ಅತ್ತಿಗೆ ಕತ್ತು ಹಿಸುಕಿ ಕೊಂದ ಮೈದುನ ಅರೆಸ್ಟ್

Public TV
1 Min Read
crime

ಚೆನ್ನೈ: ಅತ್ತಿಗೆಯನ್ನು ಮೈದುನ ಮತ್ತು ಅವನ ಸ್ನೇಹಿತರು ಸೇರಿ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ತಮಿಳುನಾಡಿನ ತಿರುಪೋರೂರಿನ ಕಾಮರಾಜರ್ ನಗರದಲ್ಲಿ ನಡೆದಿದ್ದು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಸಂತ್ರಸ್ತೆ ಶಾಹಿನ್ಶಾ (26) ಕೊಲೆಗಿಡಾದ ಮಹಿಳೆ. ಕಾರ್ತಿಕ್ (19) ಬಂಧನಕ್ಕೆ ಒಳಗಾದ ಆರೋಪಿ. ಶಾಹಿನ್ಶಾ ತನ್ನ ಅಣ್ಣನ್ನು ಕೊಂದಿದ್ದಾಳೆ ಎಂಬ ಶಂಕೆಯಿಂದ ಆರೋಪಿಯು ಈ ಕೊಲೆಗೈದಿದ್ದಾನೆ. ಇದನ್ನೂ ಓದಿ: ಮೋದಿ ಮೇಲೆ ಅಲ್ಲ ಇದು ಪ್ರತಿಯೊಬ್ಬ ಭಾರತೀಯನ ಮೇಲೆ ನಡೆದ ದಾಳಿ: ಕಂಗನಾ

murder1

ಮೃತಳು ಭಾನುವಾರ ತನ್ನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ತನ್ನ ಇಬ್ಬರು ಗಂಡು ಮಕ್ಕಳೊಂದಿಗೆ ವಾಸಿಸುತ್ತಿದ್ದಳು. ಕಾರ್ತಿಕ್ ಮತ್ತು ಆತನ ಸ್ನೇಹಿತರು ಕುಡಿದ ಅಮಲಿನಲ್ಲಿದ್ದ ಸಂದರ್ಭದಲ್ಲಿ ಟವೆಲ್‍ನಿಂದ ಅವರ ಕುತ್ತಿಗೆಗೆ ಸುತ್ತಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಘಟನೆಯನ್ನು ಕಂಡ ಶಾಹಿನ್ಶಾಳ ತಾಯಿಯು ಕೆಲಬಕ್ಕಂ ಪೊಲೀಸರಿಗೆ ಮಾಹಿತಿ ನೀಡಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಪಂಜಾಬ್ ಫ್ಲೈ ಓವರ್‌ನಲ್ಲಿ 20 ನಿಮಿಷ ಸಿಲುಕಿದ ಮೋದಿ – ಕಾರ್ಯಕ್ರಮ ರದ್ದು

ಮೃತಳು ಕಾರ್ತಿಕ್ ಅಣ್ಣನಾದ ವಿಜಯ್ ಅವರನ್ನು ಮದುವೆ ಆಗಿದ್ದಳು. ಆದರೆ ದುರದೃಷ್ಟವಶಾತ್, ಮದುವೆಯಾದ 2 ವರ್ಷಗಳ ನಂತರ ಅವರು ನಿಧನರಾದರು. ಗಂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನೆರೆಹೊರೆಯವರಿಗೆ ಶಾಹಿನ್ಶಾ ತಿಳಿಸಿದ್ದಳು. ಆದರೆ ಈ ಹಿನ್ನೆಲೆ ವಿಜಯ ಅವರ ಸಹೋದರ ಕಾರ್ತಿಕ್ ಮೃತಳ ವಿರುದ್ಧ ಶಂಕಿಸಿ ಅಣ್ಣನದು ಆತ್ಮಹತೈಯೋ ಅಥವಾ ಅತ್ತಿಗೆ ಕುತಂತ್ರವೋ ಅಂತಾ ರಹಸ್ಯವನ್ನು ಬಹಿರಂಗಪಡಿಸಲು ಪ್ರಯತ್ನಿಸುತ್ತಿದ್ದ.

POLICE JEEP

ಈ ವೇಳೆ ಶಾಹಿನ್ಶಾ ಮೈದುನನಿಗೆ ನನ್ನನ್ನು ಪೀಡಿಸಿದರೆ ನಿನ್ನ ಸಹೋದರನಿಗಾದ ಗತಿ ನಿನಗೂ ಬರುತ್ತದೆ ಎಂದು ಬೆದರಿಸಿದ್ದಳು. ಈ ಕಾರಣಕ್ಕೆ ಆರೋಪಿಗಳು ಶಾಹಿನ್ಶಾಳನ್ನು ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *