ಹೋರ್ಡಿಂಗ್ಸ್ ತೆಗೆದಿದ್ದಕ್ಕೆ ಕಾಂಗ್ರೆಸ್ ಮಾಜಿ ಶಾಸಕನಿಂದ ಎಸ್‍ಡಿಎಂಸಿ ಸಿಬ್ಬಂದಿ ಮೇಲೆ ಹಲ್ಲೆ

Public TV
2 Min Read
Former Congress MLA

ನವದೆಹಲಿ: ಹೋರ್ಡಿಂಗ್‍ಗಳು ಮತ್ತು ಪೋಸ್ಟರ್‌ಗಳನ್ನು ತೆಗೆದು ಹಾಕಿದ್ದಕ್ಕೆ ಮಾಜಿ ಕಾಂಗ್ರೆಸ್ ಶಾಸಕರೊಬ್ಬರು ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಸ್‍ಡಿಎಂಸಿ) ಸಿಬ್ಬಂದಿಯ ಮೇಲೆ ಲಾಠಿ ಪ್ರಹಾರ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Former Congress MLA

ಈ ಘಟನೆ ಸಂಬಂಧ ಪೊಲೀಸರು ಎಫ್‍ಐಆರ್ ದಾಖಲಿಸಿಕೊಳ್ಳುವುದಾಗಿ ಶುಕ್ರವಾರ ತಿಳಿಸಿದ್ದಾರೆ. ಆದರೆ ಇದೀಗ ಕಾಂಗ್ರೆಸ್ ಮಾಜಿ ಶಾಸಕ ಮೊಹಮ್ಮದ್ ಆಸಿಫ್ ಖಾನ್ ಹಲ್ಲೆಗೊಳಗಾದವರು ಎಸ್‍ಡಿಎಂಸಿ ಸಿಬ್ಬಂದಿ ಎಂಬುವುದೇ ನನಗೆ ತಿಳಿದಿರಲಿಲ್ಲ. ಈ ಘಟನೆ ಕುರಿತಂತೆ ನನಗೆ ಎಸ್‍ಡಿಎಂಸಿ ಕಡೆಯಿಂದ ಯಾವುದೇ ಕರೆ ಅಥವಾ ಸಂದೇಶ ಕೂಡ ಬಂದಿಲ್ಲ ಎಂದು ಹೇಳುತ್ತಿದ್ದಾರೆ.

ವೈರಲ್ ಆಗುತ್ತಿರುವ ವೀಡಿಯೋದಲ್ಲಿ ಮೊಹಮ್ಮದ್ ಆಸಿಫ್ ಖಾನ್ ಕೋಲಿನಿಂದ ನಾಲ್ಕು ಜನರಿಗೆ ಥಳಿಸಿ ಕಿವಿಗಳನ್ನು ಹಿಡಿದುಕೊಳ್ಳುವಂತೆ ನಿರ್ದೇಶಿಸುತ್ತಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಬೆಂಗಳೂರಿನ ಮತ್ತೊಂದು ಕಾಲೇಜಿನಲ್ಲಿ ಕೊರೊನಾ ಬ್ಲಾಸ್ಟ್ – 12 ವಿದ್ಯಾರ್ಥಿಗಳಿಗೆ ಪಾಸಿಟಿವ್

ಇನ್ನೂ ಈ ಕುರಿತಂತೆ ಪ್ರತಿಕ್ರಿಯಿಸಿರುವ ಮೊಹಮ್ಮದ್ ಆಸಿಫ್ ಖಾನ್ ಅವರು, ಓಖ್ಲಾ ಪ್ರದೇಶದಲ್ಲಿ ನಾನು ಹಾಕಿಸಿದ್ದ ಕಾಂಗ್ರೆಸ್ ಹೋರ್ಡಿಂಗ್‍ಗಳು ಮತ್ತು ಪೋಸ್ಟರ್‌ಗಳನ್ನು ಮಾತ್ರ ತೆಗೆದುಹಾಕಲಾಯಿತು. ಆದರೆ ಇತರ ಪಕ್ಷಗಳ ಪೋಸ್ಟರ್ ಮತ್ತು ಹೋರ್ಡಿಂಗ್‍ಗಳನ್ನು ತೆಗೆದುಹಾಕಿರಲಿಲ್ಲ. ಹೀಗಾಗಿ ನಾನಾ ಈ ಬಗ್ಗೆ ಪ್ರಶ್ನಿಸಿದೆ. ಆದರೆ ಯಾರು ಉತ್ತರಿಸಲಿಲ್ಲ. ಹಾಗಾಗಿ ನಾನು ಅವರಿಗೆ ಪಾಠ ಕಲಿಸಿದೆ. ಆದರೆ ನನಗೆ ಅವರೆಲ್ಲಾ ಯಾರು ಅಂತ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಇಂದು 400 ಗಡಿದಾಟಿದ ಕೊರೊನಾ – 6 ಸಾವು

ಇನ್ನೂ ಹಲ್ಲೆಗೊಳಗಾದವರು ನಾಗರಿಕ ಸಂಸ್ಥೆಗೆ ಸೇರಿದವರಾಗಿದ್ದು, ಈ ವಿಚಾರ ಕುರಿತಂತೆ ಕೇಂದ್ರ ವಲಯದ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಮತ್ತು ಅಧಿಕಾರಿಗಳು ಸೂಕ್ತ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ” ಎಂದು ಹಿರಿಯ ಎಸ್‍ಡಿಎಂಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *