ಮಾವುತನಿಂದ ಬಾಬ್ ಕಟ್ ಕೂದಲು ಬಾಚಿಸಿಕೊಂಡ ಆನೆ – ವೀಡಿಯೋ ವೈರಲ್

Public TV
1 Min Read
elephant

ಚೆನ್ನೈ: ಆನೆಯೊಂದು ತನ್ನ ಬಾಬ್ ಕಟ್ ಕೂದಲನ್ನು ಮಾವುತನ ಕೈಯಲ್ಲಿ ಬಾಚಿಸಿಕೊಳ್ಳುತ್ತಿರುವ ಕ್ಯೂಟ್ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಜಗತ್ತಿನ ಅತ್ಯಂತ ಕ್ಯೂಟ್ ಪ್ರಾಣಿಗಳ ಲಿಸ್ಟ್ ನಲ್ಲಿ ಆನೆ ಕೂಡ ಒಂದು. ಆನೆ ತುಂಬಾ ಸೂಕ್ಷ್ಮ ಹಾಗೂ ಬುದ್ಧಿವಂತ ಪ್ರಾಣಿಯಾಗಿದೆ. ಕೆಲವು ದಿನಗಳ ಹಿಂದೆ ಆನೆ ವ್ಯಕ್ತಿಗಳಿಂದ ಬಾಳೆ ಹಣ್ಣು ಕಿತ್ತು ತಿನ್ನುವ, ಆನೆ ಡ್ಯಾನ್ಸ್ ಮಾಡುವ ಹೀಗೆ ಅನೇಕ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಆನೆಯೊಂದು ಮಾವುತನ ಕೈಯಿಂದ ತನ್ನ ಬಾಬ್ ಕಟ್ ಕೂದಲನ್ನು ಬಾಚಿಸಿಕೊಳ್ಳುತ್ತಿರುವ ಕ್ಯೂಟ್ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದನ್ನೂ ಓದಿ: ಚುನಾವಣೆಯಲ್ಲಿ ಗೆಲ್ಲುವವರೆಗೂ ರಾಜ್ಯ ವಿಧಾನಸಭೆಗೆ ಕಾಲಿಡಲ್ಲ: ಎನ್.ಚಂದ್ರಬಾಬು ನಾಯ್ಡು ಪ್ರತಿಜ್ಞೆ

elephant 2

ವೀಡಿಯೋದಲ್ಲಿ ಮಾವುತ ಆನೆಯ ಕೂದಲನ್ನು ಬಾಚಣಿಗೆಯಿಂದ ಬಾಚುತ್ತಿರುವುದನ್ನು ನೋಡಬಹುದಾಗಿದೆ. ಆನೆ ತನ್ನ ಕಾಲುಗಳನ್ನು ಕೆಳಗೆ ಬಾಗಿಸಿ ಕುಳಿತುಕೊಂಡು ಮಾವುತನ ಕೈಯಲ್ಲಿ ಕೂದಲನ್ನು ಬಾಚಿಸಿಕೊಂಡಿದೆ. ಅಲ್ಲದೇ ಮಾವುತ ಕೂದಲನ್ನು ಬಾಚುತ್ತಿದ್ದರೆ ಆನೆ ಸಖತ್ ಎಂಜಾಯ್ ಮಾಡಿದೆ. ಜೊತೆಗೆ ಆನೆಯ ಹಣೆಯ ಮೇಲೆ ದೊಡ್ಡ ತಿಲಕ ಇಡಲಾಗಿದ್ದು, ಆನೆ ನೋಡಲು ಬಹಳ ಮುದ್ದಾಗಿ ಕಾಣಿಸಿಕೊಂಡಿದೆ. ಇದನ್ನೂ ಓದಿ: ಹೆಸರುವಾಸಿಯಾಗಿದ್ದ ಕೇರಳದ ಟೀ ಮಾರಾಟಗಾರ ನಿಧನ

ಈ ವೀಡಿಯೋ ಕೊಯಮತ್ತೂರಿನ ತೆಕ್ಕಂಪಟ್ಟಿ ಗ್ರಾಮದ್ದಾಗಿದ್ದು, ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಹಲವಾರು ಲೈಕ್ಸ್ ಮತ್ತು ಕಾಮೆಂಟ್‍ಗಳ ಸುರಿಮಳೆಯೇ ಹರಿದು ಬಂದಿದೆ. ಕೆಲವರು ಆನೆ ನೋಡಿ ಸೋ ಕ್ಯೂಟ್ ಎಂದರೆ, ಮತ್ತೆ ಕೆಲವರು ಹ್ಯಾಂಡ್‍ಸಮ್ ಬಾಯ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *