ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪುನೀತ್‍ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.
ಫಿಲ್ಮ್ ಚೇಂಬರ್ ಆಯೋಜಿಸಿದ್ದ ಪುನೀತ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪುನೀತ್ ರಾಜ್‍ಕುಮಾರ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡುತ್ತವೆ. ಅಪ್ಪು ಹೆಸರನ್ನು ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸು ಮಾಡುತ್ತೇನೆ ಎಂದು ತಿಳಿಸಿದರು.
ಕರ್ನಾಟಕ ರತ್ನ ಕರ್ನಾಟಕ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದ್ದು. ಈ ಪ್ರಶಸ್ತಿಯನ್ನು ಯಾವುದೇ ಕ್ಷೇತ್ರದಲ್ಲಿ ಅಸಾಧಾರಣ ಕೊಡುಗೆಯನ್ನು ನೀಡಿದ ವ್ಯಕ್ತಿಗಳಿಗೆ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು 1992ರಲ್ಲಿ ಪ್ರಾರಂಭಿಸಲಾಯಿತು. ಒಟ್ಟಾರೆ ಇಲ್ಲಿಯವರೆಗೆ 9 ವ್ಯಕ್ತಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಕುವೆಂಪು(ಸಾಹಿತ್ಯ) 1992, ರಾಜಕುಮಾರ್(ಸಿನಿಮಾ) 1992, ಎಸ್. ನಿಜಲಿಂಗಪ್ಪ(ರಾಜಕೀಯ)1999, ಸಿಎನ್‍ರಾವ್(ವಿಜ್ಞಾನ) 2000, ಡಾ.ದೇವಿ ಪ್ರಸಾದ್ ಶೆಟ್ಟಿ(ವೈದ್ಯಕೀಯ) 2001, ಭೀಮಸೇನ್ ಜೋಷಿ(ಸಂಗೀತಾ) 2005, ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ(ಸಮಾಜ ಸೇವೆ) 2007, ದೇ. ಜವರೇಗೌಡ(ಸಾಹಿತ್ಯ) 2008, ವೀರೇಂದ್ರ ಹೆಗ್ಗಡೆ(ಸಮಾಜ ಸೇವೆ) 2009ರಲ್ಲಿ ಕರ್ನಾಟಕ ರತ್ನ ಲಭಿಸಿತ್ತು.