159 ಕೋಟಿ ವೆಚ್ಚ – ಈ ವರ್ಷವೇ ರಾಯಣ್ಣ ಸೈನಿಕ ಶಾಲೆ ಪ್ರಾರಂಭ

Public TV
1 Min Read

ಬೆಂಗಳೂರು: ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಹೆಸರಿನಲ್ಲಿ ಸೈನಿಕ ಶಾಲೆಯನ್ನು ಪ್ರಾರಂಭ ಮಾಡುತ್ತಿದ್ದೇವೆ. ಈಗಾಗಲೇ 109 ಕೋಟಿ ಖರ್ಚಾಗಿದೆ. ಈ ವರ್ಷ 50 ಕೋಟಿ ಖರ್ಚು ಮಾಡಿ, ಅದನ್ನು ಪೂರ್ಣ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

sangolli rayanna

ಕನಕ ಜಯಂತಿ ಹಿನ್ನೆಲೆ ಶಾಸಕರ ಭವನದಲ್ಲಿರುವ ಕನಕದಾಸ ಪ್ರತಿಮೆಗೆ ಮಲಾರ್ಪಣೆ ಮಾಡಿ ಮಾತನಾಡಿದ ಅವರು, ಕನಕದಾಸರ ದಾಸ ಶ್ರೇಷ್ಠರು ಅವರು ಮೊದಲು ರಾಜ ಆಗಿದ್ದರು. ಕನ್ನಡ ನಾಡು ಕಂಡ ದಾಸ ಸಾಹಿತ್ಯಕ್ಕೆ ಅಪಾರ ಕೊಡುಗೆ ಕೊಟ್ಟ ತತ್ವಜ್ಞಾನಿ. ವಿಶ್ವಮಾನ ಕಲ್ಪನೆ ಸಾರಿದವರು, ಸತ್ಯವನ್ನು ಹೇಳಿದವರು. ಕನಕದಾಸರು ಶಿಗ್ಗಾಂವ ತಾಲೂಕಿನಲ್ಲಿ ಜನಿಸಿದರು. ಇವರ ಕರ್ಮ ಭೂಮಿ ಕಾಗಿನೆಲೆಯಾಗಿದೆ. ರಾಜ್ಯಾದ್ಯಂತ ದಾಸರ ಪದಗಳನ್ನು ಹಾಡುತ್ತಾ ಜನರಿಗೆ ಜೀವದ ದಾರಿ ತೋರಿಸಿದವರು. ಕುಲ ಕುಲ ಎಂದು ಬಡೆದಾಡದಿರಿ ಎಂದು ಮಾರ್ಮಿಕವಾಗಿ ಹೇಳಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಬೊಮ್ಮಾಯಿ ನಿಮ್ಮ ಹನಿಮೂನ್ ಕಾಲ ಮುಗಿದಿದೆ: ಸಿದ್ದರಾಮಯ್ಯ

kanaka dasa jayanthi

ಅವರ ತತ್ವ ಆದರ್ಶಗಳು ಇವತ್ತಿಗೂ ಪ್ರಸ್ತುತವಾಗಿದೆ. ಅವರ ವಿಚಾರಗಳನ್ನು ಇಟ್ಟುಕೊಂಡು ಬಾಡಗ್ರಾಮದಲ್ಲಿ ಕನಕದಾಸರ ಅರಮನೆ ನಿರ್ಮಾಣ ಮಾಡಲಾಗಿದೆ. ಕಾಗಿನೆಲೆಯಲ್ಲಿ ಸ್ಮಾರಕವನ್ನು ಕೂಡ ಮಾಡಿದ್ದೇವೆ. ಕನಕದಾಸರ ತ್ರಿಪದಿಗಳು, ದಾಸರ ಪದಗಳು ಆದರ್ಶ, ಸಂಕಲ್ಪವಾಗುವ ದಿನವಾಗಿದೆ ಎಂದರು. ಇದನ್ನೂ ಓದಿ: ವಿಧಾನ ಪರಿಷತ್ ಚುನಾವಣೆ, ಅಭ್ಯರ್ಥಿಗಳ ಆಯ್ಕೆಯಲ್ಲಿ ಬಿಕ್ಕಟ್ಟು – ಕಾಂಗ್ರೆಸ್‍ನಿಂದ ಟಿಕೆಟ್ ಘೋಷಣೆ ವಿಳಂಬ

ಅದೇ ಮಾದರಿಯಲ್ಲಿ ಸಂಗೊಳ್ಳಿ ರಾಯಣ್ಣ ಸಮಾಧಿ ಅಭಿವೃದ್ಧಿ ಮಾಡುತ್ತಿದ್ದೇವೆ. ಈಗಾಗಲೇ 109 ಕೋಟಿ ಖರ್ಚಾಗಿದೆ. ಈ ವರ್ಷ 50 ಕೋಟಿ ಖರ್ಚು ಮಾಡಿ, ಅದನ್ನು ಪೂರ್ಣ ಮಾಡುತ್ತೇವೆ. ಯುವಕರಿಗಾಗಿ ಆದರ್ಶಪ್ರಾಯ ಮತ್ತು ಶಿಸ್ತಿನ ಶಾಲೆ ಮಾಡುತ್ತಿದ್ದೇವೆ. ಈ ಬಗ್ಗೆ ಕೇಂದ್ರದ ರಾಜನಾಥ್ ಸಿಂಗ್ ಅವರ ಜೊತೆಗೆ ಮಾತನಾಡಿದ್ದೇನೆ. ಜೊತೆಗೆ ಪತ್ರನೂ ಬರೆದಿದ್ದೇನೆ. ಸೈನಿಕ ಶಾಲೆ ಪೂರ್ಣವಾದ ಮೇಲೆ ಕೇಂದ್ರ ರಕ್ಷಣಾ ಇಲಾಖೆ ತೆಗೆದುಕೊಳ್ಳಬೇಕು. ಇದು ರಾಜ್ಯ ಸರ್ಕಾರದ ಇಚ್ಛೆಯಾಗಿದೆ. ಕೆಲಸ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *