ನವದೆಹಲಿ: ಮಾಲಿನ್ಯ ನಿಯಂತ್ರಣಕ್ಕಾಗಿ 5 ಜನರಿರುವ ಟಾಸ್ಕ್ ಫೋರ್ಸ್ ಹಾಗೂ 40 ಜನರ ತಂಡದ 17 ಸ್ಕ್ವಾಡ್ ರಚನೆ ಮಾಡಲಾಗುವುದು ಎಂದು ದೆಹಲಿ ವಾಯುಗುಣ ಮಟ್ಟದ ನಿರ್ವಹಣಾ ಆಯೋಗ ನಿನ್ನೆ ಮಾಹಿತಿ ನೀಡಿದೆ.
ಮಾಲಿನ್ಯ ನಿಯಂತ್ರಣಕ್ಕೆ ಏನು ಮಾಡಬಹುದು ಎಂಬುದರ ಬಗ್ಗೆ 24 ಗಂಟೆಗಳಲ್ಲಿ ವರದಿ ನೀಡಿ ಎಂಬ ಸುಪ್ರೀಂಕೋರ್ಟ್ ಕಟು ಎಚ್ಚರಿಕೆ ಬೆನ್ನಲ್ಲೇ ಈ ಮಾಹಿತಿ ಸಲ್ಲಿಸಲಾಗಿದೆ.
ಅದರನ್ವಯ ಮಾಲಿನ್ಯ ನಿಯಂತ್ರಣಕ್ಕಾಗಿ ಈಗಾಗಲೇ ತೆಗೆದುಕೊಂಡಿರುವ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ಇದರ ಮೇಲ್ವಿಚಾರಣೆ ನೋಡಿಕೊಳ್ಳಲು ರಾಷ್ಟ್ರ ರಾಜಧಾನಿ ವಲಯಕ್ಕೆ ಸೇರುವ ರಾಜ್ಯಗಳಿಂದ 5 ಜನರಿರುವ ಟಾಸ್ಕ್‌ಫೋರ್ಸ್ ರಚನೆ ಮಾಡಲಾಗುವುದು. 40 ಮಂದಿ ಇರುವ 17 ಪ್ಲೆಯಿಂಗ್ ಸ್ಕ್ವಾಡ್‍ಗಳು ಪ್ರತಿನಿತ್ಯ ಮಾಹಿತಿ ನೀಡಲಿವೆ. ಈ ಮಾಹಿತಿಯ ಆಧಾರದಲ್ಲಿ ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಮರು ಪರಿಶೀಲಿಸುವ ಅಧಿಕಾರವನ್ನು ಟಾಸ್ಕ್‌ಫೋರ್ಸ್‍ಗೆ ನೀಡಲಾಗಿದೆ ಎಂದು ಆಯೋಗ ಸುಪ್ರೀಂಗೆ ಸಲ್ಲಿಸಿರುವ ಅಫಿಡವಿಟ್‍ನಲ್ಲಿ ಹೇಳಿದೆ. ಇದನ್ನೂ ಓದಿ: ಉದ್ಘಾಟನೆ ವೇಳೆ ಒಡೆದ ತೆಂಗಿನಕಾಯಿಂದ ಬಿರುಕು ಬಿಟ್ಟ 1.16ಕೋಟಿ ರೂ. ವೆಚ್ಚದ ರಸ್ತೆ!
ಈ ನಿಯಮಗಳನ್ನು ಕಟ್ಟುನಿಟ್ಟಾಗಿ ದೆಹಲಿ ಮತ್ತು ರಾಷ್ಟ್ರ ರಾಜಧಾನಿ ವಲಯದಲ್ಲಿ ಪಾಲಿಸುವಂತೆ ಸರ್ಕಾರಕ್ಕೆ ಸುಪ್ರಿಂಕೋರ್ಟ್ ಹೇಳಿದೆ. ಆಯೋಗ ಸಲ್ಲಿಸಿರುವ ಅಫಿಡವಿಟ್ ಅನ್ನು ಸೂಕ್ಷ್ಮವಾಗಿ ಕೋರ್ಟ್ ಅವಲೋಕಿಸಿದೆ. ಈ ನಿಯಮಗಳನ್ನು ಗಂಭೀರವಾಗಿ ಜಾರಿ ಮಾಡಬೇಕು. ಮುಂದಿನ ಶುಕ್ರವಾರ ಈ ಕುರಿತು ವಿಚಾರಣೆ ನಡೆಸಲಾಗುತ್ತದೆ ಎಂದು ಮುಖ್ಯ ನಾಯಮೂರ್ತಿ ಎನ್.ವಿ ರಮಣ ಅವರಿದ್ದ ಪೀಠ ಹೇಳಿದೆ. ಇದನ್ನೂ ಓದಿ: ಮಧ್ಯಾಹ್ನ ನಿದ್ದೆ ಮಾಡುವ ಸೊಸೆಗೆ ಗೂಸಾ ಕೊಟ್ಟ ಅತ್ತೆ, ಮಾವ
ಪಾಕಿಸ್ತಾನದಿಂದ ಮಾಲಿನ್ಯ: ದೆಹಲಿ ಮತ್ತು ಸುತ್ತಮುತ್ತಲಿನ ನಗರಗಳಲ್ಲಿ ಉಂಟಾಗುತ್ತಿರುವ ಮಾಲಿನ್ಯಕ್ಕೆ ಪಾಕಿಸ್ತಾನದಿಂದ ಬರುತ್ತಿರುವ ಹೊಗೆ ಕಾರಣ ಎಂದು ಉತ್ತರ ಪ್ರದೇಶ ಸರ್ಕಾರ ನಿನ್ನೆ ಕೋರ್ಟ್‍ಗೆ ಹೇಳಿದೆ. ಇದನ್ನೂ ಓದಿ: ಜನವರಿ 1 ರಿಂದ ಎಟಿಎಂ ಶುಲ್ಕ ಹೆಚ್ಚಳ
ಕಾರ್ಖಾನೆಗಳನ್ನು ಮೆಚ್ಚುವಂತೆ ಸುಪ್ರೀಂ ಸೂಚನೆ ನೀಡಿರುವುದಕ್ಕೆ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶ ಸರ್ಕಾರ ಪಾಕಿಸ್ತಾನ ಕಾರಣ ಎಂದು ಹೇಳಿದೆ. ಈ ವಾದಕ್ಕೆ ಕೋಪಗೊಂಡ ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ ಪಾಕಿಸ್ತಾನದ ಕಾರ್ಖಾನೆಗಳನ್ನು ಮುಚ್ಚಿಸಬೇಕಾ? ಎಂದು ಪ್ರಶ್ನಿಸಿದ್ದಾರೆ.