ಭೋಪಾಲ್: 40 ರಿಂದ 50 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಪ್ರಧಾನಿ ನರೇಂದ್ರ ಮೋದಿ ಅವರಿಂದ ಹೆಚ್ಚು ಪ್ರಭಾವಿತರಾಗಿದ್ದಾರೆಯೇ ಹೊರತು, ಜೀನ್ಸ್ ತೊಟ್ಟ ಹುಡುಗಿಯರಲ್ಲ ಎಂದು ಹೇಳುವ ಮೂಲಕ ಮಧ್ಯಪ್ರದೇಶದ ಮಾಜಿ ಸಿಎಂ ಮತ್ತು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಮತ್ತೊಂದು ವಿವಾದವನ್ನು ಹುಟ್ಟುಹಾಕಿದ್ದಾರೆ.
ದಿಗ್ವಿಜಯ ಸಿಂಗ್ ಅವರು ಭೋಪಾಲ್‍ನ ತುಳಸಿ ನಗರದ ನರ್ಮದಾ ಮಂದಿರ ಭವನದಲ್ಲಿ ಒಂದು ದಿನದ ಜನ ಜಾಗರಣ ತರಬೇತಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಇದನ್ನೂ ಓದಿ: 348 ಪಾಸಿಟಿವ್, 198 ಮಂದಿ ಡಿಸ್ಚಾರ್ಜ್
ಮೋದಿಯಿಂದ ಯಾರು ಪ್ರಭಾವಿತರಾಗಿದ್ದಾರೆ ಮತ್ತು ಯಾರು ಅಲ್ಲ ಎಂದು ಪ್ರಶ್ನಿಸಿದರು. ಆಗ ಅವರೇ 40 ರಿಂದ 50 ವರ್ಷ ವಯಸ್ಸಿನ ಮಹಿಳೆಯರು ಪ್ರಧಾನಿ ಮೋದಿಯಿಂದ ಸ್ವಲ್ಪ ಹೆಚ್ಚು ಪ್ರಭಾವಿತರಾಗಿದ್ದಾರೆ. ಆದರೆ ಜೀನ್ಸ್ ಧರಿಸುವ ಮತ್ತು ಮೊಬೈಲ್ ಇಟ್ಟುಕೊಳ್ಳುವ ಹುಡುಗಿಯರ ಮೇಲೆ ಅವರ ಪ್ರಭಾವ ಏನೂ ಬೀರಿಲ್ಲ ಎಂದು ಹೇಳಿದರು.
https://twitter.com/Rakesh5_/status/1475129047797485568
ಇದೇ ಸಂದರ್ಭದಲ್ಲಿ ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ಮಾತನಾಡಿದ ಅವರು, ಸಾವರ್ಕರ್ ಗೋಪೂಜೆಯನ್ನು ಬೆಂಬಲಿಸಲಿಲ್ಲ. ಗೋಮಾಂಸ ತಿನ್ನುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸಾವರ್ಕರ್ ತಮ್ಮ ಪುಸ್ತಕವೊಂದರಲ್ಲಿ ಬರೆದಿದ್ದಾರೆ. ಅದಕ್ಕೆ ಹಿಂದೂ ಧರ್ಮಕ್ಕೂ ಹಿಂದುತ್ವಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದರು.