ಕೇಂದ್ರ ಸರ್ಕಾರಕ್ಕೆ ಬಹುಮತ ಇದ್ರೆ ಸಾಲದು, ಜನರ ಸಹಮತವೂ ಬೇಕು: ಟಿ.ಎ.ಶರವಣ

Public TV
1 Min Read
TA Sarawana

– ಜೆಡಿಎಸ್‍ನಿಂದ 1 ಲಕ್ಷ ರೂ. ಪರಿಹಾರ ನೀಡಿದ್ದೇವೆ

ರಾಯಚೂರು: ಅಕಾಲಿಕ ಮಳೆಯಿಂದಾಗಿ ರೈತರು ಕಂಗಾಲಾಗಿ ಹೋಗಿದ್ದಾರೆ. ರೈತರು ಮನವಿ ಮಾಡಿದ್ರೂ ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆ ಸರಿಯಲ್ಲ. ಸರ್ಕಾರಕ್ಕೆ ಬಹುಮತ ಇದ್ರೆ ಸಾಲದು, ಜನರ ಸಹಮತವೂ ಇರಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಟಿ.ಎ.ಶರವಣ ಹೇಳಿದರು.

TA Sarawana 1

ರಾಯಚೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಕ್ಷಿಣ ಭಾರತದ ಎಲ್ಲ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳು ಬಲಿಷ್ಠವಾಗಿವೆ. ಅದೇ ರೀತಿಯಲ್ಲಿ ರಾಜ್ಯದಲ್ಲಿಯೂ ಜೆಡಿಎಸ್ ಬಲಿಷ್ಠವಾಗುತ್ತಿದೆ. ಜನತಾ ಸರ್ಕಾರ ಜಾರಿಗೆ ತರಲು ಜೆಡಿಎಸ್ ಮಿಷನ್ 123 ನಡೆಸಿದ್ದೇವೆ. ಯಾವ ಸರ್ಕಾರವೂ ನೀಡದೇ ಇರುವ ಜನಪ್ರಿಯ ಕಾರ್ಯಕ್ರಮವನ್ನು ಕೊಡಲು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪ್ಲಾನ್ ಮಾಡಿದ್ದಾರೆ. 26 ಸಾವಿರ ಕೋಟಿ ಸಾಲ ಮನ್ನಾ ಮಾಡಿದ ಕೀರ್ತಿ ಕುಮಾರಸ್ವಾಮಿ ಅವರಿಗೆ ದಕ್ಕುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ:  ಬಕಾಸುರರ ರೀತಿ ನುಂಗೋದು ಅಭಿವೃದ್ಧಿಯಾ?: ಹೆಚ್‍ಡಿಕೆ ತಿರುಗೇಟು

ಜಿಲ್ಲೆಯ ಲಿಂಗಸುಗೂರಿನ ಬೋಗಪುರ ಗ್ರಾಮದಲ್ಲಿ ರೈತ ಆತ್ಮಹತ್ಯೆ ಪ್ರಕರಣ ಕುರಿತು ಮಾತನಾಡಿದ ಅವರು, ಜಿಲ್ಲಾಡಳಿತ ರೈತರ ವಿಚಾರದಲ್ಲಿ ವಿಫಲವಾಗಿದೆ. ಮೊದಲೇ ಕೊರೊನಾ ಮತ್ತು ಮಳೆಯಿಂದಾಗಿ ರೈತರು ಕಂಗಾಲಾಗಿದ್ದಾರೆ. ಅಧಿಕಾರಿಗಳ ಹಾಗೂ ಸಚಿವರ ತಂಡ ರಚನೆ ಆಗಬೇಕು. ಬೆಳೆಹಾನಿಯಾದ ರೈತರಿಗೆ ಸ್ಥಳದಲ್ಲೇ ಪರಿಹಾರ ನೀಡಬೇಕು. ಆದರೆ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿಲ್ಲ ಎಂದು ಕಿಡಿಕಾರಿದರು.

hdk

ಕೂಡಲೇ ಸರ್ಕಾರ ಮೃತರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಬೇಕು. ಮೃತ ರೈತನ ಕುಟುಂಬದ ಓರ್ವ ಸದಸ್ಯನಿಗೆ ಸರ್ಕಾರಿ ಕೆಲಸ ಕೊಡಿಸಬೇಕು. ಜೆಡಿಎಸ್ ವತಿಯಿಂದ ಮೃತ ರೈತ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ ನೀಡುತ್ತಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಅಭಿನವ ಶ್ರೀ ನಮಗೆ ಧೈರ್ಯ ತುಂಬಿ ಸನ್ಮಾರ್ಗದಲ್ಲಿ ಮುನ್ನಡೆಸುವ ಮಾರ್ಗದರ್ಶಕರಾಗಿದ್ದರು: ಸಿಸಿ ಪಾಟೀಲ್

Share This Article
Leave a Comment

Leave a Reply

Your email address will not be published. Required fields are marked *