ತೆಲಂಗಾಣ: ಊಟ ಮುಗಿಸಿ ಬರುತ್ತಿದ್ದಾಗ ವಿದ್ಯುತ್ ತಂತಿ ತಗುಲಿ ಯಾದಗಿರಿಯ ಯುವಕರಿಬ್ಬರು ಸಾವು!

Public TV
1 Min Read
youth died 1

ಯಾದಗಿರಿ: ಹೋಟೆಲ್‌ನ ಮೇಲ್ಚಾವಣಿಯಲ್ಲಿ ಕುಳಿತು ಊಟ ಮಾಡಿ ಬರುವ ವೇಳೆ ವಿದ್ಯುತ್ ತಂತಿ ತಗುಲಿ ಯುವಕರಿಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ.

ಯಾದಗಿರ ಜಿಲ್ಲೆಯ ಗುರುಮಠಕಲ್ ಪಟ್ಟಣದ ಇಬ್ಬರು ಯುವಕರು ಸಾವನ್ನಪ್ಪಿದ ಘಟನೆ ತೆಲಂಗಾಣ ರಾಜ್ಯದ ನಾರಾಯಣಪೇಟ್‌ನ ಸಿಂಗಾರಂ ಕ್ರಾಸ್ ಬಳಿ ಜರುಗಿದೆ. ವಂಶಿರಾಜ್ ಪತ್ತಿ (21) ಮತ್ತು ರವಿ ಹೂಗಾರ (22) ಸಾವನ್ನಪ್ಪಿದ ದುರ್ದೈವಿಗಳು. ಇದನ್ನೂ ಓದಿ: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳು- ಚಿಕಿತ್ಸೆ ಫಲಿಸದೇ ಪ್ರಿಯಕರ ಸಾವು!

electric shock

ಗುರಮಿಠಕಲ್ ಪಟ್ಟಣದ ನಿವಾಸಿಗಳಾಗಿದ್ದ ಯುವಕರು ಕೆಲಸದ ನಿಮಿತ್ತ ನಾರಾಯಣಪೇಟಗೆ ಹೋಗಿದ್ದರು. ಈ ವೇಳೆ ಹೋಟೆಲ್ ಒಂದರಲ್ಲಿ ಊಟಕ್ಕೆ ತೆರಳಿದ್ದರು. ಊಟ ಮುಗಿಸಿಕೊಂಡು ಕೆಳಗಿಳಿಯುತ್ತಿರುವಾಗ, ಹೋಟೆಲ್ ಮೇಲೆಯೇ ಹಾದು ಹೋದ ವಿದ್ಯುತ್ ತಂತಿ ಓರ್ವ ಯುವಕನಿಗೆ ತಗುಲಿದೆ. ಈ ಗೆಳೆಯನನ್ನು ರಕ್ಷಿಸಲು ಹೋದ ಇನ್ನೊಬ್ಬನಿಗೂ ವಿದ್ಯುತ್ ತಗುಲಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿ – ರೋಹಿತ್ ಶರ್ಮಾಗೆ ನಾಯಕ ಪಟ್ಟ

POLICE JEEP

ಹೋಟೆಲ್ ಮಾಲೀಕ ಮತ್ತು ವಿದ್ಯುತ್ ಇಲಾಖೆಯ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎನ್ನಲಾಗಿದೆ. ಈ ಸಂಬಂಧ ನಾರಾಯಣಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *