ನೆಲಮಂಗಲ: ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ರಾಯರಪಾಳ್ಯ ಗ್ರಾಮದಲ್ಲಿ ದೈತ್ಯ ಹೆಬ್ಬಾವೊಂದು ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಕೆಲಕಾಲ ಆತಂಕ ಮೂಡಿಸಿತ್ತು.
ರಾಯರಪಾಳ್ಯ ಗ್ರಾಮದ ಸುಗ್ಗಯ್ಯ ಎಂಬವರ ಮನೆಯಲ್ಲಿ ಕಾಣಿಸಿಕೊಂಡಿತ್ತು. ಗ್ರಾಮದ ಕೆರೆಯ ಬಳಿಯೇ ಇರುವ ಸುಗ್ಗಯ್ಯ ಅವರ ಮನೆಗೆ ಕೆರೆಯಲ್ಲಿ ವಾಸವಾಗಿದ್ದ ದೈತ್ಯ ಹೆಬ್ಬಾವು ಬಂದಿತ್ತು. ಅದನ್ನು ಕಂಡು ಮನೆಯವರು ಆತಂಕಕ್ಕೆ ಒಳಗಾದರು. ಇದನ್ನೂ ಓದಿ: ʼಅಪ್ಪುʼಗೆ ನನ್ನ ದೃಷ್ಟಿಯೇ ತಾಗಿತೇನೊ ಅನಿಸುತ್ತೆ: ತಮ್ಮನ ನೆನೆದು ಶಿವಣ್ಣ ಕಣ್ಣೀರು
ನಂತರ ಹೆಬ್ಬಾವನ್ನು ರಕ್ಷಣೆ ಮಾಡಲು ಗ್ರಾಮದ ಶ್ರೀಕಾಂತ್ ಮತ್ತು ಗುಬ್ಬಣ್ಣಸ್ವಾಮಿ ನೇತೃತ್ವದ ಸ್ನೇಹಿತರ ತಂಡಕ್ಕೆ ಮಾಹಿತಿ ನೀಡಿದ್ದಾರೆ. ಕೂಡಲೆ ಸ್ಥಳಕ್ಕೆ ಬಂದ ಶ್ರೀಕಾಂತ್ ಹಾಗೂ ಸ್ನೇಹಿತರು ಹೆಬ್ಬಾವನ್ನು ರಕ್ಷಣೆ ಮಾಡಿ ನೆಲಮಂಗಲ ವಲಯ ಅರಣ್ಯಾಧಿಕಾರಿಗಳ ವಶಕ್ಕೆ ನೀಡಿದ್ದಾರೆ. ಇದನ್ನೂ ಓದಿ: ಅರವಿಂದ್ ಕೈಯಿಂದ ಅವಾರ್ಡ್ ಪಡೆದ ಡಿಯು