ಬೆಂಗಳೂರು: ನಾನು ಕಾನೂನಿಗೆ ಬದ್ಧನಾಗಿದ್ದೇನೆ. ಯಾವುದೇ ಅಕ್ರಮ ಆಸ್ತಿಗಳನ್ನು ಮಾಡಿಲ್ಲ. ನಾನು ಓಡಾಡುವ ಐಷಾರಾಮಿ ಕಾರು ನನ್ನದಲ್ಲ ಎಂದು ಬಿಬಿಎಂಪಿ ರಸ್ತೆ ಮತ್ತು ಮೂಲಭೂತ ಸೌಕರ್ಯ ವಿಭಾಗದಲ್ಲಿ ದ್ವಿತೀಯ ದರ್ಜೆ ಗುಮಾಸ್ತನಾಗಿ ಕೆಲಸ ಮಾಡಿಕೊಂಡಿದ್ದ ಮಾಯಣ್ಣ ಹೇಳಿಕೆ ನೀಡಿದ್ದಾರೆ.
ನಿನ್ನೆ ಬೆಳಗ್ಗೆ ಎಸಿಬಿ ಅಧಿಕಾರಿಗಳು ಮಾಯಣ್ಣ ಹಾಗೂ ಅವರ ಸಂಬಂಧಿಕರ ಮನೆಯ ಮೇಲೆ ದಾಳಿ ನಡೆಸಿದ ಬಳಿಕ ಕೋಟಿಗಟ್ಟಲೆ ಅಸ್ತಿ ಹೊಂದಿರುವುದು ಬಯಲಾಗಿತ್ತು. ಇದನ್ನೂ ಓದಿ: ಎಸಿಬಿ ಅಧಿಕಾರಿಗಳ ಭರ್ಜರಿ ರಣಬೇಟೆ – 503 ಅಧಿಕಾರಿಗಳು 68 ಕಡೆ ದಾಳಿ..!
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನನಗೆ ಈಗ 50 ಸಾವಿರ ರೂ. ಸಂಬಳ ಬರುತ್ತಿದೆ. ಇದೇ ಹಣದಲ್ಲಿ ನಾನು ಜೀವನವನ್ನು ಸಾಗಿಸುತ್ತಿದ್ದೇನೆ. ಹಾಗೆಯೇ ನಾನೊಬ್ಬ ಪ್ರಥಮ ದರ್ಜೆ ಸಹಾಯಕ. ನನಗೆ ಸ್ವಂತದ ಸಹಿ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ನನಗೆ ಬರುವ ಸಂಬಳ ಸಾಕಾಗ್ತಿಲ್ಲ: ಮಾಯಣ್ಣ
ನಾನು ಫೈನಲ್ ಅಥಾರಿಟಿಯೂ ಅಲ್ಲ. ಯಾವುದೇ ಕಡತದ ಇಲ್ಲವೇ ಕಚೇರಿಯ ನಿರ್ಧಾರವನ್ನೂ ತೆಗೆದುಕೊಳ್ಳಲು ನನ್ನಿಂದ ಸಾಧ್ಯವಿಲ್ಲ. ನಾನು ಯಾವುದರ ನಿರ್ಣಾಯಕನೂ ಅಲ್ಲ. ಕೇವಲ ಫಾರ್ವರ್ಡಿಂಗ್ ಆಫಿಸರ್ ಆಗಿದ್ದೇನೆ ಅಷ್ಟೇ ಎಂದು ಹೇಳಿಕೆ ನೀಡಿದರು.