು, ವಿಕಲಚೇತನರು ಮನೆಯಿಂದ್ಲೇ ಸರ್ಕಾರಿ ಕೆಲಸ ಮಾಡ್ಬೋದು: ಜಿತೇಂದ್ರ ಸಿಂಗ್

Dileep after

ಫೆಬ್ರವರಿ 2017 ರಲ್ಲಿ ಎರ್ನಾಕುಲಂನಲ್ಲಿ ನಟಿ ಶೂಟಿಂಗ್ ಮುಗಿಸಿಕೊಂಡು ಹೋಗುತ್ತಿರಬೇಕಾದರೆ ಆಕೆಯನ್ನು ಅಪಹರಿಸಲಾಗಿದೆ. ನಂತರ ಚಲಿಸುತ್ತಿದ್ದ ವಾಹನದಲ್ಲಿ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಅದು ಅಲ್ಲದೇ ಈ ದೃಶ್ಯಗಳನ್ನು ರೆಕಾರ್ಡ್ ಸಹ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪಲ್ಸರ್ ಸುನಿಯನ್ನು ಬಂಧಿಸಲಾಯಿತು. ಆದರೆ ಈ ಕೃತ್ಯದ ಹಿಂದೆ ನಟ ದಿಲೀಪ್ ಮಾಸ್ಟರ್ ಮೈಂಡ್ ಇದೆ ಎಂದು ಆರೋಪ ಕೇಳಿಬಂದಿತ್ತು. ಈ ಪರಿಣಾಮ ದಿಲೀಪ್ ಮೂರು ತಿಂಗಳು ಜೈಲು ವಾಸ ಅನುಭವಿಸಿದ್ದರು. ಆದರೂ ಈ ಪ್ರಕರಣದ ವಿಚಾರಣೆ ಇನ್ನೂ ಮುಗಿದಿಲ್ಲ.

Share This Article
Leave a Comment

Leave a Reply

Your email address will not be published. Required fields are marked *