ನೀವಿಬ್ಬರು ಇಲ್ಲ ಅನ್ನೋದು ನಂಬಲಾಗ್ತಿಲ್ಲ – ಅಪ್ಪು, ಅಂಬಿ ನೆನೆದು ಸುಮಲತಾ ಭಾವುಕ

Public TV
2 Min Read
ambareesh

ಬೆಂಗಳೂರು: ಸ್ಯಾಂಡಲ್‍ವುಡ್ ಹಿರಿಯ ನಟಿ ಹಾಗೂ ಸಂಸದೆ ಸುಮಲತಾ ಅಂಬರೀಶ್ ಅವರು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಮತ್ತು ರೆಬೆಲ್ ಸ್ಟಾರ್ ಅಂಬರೀಶ್ ಒಟ್ಟಿಗೆ ಇರುವ ಕೆಲವು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ನೀವಿಬ್ಬರು ಇಲ್ಲ ಎಂಬುವುದನ್ನು ನಂಬಲು ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

SUMALATHA

ಚಂದನವನದಲ್ಲಿ ಅಂಬರೀಶ್ ಅಂದರೆ ಎಲ್ಲರಿಗೂ ಅಚ್ಚುಮೆಚ್ಚು. ಎಲ್ಲರೂ ರೆಬಲ್ ಸ್ಟಾರ್ ಅನ್ನು ಪ್ರೀತಿಯಿಂದ ಅಂಬಿ ಮಾಮು ಎಂದು ಕರೆಯುತ್ತಿದ್ದರು. ಅಂಬರೀಶ್ ಹಾಗೂ ಸಮಲತಾ ಅವರು ಡಾ. ರಾಜ್‍ಕುಮಾರ್ ಅವರ ಕುಟುಂಬಕ್ಕೆ ಹಿಂದಿನಿಂದಲೂ ಬಹಳ ಆಪ್ತರು. ರಾಜ್‍ಕುಮಾರ್ ಅವರ ಮನೆಯಲ್ಲಿ ಯಾವುದೇ ಸಮಾರಂಭ ಹಾಗೂ ಕಾರ್ಯಕ್ರಮಗಳನ್ನು ಮಿಸ್ ಮಾಡದೇ ಅಂಬಿ ಹಾಜರ್ ಆಗುತ್ತಿದ್ದರು. ಹೀಗೆ ಅಣ್ಣಾವ್ರ ಕುಟುಂಬದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಅಂಬರೀಶ್ ಹಾಗೂ ಸುಮಲತಾ ದಂಪತಿ ಪುನೀತ್‍ರನ್ನು ಚಿಕ್ಕವರಾಗಿದ್ದಗಿನಿಂದಲೂ ನೋಡಿಕೊಂಡು ಬಂದಿದ್ದಾರೆ. ಆದರೆ ಇದೀಗ ಪುನೀತ್ ನಿಧನರಾಗಿದ್ದು, ಈ ಸತ್ಯವನ್ನು ಸುಮಲತಾ ಅವರಿಗೆ ಇಂದಿಗೂ ಅರಗಿಸಿಕೊಳ್ಳಲು ಆಗುತ್ತಿಲ್ಲ. ಇದನ್ನೂ ಓದಿ: ಹಾಟ್ ಬೆಡಗಿ ಪೂನಂ ಪಾಂಡೆ ಆಸ್ಪತ್ರೆಗೆ ದಾಖಲು

puneeth 9

ಸದ್ಯ ಪುನೀತ್ ಜೊತೆಗೆ ಉತ್ತಮ ಒಡನಾಟ ಹೊಂದಿದ್ದ ಅಂಬರೀಶ್ ಅವರ ಒಂದಷ್ಟು ಫೋಟೋಗಳನ್ನು ಸುಮಲತಾ ಅವರು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಇಬ್ಬರನ್ನು ನೆನಪಿಸಿಕೊಂಡಿದ್ದಾರೆ. ಒಂದು ಫೋಟೋದಲ್ಲಿ ಅಂಬಿ ಜೊತೆಗೆ ಸ್ಮೈಲ್ ಮಾಡುತ್ತಾ ಪುನೀತ್ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದರೆ, ಮತ್ತೊಂದರಲ್ಲಿ ಅಪ್ಪು ಹೆಗಲ ಮೇಲೆ ಅಂಬಿ ಕೈ ಹಾಕಿ ಫೋಟೋಗೆ ಪೋಸ್ ನೀಡಿದ್ದಾರೆ. ಇನ್ನೊಂದರಲ್ಲಿ ಅಂಬರೀಶ್ ಹಾಗೂ ಅಪ್ಪು ಇಬ್ಬರು ಜೊತೆಯಾಗಿ ಸ್ಮೈಲ್ ಮಾಡುತ್ತಾ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

ಫೋಟೋ ಜೊತೆಗೆ, ಅಪ್ಪು, ಅಂಬಿ ನೀವಿಬ್ಬರು ಇಲ್ಲ ಎಂಬುವುದನ್ನು ನಮಗೆ ಈಗಲೂ ನಂಬಲು ಆಗುತ್ತಿಲ್ಲ. ನಮ್ಮ ಹೃದಯ ಇದನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಿದೆ ಎಂದು ಸುಮಲತಾ ಅವರು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ಕೆಲವು ವರ್ಷಗಳ ಹಿಂದೆ ಅಪ್ಪು, ಅಂಬಿ ಒಟ್ಟಿಗೆ ಅಭಿನಯಿಸಿದ್ದ ದೊಡ್ಮನೆ ಹುಡ್ಗ ಸಿನಿಮಾದ ಪ್ರೋಮೋ ಇವೆಂಟ್‍ನ ಲಿಂಕ್ ಅನ್ನು ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ರಾಜರತ್ನ ಅಪ್ಪು ಅಗಲಿ 12ನೇ ದಿನ – ಅರಮನೆ ಮೈದಾನದಲ್ಲಿ ಅಭಿಮಾನಿಗಳಿಗೆ ಅನ್ನ ಸಂತರ್ಪಣೆ

ಹೌದು, 2016ರಲ್ಲಿ ಪುನೀತ್ ರಾಜ್‍ಕುಮಾರ್, ಅಂಬರೀಶ್, ಸುಮಲತಾ, ಭಾರತಿ ವಿಷ್ಣುವರ್ಧನ್ ಅವರು ದೊಡ್ಮನೆ ಹುಡುಗ ಸಿನಿಮಾದಲ್ಲಿ ಒಟ್ಟಿಗೆ ಅಭಿನಯಿಸಿದ್ದರು. ಈ ಸಿನಿಮಾ ಬಾಕ್ಸ್ ಆಫೀಸ್‍ನಲ್ಲಿ ಭಾರೀ ಸದ್ದು ಮಾಡಿತ್ತು.

Share This Article