ಹಾಡಹಗಲೇ ಕೇರಳದಲ್ಲಿ RSS ಕಾರ್ಯಕರ್ತನ ಬರ್ಬರ ಹತ್ಯೆ

Public TV
1 Min Read
RSS worker 1

ತಿರುವನಂತಪುರಂ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತನನ್ನು ಹಾಡಹಗಲೇ ಹತ್ಯೆ ಮಾಡಿದ ಘಟನೆ ಕೇರಳದ ಮಂಬರಂ ಪಟ್ಟಣದಲ್ಲಿ ನಡೆದಿದೆ.

ಮೃತ ಸಂಜೀತ್ (27) ತನ್ನ ಹೆಂಡತಿಯನ್ನು ಕೆಲಸದ ಸ್ಥಳಕ್ಕೆ ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಬೆಳಗ್ಗೆ 9 ಗಂಟೆ ಸುಮಾರಿಗೆ ತನ್ನ ಪತ್ನಿಯ ಎದುರೇ ದುಷ್ಕರ್ಮಿಗಳು ಹತ್ಯೆಯನ್ನು ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಇಡೀ ದೇಶದಲ್ಲೇ ಕಾಂಗ್ರೆಸ್ ಅಧೋಗತಿಗೆ ತಲುಪಿದೆ – ಕಾಂಗ್ರೆಸ್ ವಿರುದ್ಧ ಅಶೋಕ್ ವಾಗ್ದಾಳಿ

RSS worker 2

ಈ ಕೃತ್ಯದ ಹಿಂದೆ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‍ಡಿಪಿಐ) ಕಾರ್ಯಕರ್ತರ ಪಾತ್ರ ಇದೆ ಎಂದು ಬಿಜೆಪಿ ಶಂಕಿಸಿದೆ. ಸಂಜೀತ್ ತನ್ನ ಹೆಂಡತಿಯನ್ನು ಕೆಲಸದ ಸ್ಥಳಕ್ಕೆ ಕರೆದುಕೊಂಡು ಹೋಗುತಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಅವರನ್ನು ಹಿಂಬಲಿಸಿದ್ದು, ತಮ್ಮ ವಾಹನದಿಂದ ಸಂಜೀತ್ ಬೈಕಿಗೆ ಡಿಕ್ಕಿ ಹೊಡೆದಿದ್ದಾರೆ. ಬೈಕ್ ನಿಂದ ಕೆಳಗೆ ಬಿದ್ದಾಗ ಪತ್ನಿಯ ಎದುರೇ ಸಂಜೀತ್ ಅವರನ್ನು ಕೊಚ್ಚಿ ಕೊಲೆ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

crime

ಆರ್‍ಎಸ್‍ಎಸ್ ಕಾರ್ಯಕರ್ತನ ಹತ್ಯೆಯನ್ನು ಖಂಡಿಸಿರುವ ಬಿಜೆಪಿ ರಾಜ್ಯಧ್ಯಕ್ಷ ಕೆ ಸುರೇಂದ್ರನ್ ಇದೊಂದು ಯೋಜಿತ ಕೊಲೆ ಎಂದು ಆರೋಪಿಸಿದ್ದು, ರಾಜ್ಯದಲ್ಲಿ ಇಂತಹ ಘಟನೆಗಳು ನಡೆಯಲು ಪೊಲೀಸರು ಮತ್ತು ರಾಜ್ಯ ಸರ್ಕಾರದ ವೈಫಲ್ಯವೇ ಕಾರಣ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಆಹಾರ ನಿಗಮದ ವಿಭಾಗೀಯ ಕೇಂದ್ರ ಕಚೇರಿಗೆ ಪಿಯೂಷ್ ಗೋಯಲ್ ಚಾಲನೆ

ಕಳೆದ ಹತ್ತು ದಿನಗಳಲ್ಲಿ ಇದು ಎರಡನೇ ಕೊಲೆಯಾಗಿದೆ. ಎಸ್‍ಡಿಪಿಐ ಮತ್ತು ಸಿಪಿಐ ನಡುವೆ ಮೈತ್ರಿಯಿಲ್ಲ. ಹೀಗಾಗಿ ನಾನು ಈ ಹತ್ಯೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಕೊಲೆಯಲ್ಲಿ ಭಾಗಿಯಾದವರನ್ನು ಬಂಧಿಸುವಂತೆ ಸಿಎಂ ಪಿಣರಾಯಿ ವಿಜಯನ್‍ಗೆ ವಿನಂತಿಸುತ್ತೇನೆ. ಪೊಲೀಸರು ಮತ್ತು ಸರ್ಕಾರ ಅಪರಾಧಿಗಳನ್ನು ರಕ್ಷಿಸುತ್ತಿದೆ ಎಂದು ಸುರೇಂದ್ರನ್ ಕಿಡಿಕಾರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *