ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಮೆಘನಾ ರಾಜ್ ಅವರು ತಮ್ಮ ಮಗ ರಾಯನ್ ರಾಜ್ ಸರ್ಜಾ ಫೋಟೋವನ್ನು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಆದರೆ ಈ ಬಾರಿ ಅವರು ರಾಯನ್ ತನ್ನ ಗೆಳೆಯರ ಜೊತೆಗೆ ಕುಳಿತು ಆಟವಾಡುತ್ತಿರುವ ವಿಶೇಷವಾದ ಫೋಟೋವನ್ನು ಶೇರ್ ಮಾಡಿದ್ದಾರೆ.
ಮಕ್ಕಳನ್ನು ಪೋಸ್ ನೀಡುವಂತೆ ಮಾಡುವುದು ತುಂಬಾ ಕಷ್ಟ ಆದರೆ ಇದು ತಾಯಂದಿರಿಗೆ ಇಷ್ಟ. ಈ ಮಾತನ್ನು ತಾಯಂದಿರೆಲ್ಲ ಒಪ್ಪುತ್ತೀರಾ..? ಹುಟ್ಟುಹಬ್ಬದ ಶುಭಾಶಯಗಳು ಧಕ್ಷ್ ಎಂದು ಈ ಮುದ್ದಾದ ಫೋಟೋಗಳಿಗೆ ಮೇಘನಾ ರಾಜ್ ಕ್ಯಾಪ್ಷನ್ ನೀಡಿ ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋ ಶೇರ್ ಮಾಡಿದ್ದಾರೆ. ರಾಯನ್ ಸಖತ್ ಕ್ಯೂಟ್ ಆಗಿ ಕಾಣುತ್ತಿದ್ದಾನೆ. ರಾಯನ್ ಗೆಳೆಯರ ಬಳಗ ಎಷ್ಟು ದೊಡ್ಡದಾಗಿದೆ ಎನ್ನುವುದನ್ನು ನಾವು ಈ ಫೋಟೋದಲ್ಲಿ ನೋಡ ಬಹುದಾಗಿದೆ. ಇದನ್ನೂ ಓದಿ: ಕ್ಯೂಟ್ ಡ್ರೆಸ್ ಧರಿಸಿ ಬೊಂಬೆಯಂತೆ ರಾಯನ್ ಪೋಸ್
View this post on Instagram
ರಾಯನ್ ಆಗಮನದ ಬಳಿಕ ಮೇಘನಾ ರಾಜ್ ಬದುಕಿನಲ್ಲಿ ಹೊಸ ಬೆಳಕು ಮೂಡಿದೆ. ಪುತ್ರನ ಆರೈಕೆಯಲ್ಲಿ ಅವರು ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ಸಿನಿಮಾಗಳಲ್ಲಿ ನಟಿಸುವುದಾಗಿಯೂ ಒಪ್ಪಿಕೊಂಡಿದ್ದಾರೆ. ಗೆಳೆಯನ ಬರ್ತ್ ಡೇ ಪಾರ್ಟಿಯಲ್ಲಿ ರಾಯನ್ ಭಾಗವಹಿಸಿದ್ದಾನೆ. ಫ್ರೆಂಡ್ಸ್ ಜೊತೆಗೆ ಸೇರಿ ಆಟ ಆಡಿದ್ದಾನೆ. ಈ ಸಂದರ್ಭದಲ್ಲಿ ಮೇಘನಾ ರಾಜ್ ಅವರು ಕೆಲವು ಫೋಟೋಗಳನ್ನು ಕ್ಲಿಕ್ಕಿಸಿದ್ದಾರೆ. ಅಭಿಮಾನಿಗಳು ಈ ಫೋಟೋವನ್ನು ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. ಇದನ್ನೂ ಓದಿ: 21 ವರ್ಷಗಳ ನಂತ್ರ ಭಾರತಕ್ಕೆ ವಿಶ್ವಸುಂದರಿ ಪಟ್ಟ- ಹರ್ನಾಜ್ ಕೌರ್ ಸಂಧು ಮಿಸ್ ಯೂನಿವರ್ಸ್