ಬಾರ್‌ನಲ್ಲಿ ಹಣ ಸಿಕ್ಕಿಲ್ಲ, ಎಣ್ಣೆ ಮುಟ್ಟಿಲ್ಲ – ಕಾಫಿನಾಡಲ್ಲಿ ಪ್ರಾಮಾಣಿಕ ಕಳ್ಳರು

Public TV
1 Min Read
CKM LIQUER

– ಈ ಹಿಂದೆ ಕಾಸ್ಟ್ಲಿ ಎಣ್ಣೆ ಮುಟ್ಟಿಲ್ಲ ಲೋಕಲ್ ಬ್ರ್ಯಾಂಡ್ ಬಿಟ್ಟಿಲ್ಲ

ಚಿಕ್ಕಮಗಳೂರು: ನಾಲ್ಕು ಬಾರ್‌ಗಳ ಬೀಗ ಒಡೆದು ಕಳ್ಳತನಕ್ಕೆ ಯತ್ನಿಸಿರುವ ಕಳ್ಳರು ಹಣ ಸಿಗದಿದ್ದಾಗಲೂ ಎಣ್ಣೆ ಮುಟ್ಟದೆ ಹಣ ಸಿಗಲಿಲ್ಲವೆಂದು ಪ್ರಾಮಾಣಿಕವಾಗಿ ಬರಿಗೈಲಿ ವಾಪಸ್ ಹೋದ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ.

liquor bottle

ಬೆಳಗಿನ ಜಾವ 3 ಗಂಟೆ ಸುಮಾರಿಗೆ ತಾಲೂಕಿನ ಮೂಡಿಗೆರೆ ಪಟ್ಟಣದ ಚಂದನ್ ಬಾರ್, ಬಣಕಲ್ ಗ್ರಾಮದ ಸಂಭ್ರಮ್ ಬಾರ್ ಸೇರಿದಂತೆ ಗೋಣಿಬೀಡು ಹಾಗೂ ಚೀಕನಹಳ್ಳಿಯಲ್ಲಿ ಕಳ್ಳರು ನಾಲ್ಕು ಬಾರ್‌ಗಳ ಬೀಗ ಒಡೆದು ಕಳ್ಳತನಕ್ಕೆ ಯತ್ನಿದ್ದರು. ಆದರೆ, ಕಳ್ಳರಿಗೆ ನಾಲ್ಕು ಬಾರ್‍ನಲ್ಲೂ ಹಣ ಸಿಗಲಿಲ್ಲ. ಹಣ ಸಿಗದಿದ್ದಾಗ ಕಳ್ಳರು ಮದ್ಯವನ್ನು ಮುಟ್ಟದೆ ವಾಪಸ್ ಆಗಿದ್ದಾರೆ. ಇದನ್ನು ಕಂಡ ಸ್ಥಳೀಯರು ಈ ಕಳ್ಳರು ಎಣ್ಣೆ ಹೊಡೆಯುವುದಿಲ್ಲ. ಇವರು ಹಣದ ಕಳ್ಳರು ಅನಿಸುತ್ತದೆ ಎಂದು ಕಾಮಿಡಿ ಮಾಡಿದ್ದಾರೆ. ಇದನ್ನೂ ಓದಿ: ವಸತಿ ಶಾಲೆಯ 13 ಮಕ್ಕಳಲ್ಲಿ ಕೊರೊನಾ ದೃಢ – ಪೋಷಕರಲ್ಲಿ ಆತಂಕ

Liquor Shops 1 copy

ಬಾರ್‌ಗಳ ಅಕ್ಕಪಕ್ಕದ ಅಂಗಡಿಗಳಲ್ಲಿನ ಸಿಸಿಟಿವಿಯಲ್ಲಿ ಕಳ್ಳರ ಕೈಚಳಕ ಸೆರೆಯಾಗಿದೆ. ಎಲ್ಲರೂ ಮುಖಕ್ಕೆ ಮಂಕಿ ಕ್ಯಾಪ್ ಹಾಕಿಕೊಂಡು ಬಂದಿದ್ದರು ಎಂಬುದು ಖಾತ್ರಿಯಾಗಿದೆ. ಮೂಡಿಗೆರೆ, ಬಣಕಲ್ ಹಾಗೂ ಗೋಣಿಬೀಡು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಕೊರೊನಾ ಎರಡನೇ ಹಂತದ ಲಾಕ್‍ಡೌನ್ ಟೈಂನಲ್ಲಿ ಚಿಕ್ಕಮಗಳೂರು ನಗರದ ಬಾರ್‌ಗೆ ಕಳ್ಳರು ಕನ್ನ ಹಾಕಿದ್ದರು. ಈ ವೇಳೆ ಕಳ್ಳರು ಹಣ ಹಾಗೂ ಕಾಸ್ಟ್ಲಿ ಎಣ್ಣೆ ಮುಟ್ಟಿರಲಿಲ್ಲ. ಲೋಕಲ್ ಬ್ರ್ಯಾಂಡ್ ಬಿಟ್ಟಿರಲಿಲ್ಲ. ಆದರೆ, ಈಗ ಮೂಡಿಗೆರೆಯಲ್ಲಿ ಬಾರ್ ಬೀಗ ಹೊಡೆದಿರುವ ಚೋರರು ಹಣ ಸಿಗದಿದ್ದಾಗ ಎಣ್ಣೆಯನ್ನೂ ಮುಟ್ಟದೆ ವಾಪಸ್ ಆಗಿರುವುದು ಸ್ಥಳೀಯಲ್ಲಿ ಆಶ್ಚರ್ಯ ಮೂಡಿಸಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಮೂಡಿಗೆರೆ ಪೊಲೀಸರು ಪ್ರಾಮಾಣಿಕ ಕಳ್ಳರಿಗಾಗಿ ಬಲೆ ಬೀಸಿದ್ದಾರೆ. ಇದನ್ನೂ ಓದಿ: ವಿದೇಶಗಳಲ್ಲಿ ಓಮಿಕ್ರಾನ್ ಅಬ್ಬರ – ರಾಜ್ಯದಲ್ಲಿ ವ್ಯಾಕ್ಸಿನ್ ಪಡೆಯಲು ಕ್ಯೂ ನಿಂತ ಜನ

Share This Article
Leave a Comment

Leave a Reply

Your email address will not be published. Required fields are marked *