ದೇಶದಲ್ಲಿ 200ರ ಗಡಿದಾಟಿದ ಓಮಿಕ್ರಾನ್ ಸೋಂಕಿತರ ಸಂಖ್ಯೆ – ಮೋದಿ ಗುರುವಾರ ಮಹತ್ವದ ಸಭೆ

Public TV
1 Min Read
OMICRON

ನವದೆಹಲಿ: ದೇಶದಲ್ಲಿ ಓಮಿಕ್ರಾನ್ ಪ್ರಕರಣಗಳು ದಿನ ಕಳೆದಂತೆ ಹೆಚ್ಚಾಗುತ್ತಿವೆ. 15 ರಾಜ್ಯಗಳಲ್ಲಿ 224ಕ್ಕೂ ಹೆಚ್ಚು ಪ್ರಕರಣಗಳು ವರದಿ ಆಗಿದ್ದು, ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ನಾಳೆ ಪ್ರಧಾನಿ ನರೇಂದ್ರ ಮೋದಿ ಉನ್ನತಮಟ್ಟದ ಸಭೆ ನಡೆಸಿ ಸಮೀಕ್ಷೆ ನಡೆಸಲು ತೀರ್ಮಾನಿಸಿದ್ದಾರೆ.

NARENDRA MODI 7

ದೆಹಲಿಯಲ್ಲಿ 57, ಮಹಾರಾಷ್ಟ್ರದಲ್ಲಿ 54, ತೆಲಂಗಾಣದಲ್ಲಿ 24, ಕರ್ನಾಟಕದಲ್ಲಿ 19, ರಾಜಸ್ತಾನದಲ್ಲಿ 18, ಕೇರಳದಲ್ಲಿ 15, ಗುಜರಾತ್‍ನಲ್ಲಿ 14 ಪ್ರಕರಣಗಳು ವರದಿ ಆಗಿವೆ. ಜಮ್ಮುಕಾಶ್ಮೀರದಲ್ಲಿ ಮೂರು ಓಮಿಕ್ರಾನ್ ಕೇಸ್ ಪತ್ತೆ ಆಗಿವೆ. ಇದನ್ನೂ ಓದಿ: ಕಾಶ್ಮೀರದಲ್ಲಿ ಉಗ್ರರ ದಾಳಿ – ಪೊಲೀಸ್‌ ಅಧಿಕಾರಿ, ನಾಗರಿಕ ಹತ್ಯೆ

RAHUL GANDHI 1

ಈ ಮಧ್ಯೆ, ಬೂಸ್ಟರ್ ಡೋಸ್ ಯಾವತ್ತಿನಿಂದ ಕೊಡ್ತೀರಾ ಎಂದು ಎಐಸಿಸಿ ಮುಖಂಡ ರಾಹುಲ್ ಗಾಂಧಿ ಪ್ರಶ್ನೆ ಮಾಡಿದ್ದಾರೆ. ಇನ್ನೂ ತುಂಬಾ ಮಂದಿಗೆ ದೇಶದಲ್ಲಿ ಲಸಿಕೆ ಸಿಕ್ಕಿಲ್ಲ. ಕೇವಲ ಶೇಕಡಾ 42 ಮಂದಿಗಷ್ಟೇ ಕಂಪ್ಲೀಟ್ ಡೋಸ್ ನೀಡಲಾಗಿದೆ ಅಷ್ಟೇ ಎಂಬುದನ್ನು ಟ್ವಿಟ್ಟರ್‌ನಲ್ಲಿ ನೆನಪಿಸಿದ್ದಾರೆ. ಈ ನಡುವೆ ಕನಿಷ್ಠ ಒಂದು ಡೋಸ್ ಪಡೆಯದ ಸರ್ಕಾರಿ ನೌಕರರಿಗೆ ವೇತನ ನೀಡಲ್ಲ ಎಂದು ಪಂಜಾಬ್ ಸರ್ಕಾರ ಆದೇಶ ನೀಡಿದೆ. ವೇತನಕ್ಕೆ ವ್ಯಾಕ್ಸಿನ್ ಸರ್ಟಿಫಿಕೇಟ್ ತೋರಿಸೋದು ಕಡ್ಡಾಯ ಪಡಿಸಿದೆ.

Vaccine 1 1

ವಿದೇಶಗಳತ್ತ ಗಮನಿಸಿದರೆ ಇಸ್ರೇಲ್‍ನಲ್ಲಿ ಓಮಿಕ್ರಾನ್‍ಗೆ ಮೊದಲ ಸಾವು ಸಂಭವಿಸಿದೆ. ಹೀಗಾಗಿ ಅಲ್ಲಿ ನಾಲ್ಕನೇ ಡೋಸ್ ವಿತರಣೆಗೆ ಕಸರತ್ತು ಆರಂಭವಾಗಿದೆ. ಈ ಮಧ್ಯೆ, ಆಸ್ಟ್ರೇಲಿಯಾದಲ್ಲಿ ರಕ್ತ ತೆಳುವಾಗಲು ಬಳಸುವ ಹೆಪರಿನ್ ಎಂಬ ಔಷಧಿಯನ್ನು ಓಮಿಕ್ರಾನ್ ಸೋಂಕಿತರ ಮೇಲೆ ಪ್ರಯೋಗಿಸಲಾಗಿದ್ದು, ಇದು ಯಶಸ್ವಿಯಾಗಿದೆ. ಮೂಗಿನ ಮೂಲಕ ಸೋಂಕಿತನಿಗೆ ಔಷಧಿ ನೀಡಿದ ಬಳಿಕ ವೈರಸ್ ವ್ಯಾಪಿಸಿದ ಕುರುಹು ಕಂಡುಬಂದಿಲ್ಲ ಎನ್ನಲಾಗಿದೆ. ಇದನ್ನೂ ಓದಿ: ಪ್ರಳಯ್ ಕ್ಷಿಪಣಿಯ ಯಶಸ್ವಿ ಪರೀಕ್ಷೆ – ದೇಶದ ರಕ್ಷಣಾ ಕ್ಷೇತ್ರಕ್ಕೆ ಆನೆ ಬಲ

Share This Article
Leave a Comment

Leave a Reply

Your email address will not be published. Required fields are marked *