ಪತಿ ಬಿಟ್ಟಾಕೆ ಪ್ರಿಯಕರನೊಂದಿಗೂ ಜಗಳ ಮಾಡಿಕೊಂಡು ಕೊಲೆಯಾದ್ಲು!

Public TV
1 Min Read
murder 3

ಆನೇಕಲ್: ಪತಿಯಿಂದ ದೂರವಾಗಿದ್ದ ಮಹಿಳೆ ಆಸ್ತಿ ವಿಚಾರಕ್ಕೆ ಪ್ರಿಯಕರನೊಂದಿಗೆ ಜಗಳ ಮಾಡಿಕೊಂಡು ಆತನಿಂದಲೇ ಕೊಲೆಯಾಗಿರುವ ಘಟನೆ ಬೆಂಗಳೂರು ಹೊಸೂರು ಮುಖ್ಯರಸ್ತೆ ಹೊಸರೋಡ್ ಬಳಿ ನಡೆದಿದೆ.

ಅರ್ಚನಾ ರೆಡ್ಡಿ ಕೊಲೆಯಾದ ಮಹಿಳೆ. ಪ್ರಿಯಕರ ನವೀನ್ ಕುಮಾರ್ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಇವರು ಆನೇಕಲ್ ತಾಲೂಕಿನ ಜಿಗಣಿ ನಿವಾಸಿಯಾಗಿದ್ದರು.

anekal murder 1

ಅರ್ಚನಾ ರೆಡ್ಡಿ 5 ವರ್ಷಗಳ ಹಿಂದೆ ಪತಿಯಿಂದ ದೂರವಾಗಿದ್ದು, ನಂತರದ ದಿನಗಳಲ್ಲಿ ಪ್ರಿಯಕರ ನವೀನ್ ಕುಮಾರ್ ಜೊತೆ ಇದ್ದಳು. ಇತ್ತೀಚೆಗೆ ಚನ್ನಪಟ್ಟಣ ಬಳಿಯ ಆಸ್ತಿಯೊಂದರ ಸಲುವಾಗಿ ಇಬ್ಬರ ನಡುವೆ ಜಗಳವಾಗಿದೆ. ಅಂದಿನಿಂದ ಅರ್ಚನಾ ರೆಡ್ಡಿ ಮೊದಲ ಪತಿಯ ಮಗನೊಂದಿಗೆ ಬೆಳ್ಳಂದೂರಿನಲ್ಲಿ ವಾಸವಿದ್ದಳು. ಇದನ್ನೂ ಓದಿ: ಚರಂಡಿ ಸ್ವಚ್ಛಗೊಳಿಸುವ ವಿಚಾರಕ್ಕೆ ಜಗಳ – ದೆಹಲಿ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಮಗನ ಹತ್ಯೆ

ನಿನ್ನೆ ಜಿಗಣಿ ಪುರಸಭೆಯ ಚುನಾವಣೆಯಲ್ಲಿ ಮತದಾನ ಮಾಡಲು ಅರ್ಚನಾ ಜಿಗಣಿಗೆ ತೆರಳಿರುವ ಬಗ್ಗೆ ಮಾಹಿತಿ ಪಡೆದಿದ್ದ ನವೀನ್ ಕುಮಾರ್, ತನ್ನ ಸಹಚರರೊಂದಿಗೆ ಹೊಸರೋಡ್ ಬಳಿ ಕಾದು ಕುಳಿತಿದ್ದರು. ರಾತ್ರಿ ಅರ್ಚನಾ, ಮಗ ಹಾಗೂ ಮತ್ತಿಬ್ಬರು ಯುವಕರೊಂದಿಗೆ ಕಾರಿನಲ್ಲಿ ಬರುವ ವೇಳೆ ನವೀನ್ ಕುಮಾರ್ ಹಾಗೂ ಸಹಚರರು ಹಾಕಿ ಸ್ಟಿಕ್ ಹಾಗೂ ಲಾಂಗ್‌ನಿಂದ ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಸೋಶಿಯಲ್ ಮೀಡಿಯಾದಲ್ಲಿ ನಿಂದಿಸಿದ್ದಕ್ಕೆ ಯುವಕನ ಅಪಹರಿಸಿ ಕೊಂದರು!

Police Jeep

ಈ ವೇಳೆ ಕಾರು ಚಾಲಕ ಅರ್ಚನಾ ಮಗ ಇನ್ನುಳಿದವರು ಪರಾರಿಯಾಗಿದ್ದು, ನವೀನ್ ಕುಮಾರ್ ಹಾಗೂ ಸಹಚರರು ಅರ್ಚನಾಳನ್ನು ನದುರಸ್ತೆಯಲ್ಲಿ ಕೊಚ್ಚಿ ಕೊಲೆ ಮಾಡಿದ್ದಾರೆ. ಈ ಸಂಬಂಧ ಎಲೆಕ್ಟ್ರಾನ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನವೀನ್ ಹಾಗೂ ಸಹಚರರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *