ನವದೆಹಲಿ: ಹಿರಿಯರು ಮತ್ತು ಕಿರಿಯರ ನಡುವಿನ ಸಂಘರ್ಷದಿಂದ ಸಿಆರ್‌ಪಿಎಫ್ ಘಟಕಗಳಲ್ಲಿ ನಡೆಯುತ್ತಿರುವ ಆತ್ಮಹತ್ಯೆ ಪ್ರಕರಣಗಳನ್ನು ನಿಯಂತ್ರಿಸಲು ಸಂಸ್ಕಾರ ಶಾಲೆಗಳನ್ನು ತೆರೆಯಲು ತೀರ್ಮಾನಿಸಿದೆ.
ದೇಶದ ಎಲ್ಲ (Central Reserve Police Force) ಸಿಆರ್‌ಪಿಎಫ್ ಬೆಟಾಲಿಯನ್‍ಗಳಲ್ಲಿ ಶಾಲೆ ಆರಂಭಿಸುವ ಬಗ್ಗೆ ಸಿಆರ್‌ಪಿಎಫ್ ಕಲ್ಯಾಣ ಇಲಾಖೆ ಎಲ್ಲ ಬೆಟಾಲಿಯನ್‌ಗಳಿಗೆ ಪತ್ರ ಕಳುಹಿಸಿದ್ದು ಶೀಘ್ರದಲ್ಲಿ ಇವು ಕಾರ್ಯಾರಂಭವಾಗಲಿದೆ. ಸಂಸ್ಕಾರ ಶಾಲಾಗಳು ಹೇಗೆ ಕಾರ್ಯನಿರ್ವಹಿಸಲಿವೆ, ಇದರ ಸ್ವರೂಪ ಹೇಗಿರಲಿದೆ ಎನ್ನುವ ಬಗ್ಗೆ ಯಾವುದೇ ಸ್ಪಷ್ಟ ಚಿತ್ರಣಗಳು ತಿಳಿದು ಬಂದಿಲ್ಲ, ಅದಾಗ್ಯೂ ಸಂಸ್ಕಾರ ಶಾಲಾಗಳನ್ನು ಪ್ರಾರಂಭಿಸಲು ಹಿರಿಯ ಅಧಿಕಾರಿಗಳು ಎಲ್ಲ ಬೆಟಾಲಿಯನ್‍ಗಳಿಗೆ ಪತ್ರದ ಮೂಲಕ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿ ನಿಜವಾದ ಹಿಂದೂ ಅಲ್ಲ: ನಾರಾಯಣಸ್ವಾಮಿ ವಾಗ್ದಾಳಿ
ಮಾಹಿತಿಗಳ ಪ್ರಕಾರ ಸಂಸ್ಕಾರ ಶಾಲೆಗಳಲ್ಲಿ ಹಿರಿಯರು ಮತ್ತು ಕಿರಿಯ ಅಧಿಕಾರಿಗಳ ನಡುವೆ ಬಾಂಧ್ಯವ ಹೆಚ್ಚಿಸಲು ಕಾರ್ಯ ನಡೆಯಲಿದ್ದು, ಮನಸ್ಥಾಪಗಳನ್ನು ಬದಿಗೊತ್ತುವ ಪ್ರಯತ್ನ ನಡೆಯಲಿದೆ. ಇಲ್ಲಿ ಹಿರಿಯರು ತಮ್ಮ ಅನುಭವದ ಪಾಠಗಳನ್ನು ಮಾಡಲಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಪಾದಯಾತ್ರೆ ಹಿನ್ನೆಲೆ ಕೊಡಗಿನ ತಲಕಾವೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸೇನೆಯಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ ಪ್ರಕರಣಗಳನ್ನು ತಡೆಯಲು ಸಿಆರ್‌ಪಿಎಫ್‌ನಲ್ಲಿ ಅನುಷ್ಠಾನಗೊಳಿಸುತ್ತಿರುವ ಐಡಿಯಾಗಳಲ್ಲಿ ‘ಸಂಸ್ಕಾರ ಶಾಲಾ’ ಕೂಡ ಒಂದಾಗಿದೆ. ಸಂಘರ್ಷವನ್ನು ತಪ್ಪಿಸಲು ಉಪಾಯ ನೀಡುವಂತೆ ಹಿಂದೆ ಕೇಳಲಾಗಿತ್ತು. ಸಂಸ್ಕಾರ ಶಾಲಾ ಮೂಲಕ ಸೈನಿಕರಿಗೆ ಸಂಸ್ಕಾರ ಹೇಳಿಕೊಡಲಿದ್ದು ಇತರೆ ಸಹೋದ್ಯೋಗಿಗಳ ಜೊತೆಗೆ ವರ್ತಿಸುವುದನ್ನು ಹೇಳಿಕೊಡಲಿದ್ದಾರೆ ಎನ್ನಲಾಗಿದೆ.
2020ರಿಂದ ಈ ವರ್ಷ ಸೆಪ್ಟೆಂಬರ್ 13ರವರೆಗೆ 101 ಆತ್ಮಹತ್ಯೆಗಳನ್ನು CRPF ಈ ವರದಿ ಮಾಡಿದೆ. 2020ರಲ್ಲಿ 60 ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ ಎಂದು ಸಿಆರ್‌ಪಿಎಫ್ ತಿಳಿಸಿದೆ. ಈ ವರ್ಷ 41 ವರದಿಯಾಗಿದೆ. 2019ರಲ್ಲಿ 42, 2018ರಲ್ಲಿ 36 ವರದಿಯಾಗಿದೆ.