-ನನ್ನನ್ನು ಯಾದಗಿರಿ, ಗುರುಮಿಠಕಲ್ ಜನ ಕೈಬಿಟ್ರು RSS ಜೊತೆ ಸೇರಿ ಕುತಂತ್ರ ಮಾಡಿ ನನ್ನನ್ನು ಸೋಲಿಸಿದ್ರು
ಯಾದಗಿರಿ: ನಮ್ಮನ್ನು ಯಾದಗಿರಿ ಮತ್ತು ಗುರುಮಿಠಕಲ್ ಜನ ಕೈಬಿಟ್ಟರು, RSS ಜೊತೆ ಸೇರಿ ಕುತಂತ್ರ ಮಾಡಿ ನನ್ನನ್ನು ಸೋಲಿಸಿದರು. ನಾನು ಸೋತ್ರು ಪರವಾಗಿಲ್ಲ ನಮ್ಮ MLC ಅಭ್ಯರ್ಥಿಯನ್ನು ಗೆಲ್ಲಿಸಿ ಸೇಡು ತೀರಿಸಿಕೊಳ್ಳಬೇಕು ಅಂತ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ದಾರೆ.
ವಿಧಾನ ಪರಿಷತ್ ಚುನಾವಣೆ ಸಮಾವೇಶವನ್ನುದ್ದೇಶಿ ಈ ಬಗ್ಗೆ ಯಾದಗಿರಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರಿಗೆ ಹೇಳಲು ಏನು ಇಲ್ಲ, ನಾವು ಮಾಡಿದ ಕೆಲಸವನ್ನು ಮುಂದುವರೆಸಿಕೊಂಡು ಹೋಗುವ ಶಕ್ತಿಯೂ ಇಲ್ಲ. ಹಲವಾರು ಅಭಿವೃದ್ಧಿ ಕೆಲಸಗಳು ನಿಂತು ಹೋಗಿವೆ. ಕೆಲವೇ ಭಾಗಕ್ಕೆ ಹಣ ಕೊಡುತ್ತಿದ್ದಾರೆ. ಹಾಗಾದರೆ ಈ ರಾಜ್ಯದ ಅಭಿವೃದ್ಧಿ ಹೇಗೆ ಸಾಧ್ಯ? ಮನುಷ್ಯ ಆರೋಗ್ಯವಾಗಿರಬೇಕಾದರೆ ಮನುಷ್ಯನ ದೇಹದ ಎಲ್ಲಾ ಅಂಗಗಳು ಎಲ್ಲಾ ಸರಿ ಇರಬೇಕು. ಎಲ್ಲಾ ಕಡೆ ಸಮನಾದ ಅನುದಾನ ಕೊಡಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಜ್ ಕುಟುಂಬದಿಂದ ಗಂಧದಗುಡಿಯ 3ನೇ ಪ್ರಯೋಗ
ಕೇಂದ್ರ ಸಚಿವನ ಮಗ ರೈತರ ಮೇಲೆ ಜೀಪ್ ನಿಂದ ಗುದ್ದಿ ಸಾಯಿಸಿದ ಇದನ್ನು ಯಾರಾದರೂ ಕೇಳಿದ್ರಾ?. ರೈತರ ಹತ್ತಿರ ಹೋಗಿ ಮಾತನಾಡಿಲ್ಲ, ಕಾನೂನು ಬಹಳ ಒಳ್ಳೆಯದಿದೆ, ಅವರನ್ನ ಮನವೋಲಿಸಲಾಗಲಿಲ್ಲ, ಉತ್ತರಪ್ರದೇಶ, ಪಂಜಾಬ್, ಉತ್ತರಾಖಂಡ್ ಎಲೆಕ್ಷನ್‍ನಿಂದ ಕೃಷಿ ಕಾಯ್ದೆ ವಾಪಸ್ ತೆಗೆದುಕೊಂಡಿದ್ದಾರೆ. 700 ಮಂದಿ ರೈತರು ಹೋರಾಟದಲ್ಲಿ ಪ್ರಾಣ ಕಳೆದುಕೊಂಡರು ಅವರ ಮಕ್ಕಳನ್ನು ಯಾರು ನೋಡಿಕೊಳ್ಳುತ್ತಾರೆ? ಅವರ ವಿಧ್ಯಾಭ್ಯಾಸಕ್ಕೆ ಯಾರು ಹೊಣೆ ಎಂದು ಆಢಳಿತ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಅಪ್ಪು ಕನಸು ನನಸು- ಗಂಧದ ಗುಡಿ ಸಾಕ್ಷ್ಯಚಿತ್ರದ ಟೈಟಲ್ ಟೀಸರ್ ಔಟ್