ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ರಸ್ತೆಗೆ ಪುನೀತ್ ರಾಜಕುಮಾರ್ ರಸ್ತೆ ಎಂದು ನಾಮಕರಣ ಮಾಡುವ ಮೂಲಕ ಅಗಲಿದ ಸ್ಯಾಂಡಲ್‍ವುಡ್ ನಟನಿಗೆ ತವರು ಜಿಲ್ಲೆಯಲ್ಲಿ ಗೌರವ ಸಲ್ಲಿಸಲಾಗಿದೆ.
ಕೊಳ್ಳೇಗಾಲ ಪಟ್ಟಣದ ತಾಲೋಕು ಪಂಚಾಯ್ತಿ ಕಚೇರಿಯಿಂದ ಅಚ್ಗಾಳ್ ಯಾತ್ರಿನಿವಾಸದವರೆಗೆ ಒಂದು ಕಿಲೋಮೀಟರ್ ಉದ್ದವಿರುವ ರಸ್ತೆಗೆ ರಾಜರತ್ನ ಪುನೀತ್ ರಾಜಕುಮಾರ್ ರಸ್ತೆ ಎಂದು ನಾಮಕರಣ ಮಾಡಲಾಗಿದ್ದು, ನಾಮ ಫಲಕಕ್ಕೆ ಕೊಳ್ಳೇಗಾಲ ಶಾಸಕ ಎನ್. ಮಹೇಶ್ ಪೂಜೆ ಸಲ್ಲಿಸುವ ಮೂಲಕ ಅನಾವರಣಗೊಳಿಸಿದರು. ಇದನ್ನೂ ಓದಿ: 46 ವರ್ಷಕ್ಕೆ ನನ್ನ ತಮ್ಮ ದೇವರಿಗೆ ತುಂಬಾ ಇಷ್ಟ ಆಗ್ಬಿಟ್ಟ: ಶಿವಣ್ಣ
ಈ ವೇಳೆ ಮಾತನಾಡಿದ ಅವರು, ಡಾ ರಾಜ್ ಕುಟುಂಬದವರು ನಮ್ಮ ದೇಶ ಹಾಗು ರಾಜ್ಯದ ಸಾಂಸ್ಕøತಿಕ, ಸಾಮಾಜಿಕ ರಾಯಭಾರಿಗಳಾಗಿದ್ದಾರೆ. ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ.ಈ ಕುಟುಂಬದ ಋಣ ತೀರಿಸಲು ಸಾಧ್ಯವಿಲ್ಲ ಎಂದರು. ಇದನ್ನೂ ಓದಿ: ಅನ್ನ ಸಂತರ್ಪಣೆ ವೇಳೆ ಪುನೀತ್ ನೆನೆದು ಕಣ್ಣೀರಿಟ್ಟ ಅಶ್ವಿನಿ
ಇಂದು ಬೆಂಗಳೂರಿನಲ್ಲಿ ಪುನೀತ್ ರಾಜ್‍ಕುಟುಂಬಸ್ಥರು ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಸಾವಿರಾರು ಅಭಿಮಾನಿಗಳು ಬಂದು ಊಟ ಮಾಡಿ ಕುಟುಂಬಕ್ಕೆ ಆಶೀರ್ವಾದಿಸಿದ್ದಾರೆ.