1.5 ಕೋಟಿ ರೂ. ಮೌಲ್ಯದ ಹಾವಿನ ವಿಷ ಮಾರಾಟ – ಇಬ್ಬರು ಅರೆಸ್ಟ್

Public TV
1 Min Read
sanke

ಭುವನೇಶ್ವರ: 1.5 ಕೋಟಿ ರೂ. ಮೌಲ್ಯದ ಹಾವಿನ ವಿಷ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಒಡಿಶಾ ಪೊಲೀಸರು ಬಂಧಿಸಿದ್ದು, ಹಾವಿನ ವಿಷವನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳು 1 ಕೆಜಿ ಹಾವಿನ ವಿಷವನ್ನು 1.5 ಕೋಟಿ ರೂ.ಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬ ಸುಳಿವು ಸಿಕ್ಕ ನಂತರ ಸ್ಥಳಕ್ಕೆ ಧಾವಿಸಿದ ದಿಯೋಗರ್ ಪೊಲೀಸರ ಬಲೆಗೆ ಕೈಲಾಶ್ ಚಂದ್ರ ಸಾಹು ಮತ್ತು ರಂಜನ್ ಕುಮಾರ್ ಪಾಧಿ ಸಿಕ್ಕಿಬಿದ್ದಿದ್ದಾರೆ.

police

ಈ ಕುರಿತು ಮಾತನಾಡಿದ ದಿಯೋಗರ್ ಉಪವಿಭಾಗೀಯ ಪೊಲೀಸ್ ಅಧಿಕಾರಿ ಪ್ರತ್ಯೂಷ್ ಮೊಹಾಪಾತ್ರ, ಶುಕ್ರವಾರ ಸಂಬಲ್ಪುರ ಜಿಲ್ಲೆಯ ಸಿಂದೂರ್‍ಪಂಕ್ ನಲ್ಲಿ ಇಬ್ಬರು ವ್ಯಕ್ತಿಗಳು ಹಾವಿನ ವಿಷವನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಸಿಕ್ಕಿತ್ತು. ನಮ್ಮ ತಂಡವು ಗ್ರಾಹಕರಂತೆ ಆ ವ್ಯಕ್ತಿಗಳನ್ನು ಭೇಟಿ ಮಾಡಿತ್ತು. ಇದನ್ನೂ ಓದಿ:  ರಾಜ್ಯದಲ್ಲಿ ಅಕಾಲಿಕ ಮಳೆಗೆ ಜನಜೀವನ ಅಸ್ತವ್ಯಸ್ತ – ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಕಟ್ಟೆಚ್ಚರ

ಈ ವೇಳೆ ಕೈಲಾಶ್ ಚಂದ್ರ ಸಾಹು ಮತ್ತು ರಂಜನ್ ಕುಮಾರ್ ಪಾಧಿ ಗಾಜಿನ ಪಾತ್ರೆಯಲ್ಲಿ 1 ಕೆಜಿ ಹಾವಿನ ವಿಷ ಮಾರಾಟ ಮಾಡುತ್ತಿದ್ದರು. ಸ್ಥಳದಲ್ಲೇ ಇಬ್ಬರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

Snake Venom

ಪತ್ತೆಯಾದ ವಸ್ತು ಹಾವಿನ ವಿಷವೇ ಎಂಬುದನ್ನು ಖಚಿತಪಡಿಸಲು ಪ್ರಯೋಗಾಲಯಕ್ಕೆ ಕಳುಹಿಸುತ್ತೇವೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ದೇಶದ ಮೊದಲ ಬಾಸ್ಕೆಟ್‌ಬಾಲ್‌ ಲೀಗ್‍ಗೆ ಅದ್ಧೂರಿ ಚಾಲನೆ

Share This Article
Leave a Comment

Leave a Reply

Your email address will not be published. Required fields are marked *