ಒಂದು ಕೆನ್ನೆಗೆ ಹೊಡೆದಾಗ ಮತ್ತೊಂದು ಕೆನ್ನೆ ತೋರಿಸಿದರೆ ಸಿಗೋದು ಸ್ವಾತಂತ್ರ್ಯವಲ್ಲ, ಭಿಕ್ಷೆ: ಕಂಗನಾ

Public TV
1 Min Read
Kangana Ranaut 1

ನವದೆಹಲಿ: 1947ರಲ್ಲಿ ಪಡೆದದ್ದು ಸ್ವಾತಂತ್ರ್ಯವಲ್ಲ, ಭಿಕ್ಷೆ ಎಂದು ಹೇಳಿಕೆ ನೀಡಿ ವಿವಾದಕ್ಕೆ ಕಾರಣವಾಗಿರುವ ಬಾಲಿವುಟ್‌ ನಟಿ ಕಂಗನಾ ರಣಾವತ್‌, ಮಹಾತ್ಮ ಗಾಂಧೀಜಿ ಅವರ ಅಹಿಂಸಾ ಮಾರ್ಗದ ವಿಚಾರವಾಗಿ ಗೇಲಿ ಮಾಡಿದ್ದಾರೆ.

kangana ranauts

“ಮತ್ತೊಂದು ಕೆನ್ನೆ ತೋರಿಸಿದರೆ ಸಿಗುವುದು ಸ್ವಾತಂತ್ರ್ಯವಲ್ಲ, ಭಿಕ್ಷೆ” ಎಂದು ಹೇಳಿಕೆ ನೀಡಿ ಕಂಗನಾ ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದಾರೆ. ಇದನ್ನೂ ಓದಿ: ಶ್ರೀಕಿ ಜೊತೆ ಪ್ರಿಯಾಂಕ್ ಖರ್ಗೆಗೆ ಸಂಪರ್ಕ, 50 ಸಾವಿರ ಕೋಟಿ ಆಸ್ತಿ – ಕಾರ್ಣಿಕ್ ಆರೋಪ

kangana 1

ಹಳೇ ಪತ್ರಿಕೆಯೊಂದರ ಲೇಖನವನ್ನು ಪೋಸ್ಟ್‌ ಮಾಡಿ ಇನ್‌ಸ್ಟಾ ಗ್ರಾಂನಲ್ಲಿ ಬರೆದಿರುವ ಕಂಗನಾ, ನೇತಾಜಿ ಅವರನ್ನು ಹಸ್ತಾಂತರಿಸಲು ಗಾಂಧಿ ಮತ್ತು ಇತರರ ಸಮ್ಮತಿ ಎಂದು ಶೀರ್ಷಿಕೆಯಿರುವ 1940ರಲ್ಲಿ ಪ್ರಕಟಗೊಂಡಿದ್ದ ಲೇಖನವನ್ನು ಹಂಚಿಕೊಂಡಿದ್ದರು. ಅದರ ಜೊತೆಗೆ, ನೀವು ಗಾಂಧಿ ಮತ್ತು ನೇತಾಜಿಯನ್ನು ಒಟ್ಟಿಗೆ ಅಭಿಮಾನಿಸಲು ಸಾಧ್ಯವಿಲ್ಲ. ನಿರ್ಧರಿಸಿ ಆಯ್ಕೆ ಮಾಡಿಕೊಳ್ಳಿ. ವಿರೋಧಿಗಳನ್ನು ಎದುರಿಸಲಾಗದೆ, ಹೋರಾಡಲು ಬಿಸಿರಕ್ತವಿಲ್ಲದ, ಆದರೆ ಅಧಿಕಾರ ದಾಹಿಗಳಾಗಿದ್ದ ಕುತಂತ್ರಿಗಳು ಸ್ವಾತಂತ್ರ್ಯಕ್ಕಾಗಿ ಹೋರಾಡಿದವರನ್ನು ತಮ್ಮ ಯಜಮಾನರಿಗೆ ಹಸ್ತಾಂತರಿಸಿದರು. ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆ ತೋರಿಸು ಎಂದು ಗಾಂಧಿ ಮಾರ್ಗ ಅನುಸರಿಸಿದರೆ ಸಿಗುವುದು ಸ್ವಾತಂತ್ರ್ಯವಲ್ಲ, ಭಿಕ್ಷೆ ಎಂದು ಕಂಗನಾ ಬರೆದುಕೊಂಡಿದ್ದಾರೆ.

kangana1

ಗಾಂಧೀಜಿ ಅವರು ಭಗತ್‌ ಸಿಂಗ್‌ ಅಥವಾ ಸುಭಾಷ್‌ ಚಂದ್ರ ಬೋಸ್‌ ಅವರಿಗೆ ಬೆಂಬಲ ನೀಡಲಿಲ್ಲ. ನಿಮ್ಮ ನಾಯಕರನ್ನು ಬುದ್ಧಿವಂತಿಕೆಯಿಂದ ಆರಿಸಿಕೊಳ್ಳಿ. ಜನರು ತಮ್ಮ ಇತಿಹಾಸ ಮತ್ತು ಅವರ ನಾಯಕರನ್ನು ಅರಿತುಕೊಳ್ಳುವ ಸಮಯ ಬಂದಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಜ್‍ಕುಮಾರ್ ರಾವ್ – ಫೋಟೋ ವೈರಲ್

ಭಾರತಕ್ಕೆ 1947ರಲ್ಲಿ ಸಿಕ್ಕಿದ್ದು ಭಿಕ್ಷೆ, 2014ರಲ್ಲಿ ಸಿಕ್ಕಿದ್ದು ನಿಜವಾದ ಸ್ವಾತಂತ್ರ್ಯ ಎಂದು ಹೇಳಿಕೆ ನೀಡಿ ನಟಿ ಕಂಗನಾ ವಿವಾದಕ್ಕೆ ಗುರಿಯಾಗಿದ್ದರು. ಅವರ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿ, ಅವರಿಗೆ ನೀಡಿರುವ ಪದ್ಮಶ್ರೀ ಪ್ರಶಸ್ತಿಯನ್ನು ಹಿಂಪಡೆಯಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು. ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡು ಕಂಗನಾ ಮತ್ತೊಂದು ಪೋಸ್ಟ್‌ ಕೂಡ ಹಾಕಿದ್ದರು.

Share This Article
Leave a Comment

Leave a Reply

Your email address will not be published. Required fields are marked *