ಬೀದರ್: ವಿಧಾನ ಪರಿಷತ್ ಚುನಾವಣೆಗೆ ಮತದಾನ ಮಾಡುವಾಗ ಮತವನ್ನು ತೋರಿಸಿ ಮಾಡಬೇಕು ಎಂಬ ಷರತ್ತನ್ನು ಕಾಂಗ್ರೆಸ್ ನಾಯಕರು ಮತದಾರರಿಗೆ ಹಾಕಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಕೇಂದ್ರ ಸಚಿವ ಭಗವಂತ್ ಖೂಬಾ ವಾಗ್ದಾಳಿ ನಡೆಸಿದರು.
ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2023ಕ್ಕೆ ಈಶ್ವರ್ ಖಂಡ್ರೆ ಮತ್ತು ರಾಜಶೇಖರ ಪಾಟೀಲ್ ಅವರ ತಂಡಕ್ಕೆ ಸೋಲಾಗುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರುವುದಿಲ್ಲ. ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಸರ್ಕಾರ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪೊಳ್ಳು ಧಮ್ಕಿಗೆ ಮತದಾರರು ಹೆದರುವ ಅವಶ್ಯಕತೆ ಇಲ್ಲ. ಸಿಎಂ ಬಂದು ಹೋದ ಮೇಲೆ ಕಾಂಗ್ರೆಸ್ ಈ ರೀತಿ ಮಾಡಿದೆ ಎಂದ ಅವರು, ಕಾಂಗ್ರೆಸ್ ನಾಯಕರಿಂದ ಗಡಿ ಜಿಲ್ಲೆಯಲ್ಲಿ ಕುದುರೆ ವ್ಯಾಪಾರ ವಿಚಾರವಾಗಿ ಆನಂದ ದೇವಪ್ಪ, ಶಿವರಾಜ್ ನರಶೆಟ್ಟಿ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ಈಶ್ವರ್ ಖಂಡ್ರೆ ಹಾಗೂ ರಾಜಶೇಖರ್ ಪಾಟೀಲ್ ಕುಮ್ಮಕ್ಕಿನಿಂದಾಗಿ ಮತದಾರರಿಗೆ ಹಣದ ಆಮಿಷ ಒಡ್ಡಿ ಸೆಳೆಯುವ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಇಂತಹ ಕೆಟ್ಟ, ದುರಾಡಳಿತ, ಭ್ರಷ್ಟಾಚಾರದ ಸರ್ಕಾರವನ್ನು ಇದುವರೆಗೂ ನಾನು ನೋಡಿರಲಿಲ್ಲ: ಸಿದ್ದರಾಮಯ್ಯ
ಈ ವಿಚಾರವಾಗಿ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ ಎಂದು ಕೇಂದ್ರ ಸಚಿವ ಭಗವಂತ್ ಖೂಬಾ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹಾಗೂ ಶಾಸಕ ರಾಜಶೇಖರ ಪಾಟೀಲ್ ವಿರುದ್ಧ ಆರೋಪಿಸಿದರು. ಇದನ್ನೂ ಓದಿ: ಹೆಂಡ್ತಿ ಇಲ್ಲ ಅಂತ ಎರಡನೇ ಮದುವೆ- ಈಕೆಗೆ ಇವನು ನಾಲ್ಕನೆಯವನು!